ಕುಕ್ಕೆ ದೇವಾಲಯದ ವಿರುದ್ಧ ಗರಂ ಆಯ್ತು ಭಕ್ತ ವೃಂದ

Kannadaprabha News   | Asianet News
Published : Dec 06, 2020, 12:25 PM ISTUpdated : Dec 06, 2020, 02:34 PM IST
ಕುಕ್ಕೆ ದೇವಾಲಯದ ವಿರುದ್ಧ ಗರಂ ಆಯ್ತು ಭಕ್ತ ವೃಂದ

ಸಾರಾಂಶ

ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವಿರುದ್ಧ ಭಕ್ತ ವೃಂದ ಗರಂ ಆಗಿದೆ. ಭಕ್ತರು ದೇವಾಲಯದ ಮೇಲೆ ಗರಂ ಆಗಲು ಕಾರಣ ಏನು..?

ಮಂಗಳೂರು (ಡಿ.06):  ಆಶ್ಲೇಷ ಪೂಜೆ ಮಾಡಿಸಲು ಕುಕ್ಕೆಯಲ್ಲಿ ಭಾರೀ ಜನಜಂಗುಳಿ ಸೇರಿದ್ದು,  ಆನ್‌ಲೈನ್ ಬುಕ್ಕಿಂಗ್ ಬದಲು ದೇವಸ್ಥಾನದಲ್ಲೇ ಟಿಕೆಟ್ ಪಡೆಯಲು ಸೂಚನೆ ನೀಡಿದ ಹಿನ್ನೆಲೆ ಹೆಚ್ಚಿನ ಜನ ಸೇರಿದ್ದಾರೆ. 

"

 ರಾತ್ರಿಯೇ ಕ್ಷೇತ್ರಕ್ಕೆ ಬಂದಿರುವ ಸಾವಿರಾರು ಭಕ್ತರು ಆಶ್ಲೇಷ ಪೂಜೆ ಟಿಕೆಟ್ ಮಾಡಿಸಲು ಕೌಂಟರ್ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ರಾತ್ರಿ 12 ಗಂಟೆಯಿಂದ ಬೆ.7 ಗಂಟೆಯವರೆಗೆ ಕುಕ್ಕೆಯಲ್ಲಿ ಭಾರೀ ಜನಜಂಗುಳಿ ಸೇರಿದ್ದು ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ ಮಾಡಿಸಲು ಆಗಮಿಸಿದ್ದಾರೆ. 

ರಾಜ್ಯದ ಶ್ರೀಮಂತ ಕುಕ್ಕೆ ದೇಗುಲದಲ್ಲೊಂದು ಮಹತ್ವದ ಬದಲಾವಣೆ .

ದೇವಸ್ಥಾನದ ಎದುರು ಮತ್ತು ರಥಬೀದಿಯಲ್ಲಿ ಭಕ್ತರ ದಂಡು ಸೇರಿದ್ದು, ನಿರ್ಲಕ್ಷ್ಯ ವಹಿಸಿದ ಆಡಳಿತ ಮಂಡಳಿ ವಿರುದ್ದ  ಗರಂ ಆಗಿದ್ದಾರೆ. 
 

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?