ರಾಜೀನಾಮೆ ನೀಡಿ ಬಿಜೆಪಿಗೆ ಬಂದೆ, ಆದರೆ ಯಾವುದೇ ಸಾಕಾರವಾಗಲಿಲ್ಲ : ಎಂಟಿಬಿ

Kannadaprabha News   | Asianet News
Published : Aug 02, 2021, 09:01 AM ISTUpdated : Aug 02, 2021, 10:16 AM IST
ರಾಜೀನಾಮೆ ನೀಡಿ ಬಿಜೆಪಿಗೆ ಬಂದೆ, ಆದರೆ ಯಾವುದೇ ಸಾಕಾರವಾಗಲಿಲ್ಲ : ಎಂಟಿಬಿ

ಸಾರಾಂಶ

ಅಭಿವೃದ್ಧಿ ದೃಷ್ಟಿಯಿಂದ ಸಚಿವ , ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದೆ  ಕ್ಷೇತ್ರದ ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಿದ ಪರಿಣಾಮ ತಾಲೂಕಿನಲ್ಲಿ ಅಭಿವೃದ್ದಿ ಕುಂಠಿತ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ

ಹೊಸಕೋಟೆ (ಆ.02): ಕ್ಷೇತ್ರದ ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಿದ ಪರಿಣಾಮ ತಾಲೂಕಿನಲ್ಲಿ ಅಭಿವೃದ್ದಿ ಕುಂಠಿತವಾಗಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು. 

ತಾಲೂಕಿನ ಲಾಲ್‌ಬಾಗ್‌ ದಾಸರಹಳ್ಳಿ ಗ್ರಾಮದಲ್ಲಿ ಭಾನುವಾರ ದಿನಸಿ ಕಿಟ್ ಹಾಗೂ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 

ಸಮ್ಮಿಶ್ರ ಸರ್ಕಾರದಲ್ಲಿ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಸಚಿವ , ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದೆ. ಈ ವೇಳೆ ಶಾಶ್ವತ ನೀರಾವರಿ ಮೆಟ್ರೋ ಯೋಜನೆಗೆ ಹಣ ನೀಡುವುದಾಗಿ ಅಂದಿನ ಸಿಎಂ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಉಪಚುನಾವಣೆಯಲ್ಲಿ ನಾನು ಸೋತ ಕಾರಣ ಯಾವುದೇ ಯೋಜನೆ ಸಾಕಾರವಾಗಲಿಲ್ಲ.

ಮುನಿರತ್ನ ಪರ ಬ್ಯಾಟ್ ಬೀಸಿದ ಎಂಟಿಬಿ, ಮಂತ್ರಿ ಸ್ಥಾನ ಖಚಿತ! 

ಮತ ಪಡೆದು ಗೆದ್ದವರು ಕ್ಷೇತ್ರಕ್ಕೆ ಯಾವ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. 

ಆದರೂ ನನ್ನನ್ನು ಮೂರು ಭಾರು ಶಾಸಕರಾಗಿ ಮಾಡಿದ ಕ್ಷೇತ್ರದ ಜನರ ಋಣ ತೀರಿಸುವ ಸಲುವಾಗಿ ಮನೆಯಲ್ಲಿ ಕೂರದೆ ಕೊರೋನಾ ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಮುಂದಾಗಿದ್ದೇನೆ ಎಂದರು. 

PREV
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ