ತುಮಕೂರು (ಮೇ.12): ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು 121 ಗ್ರಾಂ ಪಂಚಾಯತ್‌ಗಳನ್ನು ಕೋವಿಡ್ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.
ಇಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೇಳಿದ್ದಾರೆ.
ತುಮಕೂರು ತಾಲೂಕಿನ ಬೆಳಗುಂಬ, ಕೆಸ್ತೂರ್, ತಿಮ್ಮರಾಜನಹಲ್ಳಿ, ಕೋರಾ, ಅರಕೆರೆ, ಸ್ವಾಂದೇನಹಳ್ಳಿ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬಂಗುಡನಹಳ್ಳಿ, ಮಲ್ಲಸಂದ್ರ, ಸೀತಕಲ್ಲು, ಹಿರೇಹಳ್ಳಿ, ಮೈದಾಳ ಸೇರಿದಂತೆ ವಿವಿಧ ಗ್ರಾಮಗಳು ಹಾಟ್‌ಸ್ಪಾಟ್ ಆಗಿವೆ.
ಆಕ್ಸಿಜನ್ ಇಲ್ಲ ಅಂದ್ರೆ ಸಿಎಂಗೆ ಕೇಳಿ ಅಂತಾರೆ ಮಾಧುಸ್ವಾಮಿ.! ಇದೆಂಥಾ ಉಡಾಫೆ ಸಚಿವರೇ..
ಈ ಎಲ್ಲಾ ಗ್ರಾಮಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ದಿನೇ ದಿನೇ ಸೋಂಕಿತರ ಸಮಖ್ಯೆಯೂ ಏರಿಕೆಯಾಗುತ್ತಿದ್ದು ಇದರಿಂದ ತೀವ್ರ ಆತಂಕ ಎದುರಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona