ಹಾಸನ: ಟಿಟಿ ವಾಹನ- ಬೈಕ್ ನಡುವೆ ಅಪಘಾತ, ಓರ್ವನ ಸಾವು, ಸ್ಥಳಕ್ಕೆ ಬಾರದ ಪೊಲೀಸರು

Suvarna News   | Asianet News
Published : Jul 29, 2020, 12:36 PM IST
ಹಾಸನ: ಟಿಟಿ ವಾಹನ- ಬೈಕ್ ನಡುವೆ ಅಪಘಾತ, ಓರ್ವನ ಸಾವು, ಸ್ಥಳಕ್ಕೆ ಬಾರದ ಪೊಲೀಸರು

ಸಾರಾಂಶ

ಬೆಳ್ಳಂ ಬೆಳಗ್ಗೆ ರಸ್ತೆ ಅಪಘಾತ| ಬೈಕ್ ಸವಾರ ಸಾವು| ಬೈಕ್‌ ಸವಾರ ಸಾವನಪ್ಪಿ ಅರ್ಧಗಂಟೆಯಾದರೂ ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್, ಪೊಲೀಸರು| ಅರ್ಧಗಂಟೆಯಿಂದ ರಸ್ತೆ ಮಧ್ಯದಲ್ಲೇ ಬಿದ್ದ ಮೃತದೇಹ| ರಸ್ತೆ ತೆರವುಗೊಳಿಸದ ಹಿನ್ನಲೆ ಟ್ರಾಫಿಕ್ ಜಾಮ್|

ಹಾಸನ(ಜು.29): ಟಿಟಿ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಹಾಸನ-ಹೊಳೆನರಸೀಪುರ ರಸ್ತೆಯ ಗೋಗೋ ಫ್ಯಾಕ್ಟರಿ ಎದುರು ಇಂದು(ಬುಧವಾರ) ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಗುರುತು ಪತ್ತೆಯಾಗಿಲ್ಲ.

ಟಿಟಿ ವಾಹನದ ಚಾಲಕನ ಅಜಾಗರೂಕತೆಯಿಂದ ಅವಘಡ ಸಂಭವಿಸಿದ ಎಂದು ಹೇಳಲಾಗುತ್ತಿದೆ.  ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾನೆ. 

ಕರ್ತವ್ಯದಲ್ಲಿದ್ದ ಎಎಸ್ಐ ಬೈಕ್ ಅಪಘಾತದಲ್ಲಿ ಸಾವು

ಬೈಕ್‌ ಸವಾರ ಸಾವನಪ್ಪಿ ಅರ್ಧಗಂಟೆಯಾಗಿದ್ದರೂ ಆಂಬ್ಯುಲೆನ್ಸ್ ಹಾಗೂ ಪೊಲೀಸರು ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಷ್ಟಾದ್ರೂ ಪೊಲೀಸರು ಬಂದು ರಸ್ತೆ ತೆರವುಗೊಳಿಸದ ಹಿನ್ನಲೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಹೀಗಾಗಿ ಮೃತದೇಹ ಅರ್ಧಗಂಟೆಯಿಂದ ರಸ್ತೆ ಮಧ್ಯೆದಲ್ಲೇ ಬಿದ್ದಿತ್ತು.
 

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!