ತುಮಕೂರು : ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಆಗ್ರಹ

By Kannadaprabha News  |  First Published Oct 16, 2023, 8:08 AM IST

ನಗರದ ಮರಳೂರುದಿಣ್ಣೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ನಾಗರಿಕರು ಭಯಭೀತರಾಗಿದ್ದಾರೆ.


  ತುಮಕೂರು :  ನಗರದ ಮರಳೂರುದಿಣ್ಣೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ನಾಗರಿಕರು ಭಯಭೀತರಾಗಿದ್ದಾರೆ. ಬೀದಿನಾಯಿಗಳ ಹಾವಳಿ ತಡೆಗೆ ನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು 29ನೇ ವಾರ್ಡಿನ ನಗರ ಪಾಲಿಕೆ ಸದಸ್ಯೆ ನಾಜಿಮಾಬೀ ಇಸ್ಮಾಯಿಲ್ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಬೀದಿನಾಯಿ ಕಾಟದ ಬಗ್ಗೆ ತಾವು ಗಮನ ಸೆಳೆದಿದ್ದು, ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿ ನಾಯಿಗಳ ಸಂಖ್ಯೆಗೆ ಕಡಿವಾಣ ಹಾಕುತ್ತಿಲ್ಲ. ಬೀದಿನಾಯಿಗಳಿಗೆ ತೊಂದರೆ ಮಾಡಬಾರದು ಎಂಬ ಆದೇಶವಿದೆ, ಪ್ರಾಣಿದಯಾ ಸಂಘದವರು ಆಕ್ಷೇಪ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಬೀದಿ ನಾಯಿಗಳನ್ನು ಕೊಲ್ಲುವುದು ಬೇಡ, ರಕ್ಷಿಸಬೇಕೆಂದರೆ ಊರಿನಿಂದ ಹೊರಗೆ ಸಾಗಿಸಿ, ಗೋಶಾಲೆ ಮಾದರಿಯಲ್ಲಿ ಬೀದಿನಾಯಿಗಳ ಫಾರಂ ಮಾಡಿ ರಕ್ಷಣೆ ಮಾಡಲಿ, ಇದಕ್ಕೆ ಸರ್ಕಾರ ಅಗತ್ಯ ನೆರವು ನೀಡಲಿ. ಏನಾದರೂ ಮಾಡಿ ನಗರವನ್ನು ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Latest Videos

undefined

ಬೀದಿ ನಾಯಿ ದಾಳಿ

ಕಿಕ್ಕೇರಿ (ಜು.18) :  ಬೀದಿ ನಾಯಿಯ ಮಾರಣಾಂತಿಕ ದಾಳಿಯಿಂದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉದ್ದಿನ ಮಲ್ಲನ ಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರಮೇಶ್‌ ಪುತ್ರ ದೀಕ್ಷಿತ್‌(5) ನಾಯಿ ದಾಳಿಯಿಂದ ಗಾಯಗೊಂಡ ಬಾಲಕ. ಭಾನುವಾರ ನರ್ಸರಿ ಶಾಲೆಗೆ ರಜೆ ಇದ್ದ ಕಾರಣ ಬೆಳಗ್ಗೆ ಸುಮಾರು 8.30ರಲ್ಲಿ ಮನೆಯಿಂದ ಹೊರಗಡೆ ಬಂದಿದ್ದಾನೆ.

ಬಳಿಕ ತುಸು ದೂರದಲ್ಲಿರುವ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವವರನ್ನು ಕಂಡು ಅಲ್ಲಿಗೆ ಹೋಗಲು ಹೆಜ್ಜೆ ಹಾಕಿದ್ದಾನೆ. ಬೀಡಾಡಿ ನಾಯಿ ಮನೆ ಮುಂದೆಯೇ ಈತನ ಮೇಲೆ ಏಕಾಏಕಿ ದಾಳಿ ಮಾಡಿ ಕೈ ಬೆರಳು, ಮುಖ, ಮೈ ಮೇಲೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ.

ಪ್ರಥಮ ಬಾರಿಗೆ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಡ್ರೋಣ್ ಬಳಕೆ!

ಬಾಲಕನ ಗಲ್ಲವನ್ನು ಆಳವಾಗಿ ಸೀಳಿದೆ. ಇದರಿಂದ ಬಾಲಕ ಪ್ರಜ್ಞಾಹೀನನಾಗಿದ್ದಾನೆ. ಗ್ರಾಮಸ್ಥರು ನಾಯಿ ದಾಳಿ ಮಾಡುತ್ತಿರುವ ಘಟನೆ ಕಂಡು ಕೂಗಿಕೊಂಡು ಸ್ಥಳಕ್ಕೆ ಓಡಿ ಬಂದಿದ್ದಾರೆ. ಅಷ್ಟರಲ್ಲಿ ನಾಯಿ ಬೊಗಳುತ್ತ ಓಡಿ ಹೋಗಿದೆ.

ಕೂಡಲೇ ಅರೆಪ್ರಜ್ಞೆಯಲ್ಲಿ ರಕ್ತಸಿಕ್ತವಾಗಿದ್ದ ಬಾಲಕನನ್ನು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಯದಿಂದ ಬಾಲಕ ವಿಚಲಿತನಾಗಿದ್ದಾನೆ. ಗುಣಮುಖನಾಗಲು ಕಾಣಲು ಸಾಕಷ್ಟುಸಮಯ ಬೇಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.

ನಾಯಿಗಳ ಉಪಟಳ ಹೆಚ್ಚಳ:

ಕಿಕ್ಕೇರಿ ಸೇರಿದಂತೆ ಹೋಬಳಿಯಲ್ಲೆಡೆ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾದಾಗ ಹಲವು ಪ್ರಾಣಿದಯಾ ಸಂಘದವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಮಾದಾಪುರ ಕ್ರಾಸ್‌ನ ಪ್ರದೇಶದಲ್ಲಿ ಮೀನು, ಮಾಂಸದ ಅಂಗಡಿ, ಮಾಂಸದ ಹೋಟೆಲ್‌ಗಳು ಹೆಚ್ಚಾಗಿದ್ದು ಬಹುತೇಕ ನಾಯಿಗಳು ಠಿಕಾಣಿ ಹೂಡಿವೆ.

ನಾಯಿಗಳು ಸುತ್ತಮುತ್ತಲ ಪ್ರದೇಶದ ಹಳ್ಳಿಗಳ ತೋಟದಲ್ಲಿ ರಾತ್ರಿ ವೇಳೆ ತಂಗುತ್ತಿವೆ. ಹಗಲು ವೇಳೆ ಮಕ್ಕಳು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಕೂಡಲೇ ನಾಯಿಗಳ ಉಪಟಳ ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!