ಜೀವನದ ಪ್ರತಿ ಘಳಿಗೆಯನ್ನು ಆಸ್ವಾದಿಸುತ್ತಲೇ ಪ್ರೀತಿ, ಸ್ನೇಹ ಮತ್ತು ವಿದ್ಯೆಗೆ ನಾವು ತಲೆಬಾಗಬೇಕು ಮತ್ತು ಮಹಿಳೆಯರ ಬಗ್ಗೆ ಗೌರವದಿಂದ ಇರಬೇಕು, ಆಗ ಮಾತ್ರವೇ ನಾವು ಮನುಷ್ಯರಾಗಲು ಸಾಧ್ಯ ಎಂದು ನಟ ರವಿಚಂದ್ರನ್ ಹೇಳಿದರು.
ಬೊಮ್ಮನಹಳ್ಳಿ (ಏ.05): ಜೀವನದ ಪ್ರತಿ ಘಳಿಗೆಯನ್ನು ಆಸ್ವಾದಿಸುತ್ತಲೇ ಪ್ರೀತಿ, ಸ್ನೇಹ ಮತ್ತು ವಿದ್ಯೆಗೆ ನಾವು ತಲೆಬಾಗಬೇಕು ಮತ್ತು ಮಹಿಳೆಯರ ಬಗ್ಗೆ ಗೌರವದಿಂದ ಇರಬೇಕು, ಆಗ ಮಾತ್ರವೇ ನಾವು ಮನುಷ್ಯರಾಗಲು ಸಾಧ್ಯ ಎಂದು ನಟ ರವಿಚಂದ್ರನ್ ಹೇಳಿದರು. ಕೋರಮಂಗಲದ ವೇಮನ ತಾಂತ್ರಿಕ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ ವೇಮನೋತವ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನರು ಮೊಬೈಲ್ ದಾಸರಾಗದೇ ಬದುಕು ರೂಪಿಸಿಕೊಳ್ಳುವುದರತ್ತ ಗಮನ ನೀಡಬೇಕು, ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಮೊಬೈಲ್ ಫೋನ್ ಸ್ಥಗಿತಗೊಳಿಸಿ ನಿಮ್ಮೊಳಗೆ ನೀವು ಬೆರೆಯಬೇಕು, ಓದುವ ಸಮಯದಲ್ಲಿ ಓದದೇ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವುದರಿಂದ ಪ್ರಯೋಜನವಿಲ್ಲ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಹಾಡು, ನೃತ್ಯ, ಭಾಷಣ, ಏಕ ಪಾತ್ರ ಅಭಿನಯ, ಮೂಕಾಭಿನಯ, ಸಮೂಹಗಾನ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕರ್ನಾಟಕ ರೆಡ್ಡಿ ಜನ ಸಂಘದ ಅಧ್ಯಕ್ಷ ಅಧ್ಯಕ್ಷ ಎಸ್.ಜಯರಾಮರೆಡ್ಡಿ, ಉಪಾಧ್ಯಕ್ಷ ಡಿ.ಎನ್.ಲಕ್ಷ್ಮಣರೆಡ್ಡಿ, ಕೆ.ಎನ್.ಕೃಷ್ಣಾರೆಡ್ಡಿ, ವೆಂಕಟ ಶಿವಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶೇಖರ್ ರೆಡ್ಡಿ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸೋಮಶೇಖರ್ ರೆಡ್ಡಿ, ಪ್ರಾಂಶುಪಾಲ ಡಾ. ವಿಜಯಸಿಂಹರೆಡ್ಡಿ ಇದ್ದರು.
ಲವ್ ಬಗ್ಗೆ ಇನ್ಯಾರೂ ಹೇಳದ ಸೀಕ್ರೆಟ್ ಬಿಚ್ಚಿಟ್ಟ ರವಿಚಂದ್ರನ್: ನಟ ರವಿಚಂದ್ರನ್ ಅವರು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ 'ಲವ್ ಅನ್ನೋದು ಯಾವತ್ತೂ ಇರುತ್ತೆ, ಇರುವಂಥದ್ದು. ಆದರೆ, ಅದನ್ನು ವ್ಯಕ್ತಪಡಿಸುವ ರೀತಿ ಬದಲಾಗಬಹುದು ಅಷ್ಟೇ. ಮೊದಲು ಲೆಟರ್ ಬರೆಯೋರು, ಈಗ ಮೆಸೇಜ್ ಮಾಡ್ತಾರೆ ಅಷ್ಟೇ, ಲೆಟರ್‌ಗೂ ಮೊದಲು ಬಾಯಿಂದ ಹೇಳ್ತಾ ಇದ್ರು ಅಥವಾ ಸನ್ನೆ ಮಾಡ್ತಾ ಇದ್ದಿರಬಹುದು. ಆದರೆ, ಮನುಷ್ಯ ಹುಟ್ಟಿದಾಗಿನಿಂದ ಇಲ್ಲಿಯವರೆಗೂ, ಮುಂದೆ ಕೂಡ ಲವ್ ಯಾವತ್ತೂ ಇರುತ್ತೆ. ಆದ್ರೆ, ಅದನ್ನು ಹೇಳೋ ರೀತಿ ಮಾತ್ರ ಕಾಲಕಾಲಕ್ಕೂ ಬದಲಾಗುತ್ತೆ' ಅಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಸಿನಿಮಾ ಇಂಡಸ್ಟ್ರಿಯಲ್ಲಿ ನಗುವೇ ಇಲ್ಲ, ಬರೀ ಟ್ರಾಫಿಕ್ ಜಾಮ್: ರವಿಚಂದ್ರನ್
ಕನ್ನಡದ ನಟ ರವಿಚಂದ್ರನ್ ಅವರು ಮಾತನ್ನಾಡಿದ್ರೆ ತುಂಬಾ ಪ್ರಾಮಾಣಿಕವಾಗಿ ಮಾತನ್ನಾಡುತ್ತಾರೆ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡುತ್ತಿದ್ದ ನಟ ರವಿಚಂದ್ರನ್ ಅವರು ಕೆಲವು ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾರಂಗ, ಪ್ಯಾನ್ ಇಂಡಿಯಾ ಸಿನಿಮಾಗಳು, ಪರಭಾಷೆಯ ಸಿನಿಮಾಗಳು, ಹೀಗೆ ಬಹಳಷ್ಟು ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ, ತುಂಬಾ ಬಿಂದಾಸ್ ಆಗಿ ಮಾತನ್ನಾಡಿದ್ದಾರೆ.