Tumakur : ಸಾರ್ವಜನಿಕ ಆಸ್ಪತ್ರೆಗೆ ಕೆಟ್ಟ ಹೆಸರು ತರುವ ಪ್ರಯತ್ನ: ವೈದ್ಯ

By Kannadaprabha News  |  First Published Aug 17, 2023, 7:23 AM IST

ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಶಾಸಕ ಕೆ. ಷಡಕ್ಷರಿಯವರಿಗೆ ಕೆಲವರು ಕೆಟ್ಟಹೆಸರು ತರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದು, ಇಂತಹ ಒಂದೆರಡು ಘಟನೆಗಳ ಬಗ್ಗೆ ದೂರನ್ನು ಸಹ ದಾಖಲು ಮಾಡಲಾಗಿತ್ತು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಕುಮಾರ್‌ ತಿಳಿಸಿದ್ದಾರೆ.


  ತಿಪಟೂರು: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಶಾಸಕ ಕೆ. ಷಡಕ್ಷರಿಯವರಿಗೆ ಕೆಲವರು ಕೆಟ್ಟಹೆಸರು ತರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದು, ಇಂತಹ ಒಂದೆರಡು ಘಟನೆಗಳ ಬಗ್ಗೆ ದೂರನ್ನು ಸಹ ದಾಖಲು ಮಾಡಲಾಗಿತ್ತು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಕುಮಾರ್‌ ತಿಳಿಸಿದ್ದಾರೆ.

ಬುಧವಾರವೂ ಇಂತಹದೇ ಘಟನೆಯೊಂದು ನಡೆದಿದೆ. ಯಾರೋ ವ್ಯಕ್ತಿಯೊಬ್ಬರು ತಮಗೆ ಯಾವುದೇ ಗಾಯವಾಗಿಲ್ಲದಿದ್ದರೂ ಆಸ್ಪತ್ರೆಯ ಬ್ಯಾಂಡೇಜ್‌ ರೂಂಗೆ ಬಂದು ಸ್ವತಹ ತಾವೇ ಬ್ಯಾಂಡೇಜ್‌ ಮಾಡಿಕೊಂಡು ಈ ದೃಶ್ಯವನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ಜೊತೆಗೆ ತಾಲೂಕು ಆಡಳಿತದ ವಿರುದ್ಧವೂ ಕೆಟ್ಟಹೆಸರು ತರುವ ಪ್ರಯತ್ನ ಮಾಡಿರುವುದು ಖಂಡನೀಯ. ಸದರಿ ಬ್ಯಾಂಡೇಜ್‌ ಮಾಡಿಕೊಂಡಿರುವ ವ್ಯಕ್ತಿ ಮೊದಲು ಆಸ್ಪತ್ರೆಯಲ್ಲಿ ಚೀಟಿ ಸಹ ಮಾಡಿಸಿಲ್ಲ. ಯಾವುದೇ ವೈದ್ಯರ ಬಳಿಯೂ ತಪಾಸಣೆ ಮಾಡಿಸಿಕೊಂಡಿಲ್ಲ. ಮಂಗಳವಾರ ರಜೆ ಇದ್ದ ಕಾರಣ ಇಂದು ರೋಗಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಬ್ಯಾಂಡೇಜ್‌ ಮಾಡುವ ಸಿಬ್ಬಂದಿ ಬೇರೊಬ್ಬ ವೈದ್ಯರ ಕರೆ ಮೇರೆಗೆ ಭೇಟಿಗೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆಸಿದ್ದಾರೆ. ಇಂತಹ ಎಷ್ಟೇ ಸುಳ್ಳು ಪ್ರಕರಣಗಳು ಬಂದರೂ ನಮ್ಮ ವೈದ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ರೋಗಿಗಳ ಸೇವೆ ಮಾಡುತ್ತೇವೆ. ಆದರೆ ಇಂತಹ ಪ್ರಕರಣಗಳು ಮರುಕಳಿಸಬಾರದು. ಇದರಿಂದ ಬಡವರು ಹಾಗೂ ಮಧ್ಯಮ ವರ್ಗದ ರೋಗಿಗಳು ಆಸ್ಪತ್ರಗೆ ಬರಲು ಹಿಂದೇಟು ಹಾಕುತ್ತಾರೆ. ಮುಂದೆ ಇಂತಹ ಪ್ರಕರಣಗಳ ಬಗ್ಗೆ ತೀವ್ರ ನಿಗಾ ಇಡಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.

Tap to resize

Latest Videos

ಶಾಸಕರ ಭೇಟಿ: ಇಂದಿನ ಪ್ರಕರಣ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ಗಮನಿಸಿದ ಶಾಸಕೆ. ಷಡಕ್ಷರಿಯವರು ಆಸ್ಪತ್ರೆಗೆ ಬಂದು ಪ್ರಕರಣದ ಬಗ್ಗೆ ವಿವರ ಪಡೆದರು. ನಂತರ ತಪಾಸಣೆಗೆ ಬಂದಿದ್ದ ರೋಗಿಗಳು ಹಾಗೂ ದಾಖಲಾಗಿರುವ ರೋಗಿಗಳ ಬಳಿ ಮಾತನಾಡಿ ಎಲ್ಲರಿಗೆ ಇಲ್ಲಿ ಚಿಕಿತ್ಸೆ ದೊರೆಯಬೇಕೆಂಬುದೇ ನನ್ನ ನಿರಂತ ಪ್ರಯತ್ನವಾಗಿದ್ದು ಇಂದಿನ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು 

click me!