ತುರುವೇಕೆರೆ ಜೆಡಿಎಸ್‌ ಭದ್ರಕೋಟೆ : ಅಲುಗಾಡಿಸಲು ಸಾಧ್ಯವಿಲ್ಲ

By Kannadaprabha News  |  First Published Apr 10, 2023, 6:57 AM IST

ತುರುವೇಕೆರೆ ವಿಧಾನಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಇದನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.


 ತುರುವೇಕೆರೆ :  ತುರುವೇಕೆರೆ ವಿಧಾನಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಇದನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಚೌದ್ರಿ ಕನ್ವೆಂಷನ್‌ ಹಾಲ್‌ನಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಸೋಲಲು ಮುಖ್ಯ ಕಾರಣ ಅತಿಯಾದ ಆತ್ಮವಿಶ್ವಾಸ. ಹಾಗಾಗಿ ಕೆಲವು ಕಡೆ ನಾವು ಮೈ ಮರೆತಿದ್ದರಿಂದ ಕೆಲವೇ ಮತಗಳಲ್ಲಿ ನಾವು ಸೋಲು ಕಾಣಬೇಕಾಯಿತು. ಈ ಬಾರಿ ಪ್ರತಿಯೊಬ್ಬ ಕಾರ್ಯಕರ್ತರೂ ಮೈ ಎಲ್ಲಾ ಕಣ್ಣಾಗಿ ಕರ್ತವ್ಯ ನಿರ್ವಹಿಸಬೇಕು. ಜೆಡಿಎಸ್‌ ಗೆಲುವು ಶತಃಸಿದ್ಧ. ಆದರೆ ನಾವು ಹೆಚ್ಚಿನ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಕೃಷ್ಣಪ್ಪ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

Tap to resize

Latest Videos

ಜೆಡಿಎಸ್‌ ರೈತಾಪಿಗಳ ಪಕ್ಷ. ಶ್ರೀಮಂತರ ಪಕ್ಷವಲ್ಲ. ನಮಗೆ ಕಾರ್ಯಕರ್ತರೇ ಸರ್ವಸ್ವ. ಅವರೇ ಶಕ್ತಿಧಾತರು. ಎಚ್‌.ಡಿ.ಕುಮಾರಸ್ವಾಮಿಯವರು ರೂಪಿಸಿರುವ ಪಂಚರತ್ನ ಯೋಜನೆ ಇಡೀ ರಾಜ್ಯದ ಜನರನ್ನು ಹುಬ್ಬೇರಿಸುವಂತೆ ಮಾಡಿದೆ. ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದು ಪಂಚರತ್ನ ಯೋಜನೆ ಜಾರಿಗೆ ಜನರು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಹಾಲಿ ಶಾಸಕರು ಕಳೆದ 5 ವರ್ಷಗಳ ಅವಧಿಯಲ್ಲಿ ಮಾಡಿರುವ ದುರಾಡಳಿತ ತಮ್ಮ ಪಕ್ಷಕ್ಕೆ ವರವಾಗಲಿದೆ. ಕಾಂಗ್ರೆಸ್‌ ಪಕ್ಷ ಇನ್ನೂ ಇಪ್ಪತ್ತು ವರ್ಷಗಳ ಕಾಲ ಗೆಲ್ಲುವುದಿಲ್ಲ. ಜೆಡಿಎಸ್‌ಗೆ ಬಿಜೆಪಿಯೇ ಪ್ರತಿಸ್ಪರ್ಧಿ. ಈ ಬಾರಿ ಹೆಚ್ಚು ಮತಗಳ ಅಂತರದಿಂದ ಜೆಡಿಎಸ್‌ ಗೆಲುವು ಖಚಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಶಂಕರೇಗೌಡ, ಎಂ.ಡಿ.ರಮೇಶ್‌ ಗೌಡ, ದೊಡ್ಡಘಟ್ಟಚಂದ್ರೇಶ್‌, ಬಾಣಸಂದ್ರ ರಮೇಶ್‌, ಹೆಡಿಗೇಹಳ್ಳಿ ವಿಶ್ವನಾಥ್‌, ವಕೀಲ ಪಿ.ಎಚ್‌.ಧನಪಾಲ್‌, ಜಫ್ರುಲ್ಲಾ, ಕಲ್ಲಬೋರನಹಳ್ಳಿ ಜಯರಾಮ್‌, ಎಚ್‌.ಆರ್‌.ರಾಮೇಗೌಡ, ಡಿ.ಪಿ.ರಾಜು, ದೊಡ್ಡೇಗೌಡ, ಎ.ಬಿ.ಜಗದೀಶ್‌,ವಿಜಯೇಂದ್ರ, ಮಂಗೀಕುಪ್ಪೆ ಬಸವರಾಜು, ಸೋಮಣ್ಣ, ತಾವರೇಕೆರೆ ತಿಮ್ಮೇಗೌಡ, ಡಾ.ಬಿ.ನಂಜಪ್ಪ, ಪೈಂಟ್‌ ರಂಗನಾಥ್‌ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಸದಸ್ಯ ಅಲ್ಲಪ್ಪ ಜೆಡಿಎಸ್‌ಗೆ ಸೇರ್ಪಡೆಗೊಂಡರು.

ತಾಲೂಕು ಜೆಡಿಎಸ್‌ನ ಅಧ್ಯಕ್ಷ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊನೆಗೂ  ಹಾಸನ ಟಿಕೆಟ್ ನಿರ್ಧಾರ ಪ್ರಕಟ

ಬೆಂಗಳೂರು (ಏ.08): ಹಾಸನದಲ್ಲಿ ಜೆಡಿಎಸ್‌ ಟಿಕೆಟ್‌ ಹಂಚಿಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ. ಪಕ್ಷದ ಕಾರ್ಯಕರ್ತರಿಗೇ ಟಿಕೆಟ್‌ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಈ ಮೂಲಕ ಭವಾನಿ ರೇವಣ್ಣಗೆ ಟಿಕೆಟ್‌ ಇಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ. 

ಚಿಕ್ಕೇಗೌಡನ ಪಾಳ್ಯದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಯ ವೇಳೆ ಹಾಸನದಲ್ಲಿ ಸ್ವರೂಪ್‌ಗೌಡಗೆ ಜೆಡಿಎಸ್‌ ಟಿಕೆಟ್‌ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ, ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ. ಕಾರ್ಯಕರ್ತನಿಗೆ ಟಿಕೆಟ್‌ ಕೊಡೋದು ಅಂತ ಹೇಳಿದ್ದೇನೆ. ಅದರಲ್ಲಿ ಬದಲಾವಣೆ ಇಲ್ಲ. ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಶಿಘ್ರದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ವರೂಪ್‌ಗೆ ಟಿಕೆಟ್ ಘೋಷಣೆ ಎಂಬುದನ್ನು ತಿಳಿಸಿದರು. 

ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ: ಡಿಕೆಶಿ

ಯಾವುದೇ ಬ್ಲಾಕ್‌ಮೇಲ್‌ ನಡೆಯುವುದಿಲ್ಲ: ನನ್ನತ್ರ ಯಾವ ಬ್ಲಾಕ್ ಮೇಲ್ ಕೂಡ ನಡೆಯಲ್ಲ. ದೇವೆಗೌಡರ ಬಳಿ ಹೋಗಿ ಬ್ಲಾಕ್ ಮೇಲ್ ಮಾಡಬಹುದು. ನಾನು ಪಕ್ಷದ ಜವಾಬ್ದಾರಿ ತಗೆದುಕೊಂಡ ಮೇಲೆ ಕಾರ್ಯಕರ್ತರನ್ನ ಉಳಿಸಿಕೊಂಡಿದ್ದೇನೆ. ಕುಟುಂಬದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈವರೆಗೂ ಕಾಪಾಡಿಕೊಂಡು ಬಂದಿದ್ದೇನೆ. ಇನ್ಮುಂದೆ ಆ ರೀತಿ ಆಗಲ್ಲ, ಕಾರ್ಯಕರ್ತರಿಗೆ ಟಿಕೆಟ್ ಅಂತ ಹೇಳಿದ್ದೇನೆ. ಈಗಾಗಲೇ ತೀರ್ಮಾನ ಆಗಿದೆ, ಆಗುತ್ತೆ ಕೂಡ ಎಂದು ಭವಾನಿ ರೇವಣ್ಣನಿಗೆ ಟಾಂಗ್‌ ನೀಡಿದರು.

ಕಷ್ಟಪಟ್ಟಿದ್ದರೆ ಮಾತ್ರ ಬೆಲೆ ಗೊತ್ತಾಗುತ್ತೆ.?: ಕೆಲ ನಾಯಕರು ಅಮುಲ್‌ ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡುವ ಒಪ್ಪಿಗೆ ಸೂಚಿಸುವ ಮೂಲಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಜಾಗತಿಕ ಪ್ರಪಂಚದಲ್ಲಿ ಪರಿಸ್ಥಿತಿ ಎಲ್ಲಿಗೆ ಹೋಗುತ್ತೆ ಅನ್ನೋದನ್ನ ಅರ್ಥ ಮಾಡಿಕೊಂಡಿಕೊಂಡಿದ್ದೀರಾ..? ಇವರಿಗೆ ಅದರ ಬೆಲೆ ಏನು ಅಂತ ಗೊತ್ತಾ? ಇವರೇನಾದರೂ ಕಷ್ಟ ಪಟ್ಟು ಸಂಪಾದನೆ ಮಾಡಿದ್ದರೆ ಅದರ ಬೆಲೆ ಗೊತ್ತಾಗುತ್ತಿತ್ತು. ಯಾರೋ ದುಡಿಮೆ ಮಾಡಿದರೆ ನಾವು ಮಾಡಿದ್ವಿ ಅಂತ ಪ್ರಚಾರ ಮಾಡಿಕೊಳ್ಳೋದು ಬಿಟ್ಟರೆ ಏನಿದೆ ಇವರ ಕಾಂಟ್ರಿಬ್ಯೂಷನ್ ..? ಅವರಿಗೆ ವ್ಯವಹಾರ ಜ್ಞಾನವಿಲ್ಲ. ಬಿಜೆಪಿ ಆಡಳಿತದಲ್ಲಿ ಎಲ್ಲಾ ನಾಶ ಮಾಡೋಕೆ ಹೊರಟಿರೋದನ್ನ ಜನರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಟೀಕೆ ಮಾಡಿದರು

click me!