ತುಮಕೂರು: ಮಳೆಯನ್ನೂ ಲೆಕ್ಕಿಸದೆ ವರಮಹಾಲಕ್ಷ್ಮೀ ಹಬ್ಬಕ್ಕೆ ಭರ್ಜರಿ ಶಾಪಿಂಗ್

ಮಳೆಯನ್ನೂ ಲೆಕ್ಕಿಸದೇ ತುಮಕೂರಿನ ಜನ ಭರ್ಜರಿಯಾಗಿ ಹಬ್ಬದ ಶಾಪಿಂಗ್ ಮಾಡಿದರು. ತುಮಕೂರಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಸುರಿವ ಮಳೆಯನ್ನು ಲೆಕ್ಕಿಸದೆ ಜನತೆ ಹಬ್ಬದ ವಸ್ತು ಖರೀದಿಗೆ ಮುಂದಾಗಿದ್ದರು. ಸುರಿವ ಮಳೆಯಲ್ಲಿ ಕೆಸರುಗದ್ದೆಯೇ ಆಗಿದ್ದ ಮಾರುಕಟ್ಟೆಯಲ್ಲೇ ಜನ ಹೂವು, ಹಣ್ಣು, ತರಕಾರಿ ಖರೀದಿಸುವಲ್ಲಿ ನಿರತರಾಗಿದ್ದರು.


ತುಮಕೂರು(ಆ.09): ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ತುಮಕೂರಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಏರ್ಪಟ್ಟಿತ್ತು. ಸುರಿವ ಮಳೆಯನ್ನು ಲೆಕ್ಕಿಸದೆ ಜನತೆ ಹಬ್ಬದ ವಸ್ತು ಖರೀದಿಗೆ ಮುಂದಾಗಿದ್ದರು.

ತುಮಕೂರು ಹೊರವಲಯದಲ್ಲಿರುವ ಮಾರುಕಟ್ಟೆಯಲ್ಲಿ ಭರ್ತಿ ಜನ. ಸುರಿವ ಮಳೆಯಲ್ಲಿ ಕೆಸರುಗದ್ದೆಯೇ ಆಗಿದ್ದ ಮಾರುಕಟ್ಟೆಯಲ್ಲೇ ಜನ ಹೂವು, ಹಣ್ಣು, ತರಕಾರಿ ಖರೀದಿಸುವಲ್ಲಿ ನಿರತರಾಗಿದ್ದರು. ಮಾರುಕಟ್ಟೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಸಂಚಾರಕ್ಕೆ ಕೊಂಚ ಅಡಚಣೆ ಉಂಟಾಗಿತ್ತು.

Latest Videos

ಬರ್ತಿದ್ದಾಳೆ ‘ವರಮಹಾಲಕ್ಷ್ಮೀ’; ಮನೆ ತುಂಬಿಸಿಕೊಳ್ಳಲು ಹೀಗೆ ಪೂಜೆ ಮಾಡಿ!

ಹಬ್ಬದ ಮುನ್ನಾ ದಿನವಾದ ಗುರುವಾರ ಬೆಳಗ್ಗೆಯಿಂದಲೇ ಮಾರುಕಟ್ಟೆಗೆ ಜನ ದೌಡಾಯಿಸಿದ್ದು ಸಾಮಾನ್ಯವಾಗಿತ್ತು. ಇವಿಷ್ಟೇ ಅಲ್ಲದೇ ತುಮಕೂರಿನ ಸೋಮೇಶ್ವರಪುರಂ, ಎಸ್‌ಐಟಿ, ಜಯನಗರ, ಗೋಕುಲ, ಕೆ.ಆರ್‌. ಬಡಾವಣೆ, ಬಾರ್‌ಲೈನ್‌, ಹೊರಪೇಟೆ ವೃತ್ತ ಹೀಗೆ ಬೇರೆ ಬೇರೆ ಬಡಾವಣೆಗಳಲ್ಲೂ ಕೂಡ ಮಿನಿ ಮಾರುಕಟ್ಟೆಯೇ ಸೃಷ್ಟಿಯಾಗಿತ್ತು.

ಹಣ್ಣು 100 ರಿಂದ 150 ರು. ಕೆಜಿಯಾಗಿದ್ದರೆ, ಹೂವು ಒಂದು ಮಾರು 100 ರಿಂದ 125 ರು.ರವರೆಗೂ ಬಿಕರಿಯಾಗಿತ್ತು. ದುಬಾರಿ ಬೆಲೆಯನ್ನು ಲೆಕ್ಕಿಸದೆ ಜನ ಹಬ್ಬದ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.

ಬೆಂಗಳೂರಿನಲ್ಲಿ ಗಗನಕ್ಕೇರಿದ ತರಕಾರಿ ಹೂವಿನ ಬೆಲೆ

click me!