ಸಚಿವ ಕೆ.ಎಸ್. ಈಶ್ವರಪ್ಪ ಪುತ್ರಿಯ ಮೊಬೈಲ್ ಫೋನ್ ಕಳ್ಳತನ| ಕಳುವಾಗಿದ್ದ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆ| ಈಶ್ವರಪ್ಪನವರ ಪುತ್ರಿ ಶಾಂತಾ ಕೆ ಅವರಿಗೆ ಸೇರಿದ್ದ ಮೊಬೈಲ್| ಸೆ.13 ರಂದು ಬೆಂಗಳೂರಿನ ಗಾಂಧಿ ಭವನದ ಸಚಿವರ ನಿವಾಸದಿಂದ ಮೊಬೈಲ್ ಕಳುವಾಗಿತ್ತು| ಈ ಸಂಬಂಧ ಬೆಂಗಳೂರಿನ ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಶಾಂತಾ|
ಬಾಗಲಕೋಟೆ(ಸೆ.26): ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರಿಯ ಮೊಬೈಲ್ ಫೋನ್ ಕಳ್ಳತನವಾಗಿತ್ತು. ಇದೀಗ ಈ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.
ಈಶ್ವರಪ್ಪನವರ ಪುತ್ರಿ ಶಾಂತಾ ಕೆ ಅವರಿಗೆ ಮೊಬೈಲ್ ಸೇರಿದ್ದಾಗಿದೆ. ಸೆ.13 ರಂದು ಬೆಂಗಳೂರಿನ ಗಾಂಧಿ ಭವನದ ಸಚಿವರ ನಿವಾಸದಿಂದ ಮೊಬೈಲ್ ಕಳುವಾಗಿತ್ತು. ಈ ಸಂಬಂಧ ಶಾಂತಾ ಅವರು ಬೆಂಗಳೂರಿನ ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ದೂರಿನನ್ವಯ ಕಾರ್ಯಾಚರಣೆ ಆರಂಭಸಿದ್ದ ಪೊಲೀಸರಿಗೆ ಬಾಗಲಕೋಟೆ ಜಿಲ್ಲೆಯ ಬಂಟನೂರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ್ ಎಂಬಾತನ ಬಳಿ ಮೊಬೈಲ್ ಪತ್ತೆಯಾಗಿದೆ. ಹೀಗಾಗಿ ಲೋಕಾಪುರ ಪೋಲಿಸರ ಮೂಲಕ ಮೊಬೈಲ್ ಅನ್ನು ಬೆಂಗಳೂರಿಗೆ ತರಿಸಿಕೊಂಡ ಪೋಲಿಸರು.
ಐಎಮ್ಇಐ ನಂಬರ್ ಮೂಲಕ ಮೊಬೈಲ್ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರು ಪೋಲಿಸರು ಯಶಸ್ವಿಯಾಗಿದ್ದಾರೆ.
ಲಕ್ಷ್ಮಣ ಬಂಡಿವಡ್ಡರ ಬಿಜೆಪಿ ಕಾರ್ಯಕರ್ತ
ಲಕ್ಷ್ಮಣ ಬಂಡಿವಡ್ಡರ ಬಿಜೆಪಿ ಕಾರ್ಯಕರ್ತನಾಗಿದ್ದು, ಬೆಂಗಳೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿಗೆ ಹೋದಾಗ ಮೊಬೈಲ್ ಕದ್ದು ತಂದನಾ ಎನ್ನುವ ಶಂಕೆ ವ್ಯಕ್ತವಾಗಿದೆ. ಮೊಬೈಲ್ ಅನ್ನು ಯಾರು ಕದ್ದರು ಎಂಬ ಪ್ರಶ್ನೆಗೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.