Tumakur : ಸಿರಿಧಾನ್ಯ ಬಳಕೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಮಾಹಿತಿ

Published : Oct 03, 2023, 06:30 AM IST
Tumakur :  ಸಿರಿಧಾನ್ಯ ಬಳಕೆ ಬಗ್ಗೆ ಗ್ರಾಮೀಣ ಭಾಗದಲ್ಲಿ ಮಾಹಿತಿ

ಸಾರಾಂಶ

ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬಜಗೂರು ವಲಯದ ಜೆ. ಮಲ್ಲೇನಹಳ್ಳಿಯಲ್ಲಿ ಶರಾವತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತಿಪಟೂರು: ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬಜಗೂರು ವಲಯದ ಜೆ. ಮಲ್ಲೇನಹಳ್ಳಿಯಲ್ಲಿ ಶರಾವತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗ್ರಾಮಾಂತರ ಯೋಜನಾಧಿಕಾರಿ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಸಿರಿಧಾನ್ಯ ಬೆಳೆಗಳ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳಾದ ಆಟೋರಿಕ್ಷಾ ತರಬೇತಿ, ಮದ್ಯವರ್ಜನ ಶಿಬಿರ, ಮಾಶಾಸನ, ಜನಮಂಗಳ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ ನಮ್ಮ ಸಂಸ್ಥೆಯ ಯೋಜನೆಗಳನ್ನು ಜನಸಾಮಾನ್ಯರ ಏಳಿಗೆಗೆ ಜಾರಿಗೆ ತಂದಿದ್ದು ಇವುಗಳ ಸದುಪಯೋಗ ಪಡೆದುಕೊಂಡು ಸ್ವಾಭಿಮಾನಿ ಜೀವನ ನಡೆಸಬೇಕೆಂದು ಕರೆ ನೀಡಿದರು.

ಸಿರಿಧಾನ್ಯ ಮೇಲ್ವಿಚಾರಕ ರಾಜೇಶ್, ಕೇಂದ್ರದ ಸದಸ್ಯರುಗಳಿಗೆ ಸಿರಿಧಾನ್ಯಗಳ ಪರಿಚಯ ಮತ್ತು ಅವುಗಳ ಬಳಕೆಯ ಬಗ್ಗೆ ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ತ್ರಿವೇಣಮ್ಮನವರು ಸಿರಿಧಾನ್ಯಗಳಾದ ಸಾಮೆ, ಹಾರಕ, ನವಣೆ, ಬರಗು ಇವುಗಳಿಂದ ಮಾಡುವ ಅಡುಗೆಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಅಧ್ಯಕ್ಷತೆಯನ್ನು ಶಿವಗಂಗಾ ವಹಿಸಿದ್ದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಮಧು, ಸಮನ್ವಯಾಧಿಕಾರಿ ವಿ. ಭಾಗ್ಯಲಕ್ಷ್ಮಿ, ಸೇವಾ ಪ್ರತಿನಿಧಿಗಳಾದ ಚಂದ್ರಿಕಾ, ಕಾವ್ಯ, ಭೂಮಿಕಾ ಸೇರಿದಂತೆ ಕೇಂದ್ರ ಎಲ್ಲಾ ಸದಸ್ಯರುಗಳಿದ್ದರು.

ರೋಗಮುಕ್ತ ಜೀವನಕ್ಕೆ ಸಿರಿಧಾನ್ಯ ಅವಶ್ಯಕ

  ತಿಪಟೂರು :  ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗಗಳಿಗೆ ಬಲಿಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಸಿರಿಧಾನ್ಯಗಳ ಅವಶ್ಯಕತೆ ಇದ್ದು, ಇದರ ಬಳಕೆಯಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ಉಪ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದರು.

ತಾಲೂಕಿನ ಪರುವಗೊಂಡನಹಳ್ಳಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ, ಕೊನೇಹಳ್ಳಿ ವತಿಯಿಂದ ಆಯೋಜಿಸಿದ್ದ ಸಿರಿಧಾನ್ಯ ಪಾಕಸ್ಪರ್ಧೆ ಮತ್ತು ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಅಡುಗೆ ತಿನಿಸುಗಳು ಮರೆತೆ ಹೋಗಿವೆ. ಸಿರಿಧಾನ್ಯಗಳು ಪೌಷ್ಟಿಕತೆಗೆ ಹೆಸರುವಾಸಿಯಾಗಿದ್ದು ಹೆಚ್ಚಿನ ಪ್ರಮಾಣದ ಪ್ರೋಟಿನ್, ನಾರಿನಾಂಶವಿರುತ್ತದೆ ಎನ್ನುವುದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಕಡಗೆ ಹೆಚ್ಚು ಗಮನಹರಿಸಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ವಿ. ಗೋವಿಂದಗೌಡ ಮಾತನಾಡಿ, ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕೆಂದಿಲ್ಲ್ಲ. ವಿಶಿಷ್ಟ ಗುಣಗಳಿರುವ ಸಿರಿಧಾನ್ಯಗಳನ್ನು ಕಡಿಮೆ ಮಳೆಯಾಶ್ರಿತ ಪ್ರದೇಶದಲ್ಲಿಯೂ ಬೆಳೆಯಬಹುದು. ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಅಡುಗೆಯ ರುಚಿಕರವಾಗಿರುತ್ತದೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವುದರಿಂದ ಹೆಚ್ಚು ಆದಾಯ ಪಡೆಯಬಹುದು ಎಂದರು.

ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಮಾತನಾಡಿ, ಸಿರಿಧಾನ್ಯಗಳು ಅಂದು ಬಡವರ ಆಹಾರವಾಗಿತ್ತು ಇಂದು ಶ್ರೀಮಂತರ ಆಹಾರವಾಗಿದೆ. ಸಿರಿಧಾನ್ಯಗಳನ್ನು ಬಳಸಿದರೆ ಬಿ.ಪಿ, ಮಧುಮೇಹದಂತಹ ಕಾಯಿಲೆಗಳಿಂದ ದೂರವಿರಬಹುದಾಗಿದ್ದು, ಇಂತಹ ಪ್ರದರ್ಶನಗಳಿಂದ ಜನರಲ್ಲಿ ಅರಿವು ಮೂಡುತ್ತದೆ ಎಂದರು.

PREV
Read more Articles on
click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!