ಕೂಡ್ಲಿಗಿ ಬಳಿ ಲಾರಿ ಪಲ್ಟಿ: ರಸ್ತೆ ತುಂಬಾ ಚೆಲ್ಲಾಡಿದ ಎಳನೀರು

By Kannadaprabha News  |  First Published Feb 15, 2021, 10:53 AM IST

ಮಂಡ್ಯದಿಂದ ದೆಹಲಿಗೆ ತೆಂಗಿನ ಕಾಯಿಗಳನ್ನು ಸಾಗಿಸುತ್ತಿದ್ದ ಲಾರಿ| ವಿಜಯನಗರ ಜಿಲ್ಲೆಯ ಕೂಡ್ಲಿಗಿ ಸಮೀಪದ ಹನಸಿ ಕ್ರಾಸ್‌ ಬಳಿ ನಡೆದ ಅಪಘಾತ| ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ| ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ|   


ಕೂಡ್ಲಿಗಿ(ಫೆ.15): ಸಮೀಪದ ಹನಸಿ ಕ್ರಾಸ್‌ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆಯಲ್ಲಿ ಉರುಳಿದ ಪರಿಣಾಮ ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಲಾರಿ ಉರುಳಿದ ರಭಸಕ್ಕೆ ರಸ್ತೆಯ ತುಂಬಾ ಎಳನೀರು(ತೆಂಗಿನಕಾಯಿ) ಹರಡಿದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ.

ಮಂಡ್ಯದಿಂದ ದೆಹಲಿಗೆ ತೆಂಗಿನ ಕಾಯಿಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಕೂಡ್ಲಿಗಿ ಸಮೀಪ ಹನಸಿ ಕ್ರಾಸ್‌ ಸಮೀಪ ಬಂದಾಗ ಶನಿವಾರ ನಸುಕಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. 

Tap to resize

Latest Videos

ಹೊಸಪೇಟೆ: ಕಾರಿಗೆ ಲಾರಿ ಡಿಕ್ಕಿ, ಬಿಇಒಗೆ ಗಾಯ

ಸುದ್ದಿ ತಿಳಿದ ತಕ್ಷಣ ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ ಇಬ್ಬರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ನಂತರ ಕ್ರೇನ್‌ ಮೂಲಕ ಲಾರಿಯನ್ನು ಎತ್ತಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ಕುರಿತು ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!