ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಹಿರಿಯ ಮುಖಂಡ

By Kannadaprabha NewsFirst Published Aug 28, 2020, 11:36 AM IST
Highlights

ಜನಪರ ಕಾಳಜಿ ಹೊಂದಿದ್ದ ಹಿರಿಯ ಮುಖಂಡ ಇದೀಗ ತಮ್ಮ ಮೂಲ ಪಕ್ಷ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸ್ಥಳೀಯ ರಾಜಕಾರಣದಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾರೆ. 

ಪಾವಗಡ (ಆ.28):  ಸ್ಥಳೀಯ ನಾಯಕತ್ವ, ಸಾಮಾಜಿಕ ನ್ಯಾಯ ಹಾಗೂ ಪಕ್ಷದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಶಾಸಕ ವೆಂಕಟರಮಣಪ್ಪ ಅವರ ಸಮ್ಮುಖದಲ್ಲಿ ಹಿರಿಯ ಮುಖಂಡ ವೆಟನರಿ ಉಗ್ರಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಪಟ್ಟಣ ವಾಸಿ ಹಿರಿಯ ಮುಖಂಡ ದಲಿತ ನಾಯಕ ಆದರ್ಶ ನಗರದ ವೆಟನರಿ ಉಗ್ರಪ್ಪ ಅವರು, ಹಲವಾರು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ರಾಜಕಾರಣಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಿಜೆಪಿಯಲ್ಲಿ ಶಿಸ್ತಿನ ರಾಜಕಾರಣಿಯಾಗಿ ಜನಮನ್ನಣೆ ಗಳಿಸಿದ್ದರು. ಪಕ್ಷದ ಕೆಲ ಆಸಮಾಧಾನಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ತಮ್ಮ ಬೆಂಬಲಿಗರೊಂದಿಗೆ ತೋಟಕ್ಕೆ ತೆರಳಿದ ಅವರು ಬಿಜೆಪಿ ತೊರೆದು ಶಾಸಕ ವೆಂಕಟರಮಣಪ್ಪ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಸೇರಲು ಸಜ್ಜಾದ್ರು ಜೆಡಿಎಸ್ ಹಾಗೂ ಕೈ ಮುಖಂಡರು...

ಈ ಸಂಬಂಧ ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಬಿಜೆಪಿಯ ಸ್ಥಳೀಯ ರಾಜಕಾರಣ ಮತ್ತು ಕೆಲವರ ವೈಖರಿ ವಿರುದ್ಧ ಬೇಸತ್ತಿರುವುದಾಗಿ ತಿಳಿಸಿದ ಅವರು ಮಾಜಿ ಸಚಿವ ಮತ್ತು ಹಾಲಿ ಶಾಸಕ ವೆಂಕಟರಮಣಪ್ಪ ಅವರು ದಿಟ್ಟತನದ ರಾಜಕಾರಣಿ.

ಟಿಪ್ಪು ಬಗ್ಗೆ ವಿಶ್ವನಾಥ್‌ ಹೇಳಿಕೆ ನೀಡಬಾರದಿತ್ತು: ಈಶ್ವರಪ್ಪ...

ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಕೆಲಸ ಮಾಡುವ ವ್ಯಕ್ತಿತ್ವವುಳ್ಳವರಾಗಿದ್ದು ಬಡವ ಹಾಗೂ ಜನಪರ ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ತಾರತಮ್ಯವಿಲ್ಲ. ತಾಲೂಕು ಜನತೆ ನನ್ನವರೆಂಬ ಭಾವನೆ ಹೊಂದಿದ್ದಾರೆ. ಅವರ ನಾಯಕತ್ವ ಇಷ್ಟವಾಗಿದೆ. ಅಲ್ಲದೆ ಕಾಂಗ್ರೆಸ್‌ನಲ್ಲಿ ದಲಿತ ಮತ್ತು ಎಲ್ಲ ವರ್ಗದ ಬಡವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಇನ್ನೂ ಮಂದೆ ಕಾಂಗ್ರೆಸ್‌ನಲ್ಲಿಯೇ ಮುಂದುವರಿಯಲಿರುವುದಾಗಿ ಹೇಳಿದರು.

click me!