ಆರೋಗ್ಯ ಸಚಿವರ ಭೇಟಿ, ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವೀಟ್ ಅಭಿಯಾನ

By Kannadaprabha News  |  First Published Sep 26, 2019, 12:19 PM IST

ಬೇಡಿಕೆಗಳ ಈಡೇರಿಕೆಗಾಗಿ ಸೋಶಿಯಲ್ ಮೀಡಿಯಾ ಕ್ಯಾಂಪೇನ್‌ಗಳು ನಡೆಯುತ್ತಲೇ ಇರುತ್ತವೆ. ಇದೀಗ ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಟ್ವಿಟರ್ ಅಭಿಯಾನ ನಡೆಸಲು ಸಿದ್ಧತೆ ನಡೆದಿದೆ. ಎರಡನೇ ಹಂತದ ಅಭಿಯನಾ ಇದಾಗಿದ್ದು, ಜಿಲ್ಲೆಗೆ ಶ್ರೀರಾಮುಲು ಭೇಟಿ ಹಿನ್ನೆಲೆ ಟ್ವಿಟರ್ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ.


ಮಡಿಕೇರಿ(ಸೆ. 26): ಬೇಡಿಕೆಗಳ ಈಡೇರಿಕೆಗಾಗಿ ಸೋಶಿಯಲ್ ಮೀಡಿಯಾ ಕ್ಯಾಂಪೇನ್‌ಗಳು ನಡೆಯುತ್ತಲೇ ಇರುತ್ತವೆ. ಇದೀಗ ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಟ್ವಿಟರ್ ಅಭಿಯಾನ ನಡೆಸಲು ಸಿದ್ಧತೆ ನಡೆದಿದೆ. ಎರಡನೇ ಹಂತದ ಅಭಿಯನಾ ಇದಾಗಿದ್ದು, ಜಿಲ್ಲೆಗೆ ಶ್ರೀರಾಮುಲು ಭೇಟಿ ಹಿನ್ನೆಲೆ ಟ್ವಿಟರ್ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ.

ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ಗೆ ಕೊಡಗಿನಲ್ಲಿ ಎರಡನೇ ಹಂತದ ಟ್ವಿಟರ್ ಅಭಿಯಾನ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಕೊಡಗು ಪ್ರವಾಸ ನಡೆಸುವ ದಿನವಿಡೀ ಟ್ವಿಟರ್ ಮೂಲಕ‌ ಆಸ್ಪತ್ರೆ ನಿರ್ಮಾಣಕ್ಕಾಗಿ ಒತ್ತಾಯ ಮಾಡಲು ನಿರ್ಧಾರ ಮಾಡಲಾಗಿದೆ.

Tap to resize

Latest Videos

ನೇಪಾಳಕ್ಕೆ ಕನ್ನಡಿಗರ ‘ಟ್ರೈಂಪ್ ಟೈಗರ್’ ಸವಾರಿ..! ಯುವಕರ ರೋಚಕ ರೈಡಿಂಗ್ ಹೇಗಿತ್ತು ನೋಡಿ

ಇಂದು ಸಂಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವೀಟ್ ಅಭಿಯಾನ ನಡೆಸಲು ನಿರ್ಧರಿಸಲಾಗಿದ್ದು, ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಲು ತಯಾರಿ ನಡೆದಿದೆ. ಟ್ವೀಟ್ ಕ್ಯಾಂಪೇನ್‌ಗಾಗಿ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಮೂಡಿಸಿದೆ. ಇಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಟ್ವಿಟರ್ ಅಭಿಯಾನ ನಡೆಯಲಿದೆ.

'ನನ್ನ ಟೀಕಿಸೋರಿಗೆ ಯೋಗ್ಯತೆ ಇದ್ಯಾ'..? ಸಿದ್ದುಗೆ ಎಚ್‌ಡಿಕೆ ಟಾಂಗ್..!

ಜನರು #WeNeedEmergencyHospitalInKodagu ಎಂದು ಬರೆದು ಟ್ವಿಟ್ ಮಾಡುತ್ತಿದ್ದು @sriramulubjp ಮತ್ತು @CMofKarnataka ಗೆ ಟ್ಯಾಗ್ ಮಾಡಲು ನಿರ್ಧಾರ ಮಾಡಲಾಗಿದೆ. ನಾಳೆ ಕೊಡಗು ಜಿಲ್ಲೆಯ ಪ್ರವಾಸ ಕೈಗೊಂಡಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಆಸ್ಪತ್ರೆ ನಿರ್ಮಾಣದ ಆಗ್ರಹವನ್ನು ತಲುಪಿಸಲು ಟ್ವಿಟರ್ ಅಭಿಯಾನ ಕೈಗೊಳ್ಳಲಾಗಿದೆ.

ದೈತ್ಯ ಸಾಹಸ: ಇಸ್ರೋ ಸಾಧನೆಗೆ ಪಾಕ್‌ನ ಗಗನಯಾತ್ರಿ ಬಹುಪರಾಕ್‌!

ಇಂದು ಟ್ವಿಟರ್ ಅಭಿಯಾನ ನಡೆಸಿ ಸಚಿವರ ಗಮನ ಸೆಳೆಯಲು ಪ್ಲಾನ್ ಮಾಡಲಾಗಿದ್ದು, ಈಗಾಗಲೇ ನೆಟ್ಟಿಗರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವೀಟ್, ಟ್ಯಾಗ್ ಆರಂಭವಾಗಿದೆ.

click me!