ಚಿಕ್ಕಮಗಳೂರು: ಆಡಿ ಕಾರು-ಬೈಕ್‌ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಓರ್ವ ಸಾವು

Published : May 02, 2023, 09:53 PM IST
ಚಿಕ್ಕಮಗಳೂರು: ಆಡಿ ಕಾರು-ಬೈಕ್‌ ಮುಖಾಮುಖಿ ಡಿಕ್ಕಿ, ಸ್ಥಳದಲ್ಲೇ ಓರ್ವ ಸಾವು

ಸಾರಾಂಶ

ವೇಗವಾಗಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ತುಂಬ ರಕ್ತ ಹರಡಿಕೊಂಡಿದೆ. ಬೈಕಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗುರುತು ಸಿಗದಂತೆ ಹಾಳಾಗಿದೆ. ಅಪಘಾತವಾದ ಕೂಡಲೇ ಕಾರಿನ ಚಾಲಕ ಎಸ್ಕೇಪ್ ಆಗಲು ಯತ್ನಸಿದ್ದ ಎಂದು ಹೇಳಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದ ಈ ಅಪಘಾತದ ತೀವ್ರತೆ ರಸ್ತೆಯಲ್ಲಿ ಚೆಲ್ಲಿದ ರಕ್ತದಿಂದ ಸಾಬೀತಾಗುವಂತಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.02): ಆಡಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗೇಟ್ ಬಳಿ ಇಂದು(ಮಂಗಳವಾರ) ನನಡೆದಿದೆ. ಮೃತನನ್ನ ದರ್ಶನ್(28) ಎಂದು ಗುರುತಿಸಲಾಗಿದೆ. 

ವೇಗವಾಗಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ತುಂಬ ರಕ್ತ ಹರಡಿಕೊಂಡಿದೆ. ಬೈಕಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗುರುತು ಸಿಗದಂತೆ ಹಾಳಾಗಿದೆ. ಅಪಘಾತವಾದ ಕೂಡಲೇ ಕಾರಿನ ಚಾಲಕ ಎಸ್ಕೇಪ್ ಆಗಲು ಯತ್ನಸಿದ್ದ ಎಂದು ಹೇಳಲಾಗಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದ ಈ ಅಪಘಾತದ ತೀವ್ರತೆ ರಸ್ತೆಯಲ್ಲಿ ಚೆಲ್ಲಿದ ರಕ್ತದಿಂದ ಸಾಬೀತಾಗುವಂತಿದೆ. 

ಚುನಾವಣಾ ಕರ್ತವ್ಯಕ್ಕೆ ಹೊರಟಿದ್ದ ಬಸ್ ಪಲ್ಟಿ, ಹಲವರಿಗೆ ಗಾಯ!

ಅಪಘಾತವಾಗುತ್ತದ್ದಂತೆ ಬೈಕ್ ಸವಾರ ದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದರೆ ಬೈಕಿನ ಹಿಂಬದಿ ಸವಾರ ಶಶಿಕುಮಾರ್ ಎಂಬುವನಿಗೆ ತೀವ್ರ ಗಾಯವಾಗಿದ್ದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರು ಚಾಲಕನ ವೇಗವೇ ಕಾರಣ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು