'ಅಗತ್ಯ ವಸ್ತುಗಳ ಬೆಲೆ ಏರಿಸಿದ್ದೇ ಬಿಜೆಪಿಯ ದೊಡ್ಡ ಸಾಧನೆ'

By Kannadaprabha News  |  First Published Mar 3, 2021, 3:09 PM IST

ಕಾಂಗ್ರೆಸ್‌ ಬಲಗೊಳ್ಳುವ, ಅಧಿಕಾರಕ್ಕೆ ಬರುವ ಶುಭ ಸೂಚನೆಗೆ ನಾಂದಿ ಹಾಡಲಿದೆ| ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನಡೆಗೆ, ಶಾಸಕರ ನಿರ್ಲಕ್ಷ್ಯದ ವರ್ತನೆಗೆ ಬೇಸತ್ತು ಕಾಂಗ್ರೆಸ್‌ನತ್ತ ಮುಖ ಮಾಡಿದ ಬಿಜೆಪಿ ಕಾರ್ಯಕರ್ತರು| ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಶಿವರಾಜ್ತಂಗಡಗಿ ವಾಗ್ದಾಳಿ| 


ಕಾರಟಗಿ(ಮಾ.03): ಕನಕಗಿರಿ ಕ್ಷೇತ್ರದಲ್ಲಿ ಅನಾಚಾರ, ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದನ್ನು ನೋಡಿ ಬೇಸತ್ತ ಜನರು ಕಾಂಗ್ರೆಸ್ನತ್ತ ಮರಳುತ್ತಿದ್ದು, ಬರುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ತಂಗಡಗಿ ಹೇಳಿದ್ದಾರೆ. 

ಭಾನುವಾರ ಸಂಜೆ ತಮ್ಮ ನಿವಾಸದಲ್ಲಿ ಯರಡೋಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 150ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿಯವರು ಪಂಚಾಯಿತಿ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಬಿಂಬಿಸಲು ಅಧಿಕಾರಿಗಳಿಗೆ ಧಮಕಿ ಹಾಕಿ ನರೇಗಾ ಕೂಲಿ ಕಾರ್ಮಿಕರನ್ನೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದೆ, ಶಾಸಕ ದಢೇಸ್ಗೂರರ ಸಾಧನೆ. ಇದರ ಬಗ್ಗೆ ನಮ್ಮ ಕಾರ್ಯಕರ್ತರು ವೀಡಿಯೋ, ಭಾವಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ. ಇದರ ಬಗ್ಗೆ ಮುಂದಿನ ಕ್ರಮಕ್ಕೆ ಪಕ್ಷ ಆಗ್ರಹಿಸಿ, ಕಾನೂನು ಮೊರೆ ಹೋಗಲಿದೆ. ಯರಡೋಣಾ ಭಾಗದ ನೂರಾರು ಕಾರ್ಯಕರ್ತರು ಬಿಜೆಪಿ ನಡೆಗೆ ಬೇಸತ್ತು ಕಾಂಗ್ರೆಸ್ಗೆ ಬಂದಿದ್ದಾರೆ.

Tap to resize

Latest Videos

ಡೀಸೆಲ್, ಪೆಟ್ರೋಲ್, ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದ್ದೇ ಬಿಜೆಪಿಯವರ ಮಹತ್ಸಾಧನೆ. ಸುಳ್ಳು ಭರವಸೆ ಬಿಜೆಪಿಯ ಬಂಡವಾಳ. ಬಿಜೆಪಿಯ ಮೋಹ ಜನರಿಂದ ಮರೆಯಾಗಿದ್ದು, ಬರುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗುವುದು ಎಂದರು.

'ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿದ ಜನನಾಯಕ'

ಈ ಸೇರ್ಪಡೆಯೊಂದಿಗೆ ಕಾಂಗ್ರೆಸ್ಬಲಗೊಳ್ಳುವ, ಅಧಿಕಾರಕ್ಕೆ ಬರುವ ಶುಭ ಸೂಚನೆಗೆ ನಾಂದಿ ಹಾಡಲಿದೆ. ಅನೇಕ ಭಾಗದ ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನಡೆಗೆ, ಶಾಸಕರ ನಿರ್ಲಕ್ಷ್ಯದ ವರ್ತನೆಗೆ ಬೇಸತ್ತು ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಅವರೆಲ್ಲಾ ಪಶ್ಚತ್ತಾಪಪಟ್ಟು ಕಾಂಗ್ರೆಸ್ಸೇರ್ಪಡೆಯಾಗುವರು ಎಂದರು.

ಪ್ರಮುಖರಾದ ಶಿವರೆಡ್ಡಿ ನಾಯಕ ವಕೀಲ, ಶರಣೇಗೌಡ ಮಾಲಿಪಾಟೀಲ್ಬೂದಗುಂಪಾ, ಶರಣಪ್ಪ ಸುಗ್ಗೇನಹಳ್ಳಿ, ಶರಣಪ್ಪ ಯರಡೋಣ ಮಾತನಾಡಿ, ಕಾಂಗ್ರೆಸ್ಟೀಕಿಸುವ ನೈತಿಕತೆ ಬಿಜೆಪಿಗೆ ಇಲ್ಲ. ಅವರು ತಮ್ಮ ವೈಫಲ್ಯ ಮರೆಮಾಚಲು ಆಗಾಗ ಟೀಕೆಯ ನಾಟಕವಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾಸೀಂಸಾಬ ಮಾತನಾಡಿ, ಬಿಜೆಪಿ ಬೆಂಬಲಿಸಿ ಭಾರಿ ನಿರಾಶರಾಗಿದ್ದೇವೆ. ನಮ್ಮಂತೆ ಅನೇಕರು ಬೇಸರಗೊಂಡಿದ್ದು, ಶೀಘ್ರದಲ್ಲೇ ಕಾಂಗ್ರೆಸ್‌ ಸೇರ್ಪಡೆ ಪರ್ವ ಆರಂಭವಾಗಲಿದೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಹುಲ್ಲೇಶ ಹೊಸ ಕುರುಬರ, ದಢೇಸ್ಗೂರು ಮಲ್ಲಪ್ಪ ಪ್ರಮುಖರಾದ ಶಿವಮೂರ್ತೆಪ್ಪ ಹಿರೇಕುರುಬರ, ಉಮೇಶ ಹೊಸ ಕುರುಬರ, ಕಾಸೀಂಸಾಬ ಸಾಹುಕಾರ, ಕುಂಟೋಜಿ ಮಲ್ಲಪ್ಪ, ಕಟಾಂಬ್ಲಿ ಜಗದೀಶ, ವೀರಭದ್ರಪ್ಪ, ಶ್ರೀನಿವಾಸ ಈಡಿಗೇರ, ಶರಣಪ್ಪ ಕುಂಟೋಜಿ ಸಹಿತ 150ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
 

click me!