61 ಬಾರಿ ನಿಯಮ ಉಲ್ಲಂಘಿಸಿದವಗೆ ಭಾರೀ ದಂಡ : ಟ್ರೈನಿಂಗ್ ಸೆಂಟರಿಗೆ ರವಾನೆ

Kannadaprabha News   | Asianet News
Published : Nov 05, 2020, 10:23 AM IST
61 ಬಾರಿ ನಿಯಮ ಉಲ್ಲಂಘಿಸಿದವಗೆ ಭಾರೀ ದಂಡ : ಟ್ರೈನಿಂಗ್ ಸೆಂಟರಿಗೆ ರವಾನೆ

ಸಾರಾಂಶ

ವ್ಯಕ್ತಿಯೋರ್ವ ಸುಮಾರು 61 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದು ಈತನಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ. 

ಬೆಂಗಳೂರು (ನ.05):  ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಂಚಾರ ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ.

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಸಂಚಾರಿ ಪೊಲೀಸರ ಭಾರೀ ದಂಡ ವಿಧಿಸುತ್ತಿದ್ದಾರೆ. ಇದೀಗ ಅನೇಕ ಭಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯೋರ್ವ ಸಿಕ್ಕಿ ಬಿದ್ದಿದ್ದು ಆತನಿಗೆ ಭರ್ಜರಿ ದಂಡ ಹಾಕಲಾಗಿದೆ.

61 ಬಾರಿ ನಿಯಮ ಉಲ್ಲಂಘಿಸಿದ್ದ ಬಿಎಸ್‌ಎನ್‌ಎಲ್‌ ಉದ್ಯೋಗಿಯೊಬ್ಬರ ದ್ವಿಚಕ್ರ ವಾಹನಕ್ಕೆ ಕೆ.ಆರ್‌.ಪುರ ಸಂಚಾರ ಠಾಣೆ ಎಎಸ್‌ಐ ರಾಮನಾಯಕ್‌ 32 ಸಾವಿರ ದಂಡ ವಿಧಿಸಿದ್ದಾರೆ.

 

 ಕೆಎ-03-ಜೆಜೆಡ್-3801 ದ್ವಿ-ಚಕ್ರ ವಾಹನದ ಮಾಲೀಕರಿಂದ ರು.32,000 ದಂಡವನ್ನು ಕಟ್ಟಿಸಲಾಗಿದೆ. ಅವರನ್ನು ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ