Tumakur : ಕಾಡುಗೊಲ್ಲ ಜನಾಂಗದ ನನಗೆ ಟಿಕೆಟ್‌ ನೀಡಿ : ದೊಡ್ಡಯ್ಯ

By Kannadaprabha News  |  First Published Mar 28, 2023, 10:55 AM IST

ಸಕ್ರಿಯ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ದುಡಿಯುತ್ತಿದ್ದು, ಹಿಂದುಳಿದ ವರ್ಗಕ್ಕೆ ಮನ್ನಣೆ ನೀಡಲು ನಿರ್ಧರಿಸಿದಲ್ಲಿ ಗುಬ್ಬಿ ಕ್ಷೇತ್ರದಲ್ಲಿ ನಿರ್ಣಾಯಕರಾದ ಕಾಡು ಗೊಲ್ಲ ಜನಾಂಗದ ನನಗೆ ಟಿಕೆಟ್‌ ನೀಡಿ ಎಂದು ನಿವೃತ್ತ ಸರ್ಕಾರಿ ಅಭಿಯೋಜಕ ಬಿ.ದೊಡ್ಡಯ್ಯ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದರು.


 ಗುಬ್ಬಿ :  ಸಕ್ರಿಯ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ದುಡಿಯುತ್ತಿದ್ದು, ಹಿಂದುಳಿದ ವರ್ಗಕ್ಕೆ ಮನ್ನಣೆ ನೀಡಲು ನಿರ್ಧರಿಸಿದಲ್ಲಿ ಗುಬ್ಬಿ ಕ್ಷೇತ್ರದಲ್ಲಿ ನಿರ್ಣಾಯಕರಾದ ಕಾಡು ಗೊಲ್ಲ ಜನಾಂಗದ ನನಗೆ ಟಿಕೆಟ್‌ ನೀಡಿ ಎಂದು ನಿವೃತ್ತ ಸರ್ಕಾರಿ ಅಭಿಯೋಜಕ ಬಿ.ದೊಡ್ಡಯ್ಯ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗುಬ್ಬಿಯಲ್ಲಿ 35 ಸಾವಿರ ಮತಗಳಿರುವ ಕಾಡುಗೊಲ್ಲರು ಹಿಂದುಳಿದ ವರ್ಗದಲ್ಲಿ ಅತೀ ಹಿಂದುಳಿದು ಸಮಾಜದ ಮುಖ್ಯವಾಹಿನಿಗೆ ಬರಲಾಗದೆ ನಾಗರಿಕತೆಯಿಂದ ದೂರ ಉಳಿದಿದ್ದಾರೆ. ಇಂತಹ ಅನೇಕ ಸಮಾಜವನ್ನು ಮೇಲೆತ್ತುವ ಜೊತೆಗೆ ಇತರೆ ಜನಾಂಗದ ಮತಗಳು ಗಳಿಸುವ ಶಕ್ತಿ ಇದೆ. ಜನ ಸೇವೆ ಮಾಡುವ ಈ ಉತ್ಸುಕತೆ ಇರುವ ನನಗೆ ಬಿಜೆಪಿ ಟಿಕೆಟ್‌ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

Latest Videos

undefined

ಬಿಜೆಪಿ ಶಾಸಕ ಎನ್. ವೈ. ಗೋಪಾಲಕೃಷ್ಣ ಒಲವು ಕಾಂಗ್ರೆಸ್ ನತ್ತ?

ಕಾಡುಗೊಲ್ಲ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ಡಾ.ದೊಡ್ಡ ಮಲ್ಲಯ್ಯ ಮಾತನಾಡಿ, ಕಾಡುಗೊಲ್ಲರಿಗೆ ಟಿಕೆಟ್‌ ನೀಡಿದಲ್ಲಿ 11 ಜಿಲ್ಲೆ 40 ಕ್ಷೇತ್ರದಲ್ಲಿ ಲಾಭ ಬರುತ್ತದೆ ಎನ್ನುವ ಅಂಶ ಮನಗಾಣಬೇಕು. ಬಿ.ದೊಡಯ್ಯ ಅವರು ಸ್ಥಳೀಯರಾಗಿದ್ದು ಜನ ಸೇವೆಗೆ ಬಹಳ ಉತ್ಸುಕತೆ ತೋರುತ್ತಾರೆ. ಬಿಜೆಪಿ ಓಬಿಸಿಗೆ ಮಾನ್ಯತೆ ನೀಡಿದಲ್ಲಿ ದೊಡ್ಡಯ್ಯ ಅವರನ್ನು ಅಭ್ಯರ್ಥಿಯಾಗಿ ನಮಗೂ ರಾಜಕೀಯ ಶಕ್ತಿ ತುಂಬಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಡುಗೊಲ್ಲರ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಾರಣ್ಣ, ಮುಖಂಡರಾದ ಪಿ.ಆರ್‌.ಶ್ರೀನಿವಾಸಮೂರ್ತಿ, ಜಗದೀಶ್‌, ಜೋಗಯ್ಯ, ಗಂಗಾಧರಯ್ಯ, ಪಾತರಾಜು, ಹರೀಶ್‌, ಶಿವಲಿಂಗಯ್ಯ, ಗಿರಿಯಪ್ಪ, ವಿರೂಪಾಕ್ಷಯ ಇತರರು ಇದ್ದರು.

ಬಿಜೆಪಿ ಹಿರಿಯ ನಾಯಕ ಕಾಂಗ್ರೆಸ್‌ಗೆ

ಬೆಂಗಳೂರು(ಮಾ.28):  ಹಿರಿಯ ರಾಜಕಾರಣಿ, ಕೂಡ್ಲಗಿಯ ಬಿಜೆಪಿ ಹಾಲಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ.

ಮೊಳಕಾಲ್ಮೂರು, ಬಳ್ಳಾರಿ ಹಾಗೂ ಕೂಡ್ಲಗಿಯಿಂದ ಆರು ಬಾರಿ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಪ್ರಸ್ತುತ ಕೂಡ್ಲಗಿಯಿಂದ ಶಾಸಕರಾಗಿದ್ದಾರೆ. ಗೋಪಾಲಕೃಷ್ಣ ಅವರು ಸೋಮವಾರ ರಾತ್ರಿ ರಾಜಾನುಕುಂಟೆ ಸಮೀಪದ ರೆಸಾರ್ಚ್‌ ಒಂದರಲ್ಲಿ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದರು.

ಟಿಪ್ಪು ಕುರಿತ ಬಿಜೆಪಿ ಸುಳ್ಳು ಇತಿಹಾಸಕಾರರಿಂದ ಬಯಲು: ಡಿಕೆಶಿ

ಎಐಸಿಸಿ ಪರಿಶೀಲನಾ ಸಮಿತಿ ಸಭೆ ವೇಳೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುರ್ಮಾ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಈ ವೇಳೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನೂ ಚರ್ಚಿಸಿದ್ದು ಸದ್ಯದಲ್ಲೇ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಸಾಧ್ಯತೆಯಿದೆ.

click me!