ಸಿಲಿಂಡರ್‌ ಬಾಡಿಗೆ ಕೇಳಂಗಿಲ್ಲ : ಎಚ್ಚರಿಕೆ

Kannadaprabha News   | Asianet News
Published : Mar 03, 2021, 03:38 PM IST
ಸಿಲಿಂಡರ್‌ ಬಾಡಿಗೆ ಕೇಳಂಗಿಲ್ಲ : ಎಚ್ಚರಿಕೆ

ಸಾರಾಂಶ

ಸಿಲಿಂಡರ್ ಬಾಡಿಗೆ ಕೇಳಂಗಿಲ್ಲ. ವಾಹನಗಳಲ್ಲಿ ಸಿಲಿಂಡರ್‌ಗಳನ್ನು ಮನೆ ಮನೆಗೆ ತಂದು ಹಾಕುವವರು ಬಾಡಿಗೆ ಕೇಳಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

ಹಾಸನ (ಮಾ.03):  ಮನೆ ಮನೆಗೆ ಸಿಲಿಂಡರ್‌ನ್ನು ವಾಹನದಲ್ಲಿ ತಂದು ವಿತರಣೆ ಮಾಡುವವರೇನಾದರು ಸಾಗಾಟದ ವೆಚ್ಚ ಕೇಳಿದರೆ ಕೊಡಬೇಡಿ. ಬಲವಂತವಾಗಿ ಯಾರಾದರೂ ಕೇಳಿದರೆ ಅವರ ವಿರುದ್ಧ ದೂರು ಕೊಟ್ಟಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿ​ಕಾರಿ ಆರ್‌.ಗಿರೀಶ್‌ ಎಚ್ಚರಿಕೆ ನೀಡಿದ್ದಾರೆ.

ಗ್ಯಾಸ್‌ ಶಾಕ್‌ ಮೇಲೆ ಶಾಕ್‌: ಐದೇ ದಿನದಲ್ಲಿ 50 ರೂ. ಏರಿಕೆ!

ಜಿಲ್ಲಾಧಿ​ಕಾರಿ ಸಭಾಂಗಣದಲ್ಲಿ ಮಂಗಳವಾರ ಮಾತನಾಡಿದ ಅವರು, ಸಿಲಿಂಡರ್‌ ಯಾವುದೇ ಕಂಪನಿಯದಾಗಿರಲಿ ಸಾರ್ವಜನಿಕರು ಬುಕ್‌ ಮಾಡಿದಾಗ ಮನೆಗೆ ತಲುಪಿಸುವ ಜವಬ್ದಾರಿ ಆಯಾ ಏಜೆನ್ಸಿಯದ್ದು. 

ತಲುಪಿಸುವವರಿಗೆ ಸೂಕ್ತ ಸಂಭಾವನೆ ಕೂಡ ಸಿಗುವುದರಿಂದ ಗ್ರಾಹಕರು ಹೆಚ್ಚುವರಿ ಹಣ ಕೊಡುವ ಅಗತ್ಯತೆ ಇರುವುದಿಲ್ಲ. ಬಾಡಿಗೆ ಕೊಡುವಂತೆ ಬಲವಂತವಾಗಿ ಹಣ ವಸೂಲಿ ಮಾಡಲು ಮುಂದಾದರೆ ಅವರ ವಿರುದ್ಧ ದೂರು ನೀಡುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು