ರೈತರಿಗೆ ಗುಡ್‌ನ್ಯೂಸ್, ಅವಧಿಗೂ ಮುನ್ನವೇ ಭರ್ತಿಯಾಗಲಿದೆ ತುಂಗಭದ್ರೆಯ ಒಡಲು

By Suvarna News  |  First Published Jul 8, 2022, 8:07 PM IST

* ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆ
* ತುಂಗಭದ್ರಾ ಜಲಾಶಯಕ್ಕೆ ಬರುತ್ತಿದೆ ಅಪಾರ ಪ್ರಮಾಣದ ನೀರು
* ಅವಧಿಗೂ ಮುನ್ನವೇ ಭರ್ತಿಯಾಗಲಿದೆ ತುಂಗಭದ್ರೆಯ ಒಡಲು


ವಿಜಯನಗರ, (ಜುಲೈ.08): ಎಲ್ಲೋ ಮಳೆಯಾದ್ರೇ ಇನ್ನೇಲ್ಲೋ ಪ್ರವಾಹ ಭೀತಿ ಎನ್ನವಂತಾಗಿದೆ  ವಿಜಯನಗರ ಜಿಲ್ಲೆಯ ಜನರ ಪರಿಸ್ಥಿತಿ.. ಕಳೆದೊಂದು ವಾರದಿಂದ ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಹಿನ್ನಿರಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಒಂದು ಕಡೆ ಜಲಾಶಯದ ಕೆಳ ಭಾಗದ ರೈತರಿಗೆ ಅವಧಿಗೂ ಮುನ್ನ ಜಲಾಶಯ ತುಂಬುತ್ತಿರೋದು ಖುಷಿಯ ವಿಚಾರವಾದ್ರೇ, ಹಿನ್ನಿರಿನ ಜನರಿಗೆ ಮಾತ್ರ  ಪ್ರವಾಹ ಭೀತಿ ಎದುರಿಸುವಂತಾಗಿದೆ.

ಅವಳಿ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ..ಆದ್ರೂ ತುಂಗಭದ್ರಾ ಜಲಾಶಯ ಆರ್ಧಕ್ಕಿಂತ ಹೆಚ್ಚು ತುಂಬಿದ್ದು, ರಾಜ್ಯದ ಎರಡನೇ ಅತಿ ದೊಡ್ಡ ಜಲಾಶಯ ತುಂಗಭದ್ರಾ ಇನ್ನೊಂದು ವಾರದಲ್ಲಿ ತುಂಬುವ ಭರವಸೆ ನೀಡಿದೆ.. ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರೋ ಮಳೆ ಹಿನ್ನಲೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ... ಕಳೆದೊಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಬೇಗ ಜಲಾಶಯ ತುಂಬುವತ್ತ ಸಾಗಿದೆ ಎನ್ನಲಾಗುತ್ತಿದೆ. 

Tap to resize

Latest Videos

undefined

Karnataka Reservoir Water Level: ಪ್ರವಾಹ ಭೀತಿಯ ನಡುವೆ ಸಂತಸದ ಸುದ್ದಿ, ಭರ್ತಿಯಾಗುತ್ತಿವೆ ಜಲಾಶಯಗಳು

ಜಲಾಶಯದಲ್ಲೀಗ 64.73 ಟಿಎಂಸಿ ನೀರು
116 ಅಡಿ ಎತ್ತರದ ಜಲಾಶಯದಲ್ಲಿ  101 ಅಡಿ ಎತ್ತರ ದಾಟಿದ್ದು , 64.73 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಳೆದೊಂದು ತಿಂಗಳಲ್ಲಿ 40 ಟಿಎಂಸಿ ಅಡಿ ನೀರು ಹರಿದು ಬಂದಿರೋದು ದಾಖಲೆ ಎನ್ನಲಾಗಿದೆ. ಅಲ್ಲದೇ ಇಷ್ಟೊಂದು ಪ್ರಮಾಣದ ನೀರು ಹರಿದು ಬರುತ್ತಿರೋ ಹಿನ್ನೆಲೆ ಅವಧಿಗೂ ಮುನ್ನ ಜಲಾಶಯ ತುಂಬಿದ್ರೇ, ಎರಡನೇ ಬೆಳೆಗೂ ಈ ನೀರು ಸಿಗುತ್ತದೆ ಎನ್ನುವುದು ಕೆಳಭಾಗದ ರೈತರ  ಅಭಿಪ್ರಾಯವಾಗಿದೆ. ವಿಜಯನಗರ , ಕೊಪ್ಪಳ , ಬಳ್ಳಾರಿ , ರಾಯಚೂರು ಹಾಗೂ ಆಂಧ್ರ ಪ್ರದೇಶ , ತೆಲಂಗಾಣ ರಾಜ್ಯಗಳ ಹಲವು ಜಿಲ್ಲೆಗಳ ಜೀವನಾಡಿಯಾಗಿರೋ ತುಂಗಭದ್ರ ಜಲಾಶಯ ಪ್ರತಿ ವರ್ಷ ಸಾವಿರಾರು ಹೆಕ್ಟೆರ್ ಭೂಮಿಗೆ ನೀರನ್ನು ಒದಗಿಸುತ್ತದೆ. 

ಡಂಗುರ ಸಾರಿ ಎಚ್ಚರ ನೀಡಿದ ಜಿಲ್ಲಾಡಳಿತ
ಮಲೆನಾಡು, ಕರಾವಳಿ ಭಾಗದಲ್ಲಿ ನಿರಂತರ ಮಳೆ ಪರಿಣಾಮ ಹಿನ್ನಲೆ..ತುಂಗಾ ಮತ್ತು ಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ. ಇದರಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಹೆಚ್ಚು ಹೆಚ್ಚು ನೀರು ಬರುತ್ತಿರೋ ಹಿನ್ನಲೆ  ವಿಜಯನಗರ ಜಿಲ್ಲಾಡಳಿಯ ಫುಲ್ ಅಲಾರ್ಟ್ ಆಗಿದೆ.  ಹಿನ್ನಿರಿನ ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದೆ., ಹಡಗಲಿ, ಹರಪನಹಳ್ಳಿ  ಹಗರಿಬೊಮ್ಮನಹಳ್ಳಿ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಡಂಗೂರು ಸಾರೋ ಮೂಲಕ ನದಿ ತೀರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ನದಿ ತೀರದಲ್ಲಿರೋ ಪಂಪ್ ಸೆಟ್ ಹಿಂತೆಗೆದು ನದಿ ತೀರದ ಹೊಲಗಳಿಗೂ ಹೋಗದಂತೆ ರೈತರಿಗೆ ಎಚ್ಚರಿಕೆ ನೀಡಲಾಗಿದೆ.  

click me!