ಬಾಗಲಕೋಟೆ: ಅನ್ನಭಾಗ್ಯ ಯೋಜನೆಯಡಿ ಅಕ್ರಮ ಅಕ್ಕಿ ಸಾಗಾಟ, ಲಾರಿ ವಶ

By Suvarna News  |  First Published Dec 6, 2020, 12:41 PM IST

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಚೀಲ ತುಂಬಿದ ಲಾರಿ ವಶ| ಬಾಗಲಕೋಟೆ ಎಪಿಎಂಸಿಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳ ದಾಳಿ| ದಾಳಿ ವೇಳೆ ಅಂದಾಜು 110 ಕ್ವಿಂಟಲ್ ಅಕ್ಕಿ ಚೀಲ ತುಂಬಿದ ಲಾರಿ ವಶಕ್ಕೆ ಪಡೆದ ಪೊಲೀಸರು| 
 


ಬಾಗಲಕೋಟೆ(ಡಿ.06):  ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನ ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನಗರದ ಎಪಿಎಂಸಿಯಲ್ಲಿ ಇಂದು(ಭಾನುವಾರ) ನಡೆದಿದೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅನ್ನ ಭಾಗ್ಯ ಯೋಜನೆ ಅಕ್ಕಿ ಚೀಲಗಳಿಂದ ತುಂಬಿದ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆ ಆಹಾರ ಇಲಾಖೆ ಡಿಡಿ ಶ್ರೀಶೈಲ್ ಕಂಕಣವಾಡಿ ನೇತೃತ್ವದಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು, ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Tap to resize

Latest Videos

ಪುರಸಭೆ ಸದಸ್ಯೆ ಗರ್ಭಪಾತ: ಸಿದ್ದು ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಸರ್ಕಾರದಿಂದ ವಿವಿಧ ಯೋಜನೆಯಡಿ ಅಕ್ಕಿ ವಿತರಣೆಯಾಗುತ್ತಿತ್ತು ಹಾಗೂ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪಾಕೆಟ್‌ಗಳೂ ಸಹ ಪತ್ತೆಯಾಗಿವೆ. ಅಕ್ರಮವಾಗಿ ಸಾಗಾಟ  ಮಾಡುತ್ತಿದ್ದ  ಅಂದಾಜು 110 ಕ್ವಿಂಟಲ್ ಅಕ್ಕಿ ಚೀಲ ತುಂಬಿದ ಲಾರಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

click me!