ಶಿವಮೊಗ್ಗ: ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣ

By Girish GoudarFirst Published Jan 25, 2023, 1:34 PM IST
Highlights

ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮಂದಿಗಿದ್ದಾರೆ ನಮನೇನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ ಎಂದು ಅರೋಪಿಸಿದ ಹರೀಶ್. 

ಶಿವಮೊಗ್ಗ(ಜ.25):  ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ತೀರ್ಥಹಳ್ಳಿಯ ಸುರಬಿ ಹೋಟೆಲ್​ನಲ್ಲಿ ನಿನ್ನೆ(ಮಂಗಳವಾರ) ರಾತ್ರಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ಹಾಗೂ ಆಟೋ ಚಾಲಕ ಹರೀಶ್​ ಮೇಲೆ ಹಲ್ಲೆ ಮಾಡಲಾಗಿತ್ತು. ರಾಡ್​ ಮತ್ತು ಬಾಟಲಿಯಿಂದ ಹಲ್ಲೆ ನಡೆಸಿದವರು ಬಿಜೆಪಿ ಕಾರ್ಯಕರ್ತರು ಎನ್ನಲಾಗಿದೆ. 

ಹಲ್ಲೆಗೊಳಗಾದ ಹರೀಶ್‌ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುರಬಿ ಹೋಟೆಲ್​ನಲ್ಲಿ ಊಟ ಮುಗಿಸಿ ಬರುವಾಗ ಅಲ್ಲಿಯೇ ಕುಡಿಯುತ್ತಿದ್ದ ವಿಶು, ಚೇತು, ಕಾರ್ತಿಕ್ ಸೇರಿದಂತೆ ಆರಕ್ಕೂ ಹೆಚ್ಚು ಜನರು ಹರೀಶ್​ ಮೇಲೆ ಹಲ್ಲೆ ಮಾಡಿದ್ದಾರೆ.

ಸಾಗರ: ಕೆರೆಯಲ್ಲಿ ಈಜು ಕಲಿಯಲು ಹೋದ ಮೂವರು, ಓರ್ವ ಯುವಕ ನೀರು ಪಾಲು

ಇನ್ನೂ ಘಟನೆಗೆ ಕಾರಣವಾಗಿದ್ದು, ವಿಶ್ವಾಸ್ ಎಂಬಾತ ಈ ಹಿಂದೆ ಹರೀಶ್ ಕಾರನ್ನು ಡ್ಯಾಮೇಜ್ ಮಾಡಿದ್ದನಂತೆ. ಈ ಕುರಿತಂತೆ ಆರು ತಿಂಗಳ ಹಿಂದೆಯೇ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ವಿಶ್ವಾಸ್ ಕಾರಿನ ಡ್ಯಾಮೇಜ್ ರಿಪೇರಿಯ ಹಣವನ್ನು ಹರೀಶ್‌ಗೆ ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿನ್ನೆ ಹೋಟೆಲ್‌ನಲ್ಲಿ ಹರೀಶ್ ತನ್ನ ಸ್ನೇಹಿತನ ಜೊತೆಗೆ ಊಟಕ್ಕೆ ಹೋಗಿದ್ದ, ಆಗ ವಿಶ್ವಾಸ್ ಮತ್ತವರ ಸ್ನೇಹಿತರು ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದರು. ಅವರುಗಳ ಮಧ್ಯೆ  ವಿಷಯವೊಂದಕ್ಕೆ ಗಲಾಟೆ ನಡೆಯುತ್ತಿತ್ತು. ಇದನ್ನು ಪ್ರಶ್ನಿಸಿ ಮಾತನಾಡಿದ್ದಕ್ಕೆ ಹರೀಶ್ ಮೇಲೆ ಹಲ್ಲೆ ನಡೆದಿದೆ. ಹರೀಶ್‌ಗೆ ಹೊಡೆದು ಹಲ್ಲೆ ಮಾಡಿದ ಗುಂಪು ಆನಂತರ ಬೇಕಾಬಿಟ್ಟಿ ಥಳಿಸಿದೆ. ಬಳಿಕ ಅಲ್ಲಿದ್ದವರು ಜಗಳ ಬಿಡಿಸಿ, ಆಸ್ಪತ್ರೆಗೆ ಹರೀಶ್​ರನ್ನು ದಾಖಲಿಸಿದ್ದಾರೆ.

ಇನ್ನೂ ಹರೀಶ್​ನನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೇ ಕಾಂಗ್ರೆಸ್​ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಇದೀಗ ಹರೀಶ್ ತನ್ನ ಮೇಲೆ ಹಲ್ಲೆ ಮಾಡಿದ ವಿಶ್ವಾಸ್ ಚೇತನ್ ಕಾರ್ತಿಕ್ ಮತ್ತು ಇನ್ನಿತರದ ಮೇಲೆ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದಾನೆ. 

ಗೃಹ ಸಚಿವ ಅರಗ ಜ್ಞಾನೇಂದ್ರ ತಮ್ಮಂದಿಗಿದ್ದಾರೆ ನಮನೇನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ ಎಂದು ಅರೋಪಿಸಿದ್ದಾನೆ. ಈ ಪ್ರಕರಣ ಈಗ ಕಾಂಗ್ರೆಸ್ ವರ್ಸಸ್ ಬಿಜೆಪಿ ಎಂಬ ಸ್ವರೂಪ ಪಡೆದುಕೊಳ್ಳುತ್ತಿದೆ. 

click me!