ತುಮಕೂರು (ಮೇ.12): ಕೋವಿಡ್‌ನಿಂದ ಮನೆಯಲ್ಲೇ ಸಾವನ್ನಪ್ಪಿದ ಮಹಿಳೆಯ ಅಂತ್ಯಸಂಸ್ಕಾರವನ್ನು ತುಮಕೂರು ತಹಸೀಲ್ದಾರ್ ಮೋಹನ್ ಕುಮಾರ್ ಹಾಗೂ ಕಂದಾಯಾಧಿಕಾರಿ ಅವರನ್ನು ಒಳಗೊಂಡ ತಂಡ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ತಾಲೂಕಿನ ಕುಪ್ಪೂರಿನ ಮೃತ ಮಹಿಳೆಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯ ಸುಧಾರಿಸದೇ ಮೃತಪಟ್ಟಿದ್ದಾರೆ.
ತುಮಕೂರು : ಕಾರ್ ಹೆಡ್ ಲೈಟ್ ಹಾಕೊಂಡು ಮುಕ್ತಿಧಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ..
ಮೃತ ಮಹಿಳೆಯ ಅಂತ್ಯಸಂಸ್ಕಾರವನ್ನು ಮಾಡಲು ಯಾರೂ ಮುಂದೆ ಬಾರದೆ ಇರುವುದರಿಂದ ತಹಸೀಲ್ದಾರ್ ಮೋಹನ್ ಕುಮಾರ್ ಕಂದಾಯಾಧಿಕಾರಿಗಳು ಗ್ರಾಮಲೆಕ್ಕಿಗರು ತೆರಳಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಕುಪ್ಪೂರು ಮಹಿಳೆ ಕೋವಿಡ್‌ನಿಂದ ಸಾವನ್ನಪ್ಪಿದ್ದರಿಂದ ಮಗನಾಗಲಿ, ಗ್ರಾಮಸ್ಥರಾಗಲಿ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕಿದ್ದು ಅಧಿಕಾರಿಗಳೇ ನೆರವೇರಿಸಿದ್ದಾರೆ.
ಆದರೆ ಮಗ, ಗ್ರಾಮಸ್ಥರು ಯಾರೂ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಜಹೀರ್ ಅವರ ಸಹಾಯ ಪಡೆದುಕೊಂಡು ಅಂತ್ಯ ಸಂಸ್ಕಾರ ಮಾಡಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona