ಹೈಕಮಾಂಡ್ ಆದೇಶಿಸಿದರೆ ಬಿಜೆಪಿಯಿಂದ ಪಾವಗಡ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಮಾಜಿ ಸಂಸದ ಜನಾರ್ದನಸ್ವಾಮಿ ಹೇಳಿದರು.
ಪಾವಗಡ : ಹೈಕಮಾಂಡ್ ಆದೇಶಿಸಿದರೆ ಬಿಜೆಪಿಯಿಂದ ಪಾವಗಡ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಮಾಜಿ ಸಂಸದ ಜನಾರ್ದನಸ್ವಾಮಿ ಹೇಳಿದರು.
ಭಾನುವಾರ ಬೆಳಗ್ಗೆ ಮಾಜಿ ಸಂಸದ ಜನಾರ್ದನಸ್ವಾಮಿ ಪಾವಗಡಕ್ಕೆ ಆಗಮಿಸಿ ಇಲ್ಲಿನ ಶ್ರೀಶನೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಪಾವಗಡ ಕ್ಷೇತ್ರದ ಜನತೆ ಚಿರಪರಿಚಿತರಾಗಿದ್ದು ನಾನುರಾಗಿದ್ದ ವೇಳೆ ಬರಪೀಡಿತ ವ್ಯಾಪ್ತಿಗೆ ಸೇರಿದ್ದ ಪಾವಗಡ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯ ಅಭಿವೃದ್ಧಿ ಕಾರ್ಯಗಳ ಸಾಕ್ಷಿ ನಿಮ್ಮ ಕಣ್ಣು ಮುಂದೆಯೇ ಇದೆ. ಇಲ್ಲಿನ ರೈತರ ಜ್ವಲಂತ ಸಮಸ್ಯೆ ನಿವಾರಣೆಗೆ ವಿಶೇಷ ಆಸಕ್ತಿವಹಿಸಿ ತಾಂತ್ರಿಕ ಎಂಜಿನಿಯರ್‌ಗಳ ಜತೆ ಸರ್ವೆ ಮಾಡಿಸುವ ಮೂಲಕ ಭದ್ರಾ ಮೇಲ‚್ದಂಡೆ ಯೋಜನೆ ವ್ಯಾಪ್ತಿಗೆ ತಾಲೂಕು ಸೇರ್ಪಡೆ ಮಾಡಿಸಿದೆ. ಭದ್ರಾ ಯೋಜನೆ ಪ್ರಗತಿಯಲ್ಲಿದ್ದು ಕೆರೆಗಳಿಗೆ ಭದ್ರಾ ನೀರು ಬಂದರೆ ಅಂತರ್ಜಲ ಹೆಚ್ಚಳದಿಂದ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಬರಲಿದೆ. ಇದರಿಂದ ರೈತಾಪಿಗಳ ನೀರಾವರಿ ಬೆಳೆಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.
ಸಾವಿರಾರು ಎಕರೆ ಪ್ರದೇಶದಲ್ಲಿ ಚಳ್ಳಕರೆ ಬಳಿ ವಿಮಾನ ಸಾಮಗ್ರಿಗಳ ತಯಾರಿಕೆ ಘಟಕ ನಿರ್ಮಾಣ ಸೇರಿದಂತೆ ತಮ್ಮ ಸಂಸದ ಅವಧಿಯ ಅನೇಕ ಪ್ರಗತಿ ಕಾರ್ಯಗಳ ಬಗ್ಗೆ ವಿವರಿಸಿದರು.
ಇಲ್ಲಿನ ಬಿಜೆಪಿ ಸಮಿತಿ ಜತೆ ನಿರಂತರ ಸಂಪರ್ಕದಲ್ಲಿದ್ದು, ಇಲ್ಲಿನ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಬಿಜೆಪಿ ವರಿಷ್ಠರ ಆದೇಶದಂತೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದು, ಯಾವುದೇ ಕ್ಷೇತ್ರದಲ್ಲಿ ಟಿಕೆಟ್ ನೀಡಿ, ಸೂಚಿಸಿದರೂ ಸ್ಪರ್ಧೆಗೆ ಸಿದ್ಧ. ಈಗ ರಾಜ್ಯ ಬಿಜೆಪಿ ವರಿಷ್ಠರ ಸೂಚನೆಯಂತೆ ಆಗಮಿಸಿದ್ದು ಟಿಕೆಟ್ ನೀಡಿದರೆ ಇಲ್ಲಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಇದಕ್ಕೂ ಮುನ್ನ ಇಲ್ಲಿನ ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಎಲ್ಲ ಪಕ್ಷದಲ್ಲಿದ್ದಂತೆ ಗುಂಪುಗಾರಿಕೆ ಇಲ್ಲಿಯೂ ಇದೆ ಎಂದರೆ, ಅದನ್ನು ಸರಿಪಡಿಸಲು ಪಕ್ಷ ಬದ್ಧವಾಗಿದೆ. ಈಗಾಗಲೇ ಇಲ್ಲಿನ ಬಿಜೆಪಿ ಟಿಕೆಟ್ ಬಯಸಿ ಹಲವಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಬಯಸಿದ ಆಕಾಂಕ್ಷಿಗಳ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ರವಿಶಂಕರನಾಯ್‌್ಕ ಮಾತನಾಡಿ, ಬಿಜೆಪಿ ಶಿಸ್ತು, ಬದ್ದತೆಗೆ ಹೆಸರಾದ ಪಕ್ಷ. ನಾನು ಸೇರಿ ಇನ್ನೂ ನಾಲ್ಕೈದು ಮಂದಿ ಬಿಜೆಪಿ ಟಿಕೆಟ್ ಬಯಸಿ ಒತ್ತಡವೇರಿದ್ದೇವೆ. ಹೈಕಮಾಂಡ್ ಸೂಚನೆಗೆ ಬದ್ಧರಾಗಿ ಕೆಲಸ ಮಾಡುವುದಾಗಿ ಹೇಳಿದರು.
ಇದೇ ವೇಳೆ ಜಿಲ್ಲಾ ಬಿಜೆಪಿ ಘಟಕದ ಮದ್ದಿಬಂಡೆ ವಕೀಲ ಕೃಷ್ಣಮೂರ್ತಿ, ಮುಖಂಡರಾದ ವಾಲ್ಯನಾಯಕ್, ಮಂಗಳವಾಡ ರಂಗಣ್ಣ ಅರಸೀಕೆರೆ ತಿಪ್ಪೇಸ್ವಾಮಿ, ದೊಮ್ಮತಮರಿ ಹನುಮಂತಯ್ಯ, ಅಲ್ಕುಂದರಾಜ್, ಪಾವಗಡ ರಾಘವೇಂದ್ರ, ಚಂದ್ರಶೇಖರ್‌ನಾಯ್‌್ಕ, ಎಸ್‌ಸಿ ಘಟಕದ ಕಡಮಲಕುಂಟೆ ರಾಮಾಂಜಿನಪ್ಪ, ಅಂಜಿಗೌಡ, ಬ್ಯಾಡನೂರು ಶಿವು, ಕಡಪಲಕರೆ ನವೀನ್‌ಕುಮಾರ್, ತಿರುಮಣಿ ಅರುಣ್ ಮಹೇಶ್, ಮಹಿಳಾ ಘಟಕದ ಶಾರದಬಾಯಿ, ಸರೋಜಮ್ಮ, ಜ್ಯೋತಿ, ಮಾಜಿ ಸಂಸದ ಜನಾರ್ದನಸ್ವಾಮಿ ಆಪ್ತರಾದ ಭರತ್ ಹಾಗೂ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿದ್ದರು.