Tumakuru: ಏಕಕಾಲದಲ್ಲಿ ಹಲವು ಇಲಾಖೆಗಳ ಸಚಿವರಾಗಿದ್ದ ಹಿರಿಯ ನಾಯಕ ಸಿ. ವೀರಪ್ಪ ನಿಧನ

Published : Jul 25, 2026, 08:45 AM IST
C Veerappa

ಸಾರಾಂಶ

ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಮಾವ ಮಾಜಿ ಸಚಿವರಾಗಿದ್ದ ವೀರಪ್ಪ ನಿಧನರಾಗಿದ್ದಾರೆ. ತುಮಕೂರು ಜಲ್ಲೆಯ ಕೊರಟಗೆರೆಯ ತೋಟದ ಮನೆಯಲ್ಲಿ ರಾತ್ರಿ ನಿಧನರಾಗಿರುವ ಮಾಹಿತಿ ಲಭ್ಯವಾಗಿ

ತುಮಕೂರು: ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಮಾವ ಮಾಜಿ ಸಚಿವರಾಗಿದ್ದ ವೀರಪ್ಪ ನಿಧನರಾಗಿದ್ದಾರೆ. ತುಮಕೂರು ಜಲ್ಲೆಯ ಕೊರಟಗೆರೆಯ ತೋಟದ ಮನೆಯಲ್ಲಿ ರಾತ್ರಿ ನಿಧನರಾಗಿರುವ ಮಾಹಿತಿ ಲಭ್ಯವಾಗಿದೆ. ವೀರಪ್ಪ ಏಕಕಾಲದಲ್ಲಿ ಏಳು ಇಲಾಖೆಯ ಸಚಿವರಾಗಿದ್ರು. ಹಾಗೆಯೇ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವೀರಪ್ಪ ಅವರಿಗೆ ಇಬ್ಬರು ಗಂಡು ಮತ್ತು ಓರ್ವ ಮಗಳಿದ್ದಾರೆ.  ವೀರಪ್ಪ ಅವರ ಪುತ್ರಿ ಕೆ.ವಿ.ಮಂಜುಳಾ ಅವರನ್ನು ವಿ.ಎಸ್.ಉಗ್ರಪ್ಪ ಮದುವೆಯಾಗಿದ್ದಾರೆ.

ಸುಮಾರು ಹನ್ನೊಂದು ಇಲಾಖೆ

1983ರಲ್ಲಿ ಡೆಪ್ಯೂಟಿ ಸ್ಪೀಕರ್, 1984-89ವರೆಗೂ ಸಚಿವರಾಗಿದ್ದ ವೀರಣ್ಣ, ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು. ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್. ಬೊಮ್ಮಾಯಿ ಅವರ ಸಂಪುಟದಲ್ಲಿ ಸಾರಿಗೆ, ಸಣ್ಣ ಉಳಿತಾಯ, ಕೈಗಾರಿಕೆ ಹಾಗೂ ವಾಣಿಜ್ಯ, ಬಂದಿಖಾನೆ ಸೇರಿದಂತೆ ಸುಮಾರು ಹನ್ನೊಂದು ಇಲಾಖೆಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.

ಪರಿಶಿಷ್ಟ ಪಂಗಡದ (ST) ಪಟ್ಟಿಯಲ್ಲಿ 'ವಾಲ್ಮೀಕಿ' ಸಮುದಾಯದ ಪದವನ್ನು ಸೇರ್ಪಡೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ತಿಂಗಳು ಆರೋಗ್ಯ ಸಮಸ್ಯೆಯಿಂದಾಗಿ ಅವರು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದ ವೀರಣ್ಣನವರು ನಿನ್ನೆ ರಾತ್ರಿ ತಮ್ಮ ತೋಟದ ಮನೆಯಲ್ಲಿ ನಿಧನರಾಗಿದ್ದಾರೆ.

 

PREV
Read more Articles on
click me!

Recommended Stories

‘ವಿಸ್ಕಿ, ಬಿಯರ್ ಹಾಗೂ ರಮ್.. ಸ್ವಾಮಿ.. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ, ಸರ್ಕಾರದ ವಿರುದ್ಧ ಕೋರ್ಟ್ ಗರಂ
TB Dam: ತುಂಗಾಭದ್ರ ಜಲಾಶಯದಲ್ಲಿ ಕೇವಲ 29 ಟಿಎಂಸಿ ನೀರು! ಇಂದಿನ ಜಲಾಶಯಗಳ ನೀರಿನ ಪ್ರಮಾಣ ಎಷ್ಟು?