ತುಮಕೂರು: ಸಂಬಂಧಿಕರ ಬರ್ತಡೇ ಪಾರ್ಟಿಗೆ ಹೋಗಿದ್ದ ತಾಯಿ-ಮಗ ಸಾವು!

By Sathish Kumar KH  |  First Published Dec 5, 2024, 2:55 PM IST

ಸಂಬಂಧಿಕರೊಬ್ಬರ ಮನೆಯಲ್ಲಿ ಆಯೋಜನೆ ಮಾಡಿದ್ದ ಬರ್ತಡೇ ಪಾರ್ಟಿಯನ್ನು ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದ ಬೈಕ್ ಅಪಘಾತವಾಗಿದ್ದು, ತಾಯಿ-ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ.


ತುಮಕೂರು (ಡಿ.05): ಸಂಬಂಧಿಕರ ಮೆನೆಗೆ ಹೋಗಿ ಅದ್ಧೂರೊಯಾಗಿ ಆಯೋಜನೆ ಮಾಡಲಾಗಿದ್ದ ಬರ್ತಡೆ ಪಾರ್ಟಿ ಮುಗಿಸಿಕೊಂಡು ವಾಪಸ್ ಬೈಕ್‌ನಲ್ಲಿ ಮನೆಗೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ದಾರುಣ ಸಾವಿಗೀಡಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಮೃತರನ್ನು ಉಮಾ (50) ಹಾಗೂ ವಿನೋದ್ (24) ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ ಯಲ್ಲಾಪುರ ಬಳಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ವೇಳೆ ಬೈಕ್‌ನಲ್ಲಿ ಹೋಗುವಾಗ, ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ. ಅಪರಿಚಿತ ವಾಹನ ಡಿಕ್ಕಿಯಿಂದ ಗಂಭೀರ ಗಾಯಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದ ಇಬ್ಬರ ನೆರವಿಗೆ ಯಾರೂ ಬಂದಿಲ್ಲ. ಇನ್ನು ಡಿಕ್ಕಿ ಹೊಡೆದ ವಾಹನ ಸವಾರರೂ ಕೂಡ ನೆರವಿಗೆ ಬಾರದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

ಇನ್ನು ಮೃತ ಉಪಾ ಅವರು ಪಾವಗಡ ಮೂಲದವರಾಗಿದ್ದಾರೆ. ಇವರು ಕಳೆದ ಎರಡು ದಿನಗಳ ಹಿಂದೆ ತುಮಕೂರು ತಾಲೂಕಿನ ಅರಕೆರೆಯಲ್ಲಿ ವಾಸವಾಗಿದ್ದ ತನ್ನ ತಂಗಿ ಮನೆಗೆ ಬಂದಿದ್ದರು. ನಿನ್ನೆ ಸಂಜೆ ತನ್ನ ತಂಗಿಯ ಮಗ ವಿನೋದ್ ಜೊತೆ ಯಲ್ಲಾಪುರದಲ್ಲಿ ಸಂಬಂಧಿಕರೊಬ್ಬರ ಬರ್ತಡೆ ಪಾರ್ಟಿಗೆ ತೆರಳಿದ್ದರು. ರಾತ್ರಿ ಬರ್ತಡೆ ಪಾರ್ಟಿಯಲ್ಲಿ ಊಟ ಮುಗಿಸಿಕೊಂಡು ಮನೆಗೆ ಬೈಕ್ ನಲ್ಲಿ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ₹2.5 ಕೋಟಿ ಪೀಕಿದ ಹೈಸ್ಕೂಲ್ ಬಾಯ್‌ಫ್ರೆಂಡ್‌ಗೆ ತನು, ಮನ, ಧನ ಮತ್ತು ದೇಹವನ್ನೂ ಅರ್ಪಿಸಿದ ಯುವತಿ!

ಇನ್ನು ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!