ಪಾವಗಡ (ಆ.02): ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ವೆಂಕಟರಮಣಪ್ಪ ಅವರ ಸಮ್ಮುಖದಲ್ಲಿ ಭಾನುವಾರ ತಾಲೂಕಿನ ಅರಸೀಕೆರೆ ಭಾಗದ ಜೆಡಿಎಸ್ ಮುಖಂಡ ಬಸವರಾಜ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಳಿಕ ಮುಖಂಡ ಅರಸೀಕೆರೆ ಬಸವರಾಜ್ ಅವರು ಮಾತನಾಡಿ ಶಾಸಕ ವೆಂಕಟರಮಣಪ್ಪ ಅವರ ಪಾದರ್ಶಕ ಆಡಳಿತ ಹಾಗೂ ಜನಪರ ಕಾಳಜಿ ಸೇರಿದಂತೆ ಪುತ್ರ ತಾಲೂಕು ಕಾಮಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ ವೆಂಕಟೇಶ್ ಅವರ ಸರಳ ಪ್ರಮಾಣಿಕತೆ ಜನಪರ ನಾಯಕತ್ವದ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ.
ಹುಬ್ಬಳ್ಳಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ
ಇದೇ ವೇಳೆ ಅರಸೀಕೆರೆ ಭಾಗದ ಕಾಂಗ್ರೆಸ್ ಮುಕಂಡರಾದ ಕರೆಕ್ಯಾತನಹಳ್ಳಿ ಮಂಜುನಾತ್ ಜಂಗಮರಹಳ್ಳಿ ವೀರಭದ್ರಪ್ಪ ಪ್ರಕಾಶ್ ಹೊನ್ನಪ್ಪ, ಮಿಸ್ಟ್ರಿ ಕರಿಯಣ್ಣ, ಕದೀರೇನಹಳ್ಳಿ ಕರಿಯಣ್ಣ, ಪ್ರಕಾಶ್, ಮಂಗಳವಾಡ ಗೋಪಿ, ಸೇರಿದಂತೆ ಹಲವಾರು ಮಂದಿ ಮುಖಂಡರು ಉಪಸ್ಥಿತರಿದ್ದರು.