ಅಂಗರಗುಡ್ಡೆ ರಸ್ತೆಗಳಿಗೆ ತುಳು ನಾಮಫಲಕ

By Kannadaprabha NewsFirst Published May 31, 2020, 10:03 AM IST
Highlights

ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ರಸ್ತೆಯ ಮಾರ್ಗಸೂಚಿ ಬೋರ್ಡ್‌ಗಳನ್ನು ತುಳು ಲಿಪಿಯಲ್ಲಿ ಬರೆದು ಅತಿಕಾರಿಬೆಟ್ಟು ಮಾದರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದ್ದಾರೆ.

ಮಂಗಳೂರು(ಮೇ 31): ತುಳು ಭಾಷೆಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ರಸ್ತೆಯ ಮಾರ್ಗಸೂಚಿ ಬೋರ್ಡ್‌ಗಳನ್ನು ತುಳು ಲಿಪಿಯಲ್ಲಿ ಬರೆದು ಅತಿಕಾರಿಬೆಟ್ಟು ಮಾದರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಹೇಳಿದರು. ಮೂಲ್ಕಿಯ ಅತಿಕಾರಿ ಗ್ರಾ.ಪಂ. ವ್ಯಾಪ್ತಿಯಲ್ಲಿನ 10 ತುಳು ಲಿಪಿ ಇರುವ ಮಾರ್ಗ ಸೂಚಿ ಬೋರ್ಡ್‌ಗಳನ್ನು ಉದ್ಘಾಟಿಸಿದ್ದಾರೆ.

ಅತಿಕಾರಿಬೆಟ್ಟು ಗ್ರಾ. ಪಂ. ನ ಶಿಮಂತೂರು ಗ್ರಾಮದ ಅಂಗಾರಗುಡ್ದೆಯ ಒಟ್ಟು ಹತ್ತು ರಸ್ತೆಗಳಿಗೆ ಈ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ ಬೊಳ್ಳೂರು, ತಾ.ಪಂ. ಸದಸ್ಯ ಶರತ್‌ ಕುಬೆವೂರು, ಅತಿಕಾರಿಬೆಟ್ಟು ಪಂಚಾಯಿತಿ ಅಧ್ಯಕ್ಷೆ ಶಾರಾದಾ ವಸಂತ್‌, ಸದಸ್ಯರಾದ ಸದಸ್ಯ ಜೀವನ್‌ ಶೆಟ್ಟಿ, ಕಿನ್ನಿಗೋಳಿ ಪಂಚಾಯಿತಿ ಸದಸ್ಯ ದೇವಪ್ರಸಾದ್‌ ಪುನರೂರು, ಬಿಜೆಪಿ ಮೂಲ್ಕಿ- ಮೂಡುಬಿದಿರೆ ಮಂಡಲಾಧ್ಯಕ್ಷ ಸುನೀಲ್‌ ಅಳ್ವ, ಧಾರ್ಮಿಕ ಪರಿಷ್ಯತ್‌ ಸದಸ್ಯ ಭುವನಾಭಿರಾಮ ಉಡುಪ, ಕೇಶವ ಕರ್ಕೇರ, ಈಶ್ವರ್‌ ಕಟೀಲ್‌, ಪಿಡಿಒ ರವಿ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಡಿಕೆಶಿ ಹಗಲುಗನಸು, ಬಿಎಸ್‌ವೈ ಪೂರ್ಣಾವಧಿ ಸಿಎಂ ಆಗ್ತಾರೆ: ನಳಿನ್

ತುಳು ಭಾಷೆ ಅಳಿವಿನಂಚಿನಲ್ಲಿದೆ. ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಜನ ನಮ್ಮ ಮಾತೃ ಭಾಷೆಯನ್ನು ಮರೆಯುತ್ತಿದ್ದಾರೆ. ತುಳು ಭಾಷೆ ಬಗ್ಗೆ ಅಭಿಮಾನ ಇದ್ದರೆ ತುಳು ಭಾಷೆ ಉಳಿಸಿ ಬೆಳೆಸುವ ಕಾರ್ಯ ಆಗುತ್ತದೆ. ಗ್ರಾಮದಲ್ಲಿ ತುಳು ಭಾಷೆ ಬಗ್ಗೆ ಜನ ಸ್ವಲ್ಪವಾದರೂ ತಿಳಿದುಕೊಳ್ಳಬೇಕು. ಈ ದೃಷ್ಟಿಯಿಂದ ಮತ್ತು ನನಗೆ ತುಳು ​ಭಾಷೆಯ ಮೇಲಿನ ಅಭಿಮಾನದಿಂದ ಈ ಕೆಲಸ ಮಾಡಲು ಸಾಧ್ಯವಾಯಿತು ಎಂದು ಅತಿಕಾರಿಬೆಟ್ಟು ಗ್ರಾ. ಪಂ. ಸದಸ್ಯ ಜೀವನ್‌ ಶೆಟ್ಟಿಅಂಗರಗುಡ್ಡೆ ತಿಳಿಸಿದ್ದಾರೆ.

click me!