ಮಡಿಕೇರಿ (ಆ.3) : ಕೊಡಗಿನ ಪಶ್ಚಿಮ ಘಟ್ಟಪ್ರದೇಶದಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮಡಿಕೇರಿ ತಾಲೂಕಿನ ಕೊಯನಾಡು ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿ ಮನೆಗಳು ಜಲಾವೃತಗೊಂಡಿವೆ. ಕೊಯನಾಡಿನಲ್ಲಿ ಪಯಸ್ವಿನಿ ನದಿ ಪ್ರವಾಹದಿಂದ ಕಿಂಡಿ ಅಣೆಕಟ್ಟು ಬಳಿ ನಾಲ್ಕೈದು ಮನೆಗಳು ಜಲಾವೃತವಾಗಿದ್ದು, ರಾತ್ರಿಯೇ ಸಂತ್ರಸ್ತ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಕಿಂಡಿ ಅಣೆಕಟ್ಟಿನ ಅವೈಜ್ಞಾನಿಕ ನಿರ್ಮಾಣದಿಂದ ಮನೆಗಳು ಜಲಾವೃತವಾಗಿದ್ದು, ಇಲ್ಲಿ ಕಿಂಡಿಅಣೆಕಟ್ಟು ನಿರ್ಮಾಣ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಮಧ್ಯಾಹ್ನ ವೇಳೆಗೆ ಪ್ರವಾಹದ ನೀರು ಇಳಿಕೆಯಾಗಿದ್ದು, ಜಲಾವೃತವಾಗಿದ್ದ ಮನೆಗಳಿಂದಲೂ ನೀರು ತಗ್ಗುತ್ತಿದೆ.
undefined
KODAGU: ಸ್ಥಳೀಯ ರೈತರಿಗೆ ಹಾರಂಗಿ ಹಿನ್ನೀರಿನಲ್ಲಿ ಮೀನುಗಾರಿಕೆ ಪರವಾನಗಿಗೆ ರೈತ ಸಂಘ ಆಗ್ರಹ
ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಮರದ ದಿಮ್ಮಿಗಳು ತೇಲಿ ಬಂದಿದ್ದು, ಇದರಿಂದಾಗಿ ನೀರು ಸರಾಗವಾಗಿ ಹರಿಯಲಾಗದೆ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಕೊಯಿನಾಡಿನ 5 ಮನೆಗಳಿಗೆ ಸೋಮವಾರ ರಾತ್ರಿ ನೀರು ನುಗ್ಗಿದೆ. ನೀರು ನುಗ್ಗಿ ಮನೆಯ ಒಂದು ಭಾಗ ಭಾಗಶಃ ಕುಸಿದು ಬಿದ್ದಿದೆ. ಮನೆಗಳಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ಕಿಂಡಿಅಣೆಕಟ್ಟಿನಲ್ಲಿ ಸಿಲುಕಿದ್ದ ಮರದ ದಿಮ್ಮಿಗಳನ್ನು ಅರಣ್ಯ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ತೆರವುಗೊಳಿಸಿದರು.
ಕೊಯನಾಡು ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಸತೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಕಿಂಡಿ ಅಣೆಕಟ್ಟೆಯನ್ನು ಈ ಭಾಗದ ಜನರಿಗೆ ಅನುಕೂಲವಾಗಲಿ ಎಂದು ಮಾಡಲಾಯಿತು. ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಅಣೆಕಟ್ಟನ್ನು ಸರಿಯಾದ ಸ್ಥಳದಲ್ಲಿ ಮಾಡಿಲ್ಲ ಎನಿಸುತ್ತಿದೆ. ಇದರಿಂದಾಗಿ ಐದು ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ. ವಿಶೇಷ ಪ್ರಕರಣದಡಿಯಲ್ಲಿ ಐದು ಮನೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ. ಜನರು ಒಪ್ಪಿದರೆ ಅವರಿಗೆ ಬೇರೆಕಡೆ ಮನೆಗಳನ್ನು ನಿರ್ಮಿಸಿಕೊಡಲಾವುಗುದು ಎಂದರು.
ಕೊಡಗಿನಲ್ಲಿ ಸಾವಿರ ಎಕರೆಯಲ್ಲಿ ಯಾಂತ್ರೀಕೃತ ಭತ್ತ ಬೇಸಾಯ: ಸುಜಾ ಕುಶಾಲಪ್ಪ
ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭಾರೀ ಗಾತ್ರದ ಮರ ಬಿದ್ದು ಕೆಲ ಕಾಲ ಸಂಚಾರಕ್ಕೆ ಸಮಸ್ಯೆಯುಂಟಾಯಿತು. ಮಡಿಕೇರಿ ತಾಲೂಕಿನ ಕೊಯಿನಾಡು ಬಳಿ ಬಿದ್ದಿದ್ದ ಮರವನ್ನು ಜೆಸಿಬಿ ಬಳಸಿ ತೆರವುಗೊಳಿಸಿ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು