ಕೂಡ್ಲಿಗಿ: ಹೆದ್ದಾರಿ ಪಕ್ಕ ಮನೆಗಳ ಮುಂದೆ ಉರುಳಿದ ಲಾರಿ, ತಪ್ಪಿದ ಭಾರೀ ದುರಂತ

By Kannadaprabha NewsFirst Published Jul 9, 2020, 11:19 AM IST
Highlights

ಹೈವೇ ರಸ್ತೆಯಿಂದ ಸರ್ವೀಸ್‌ ರಸ್ತೆಗೆ ತಿರುವು ಪಡೆಯು​ತ್ತಿ​ರುವ ಸಂದ​ರ್ಭ​ದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿಬಿದ್ದ ಲಾರಿ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ನಡೆದ ಘಟನೆ| ರಸ್ತೆಯ ಪಕ್ಕದಲ್ಲಿದ್ದ ಮನೆಗಳ ಮುಂದೆ ಉರುಳಿ ಬಿದ್ದ ಲಾರಿ|

ಕೂಡ್ಲಿಗಿ(ಜು.09): ತಾಲೂಕಿನ ಮೊರಬ ಗ್ರಾಮದಿಂದ ಬೆಂಗಳೂರಿಗೆ ಪಪ್ಪಾಯಿ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಹೈವೇ ರಸ್ತೆಯಿಂದ ಸರ್ವೀಸ್‌ ರಸ್ತೆಗೆ ತಿರುವು ಪಡೆಯು​ತ್ತಿ​ರುವ ಸಂದ​ರ್ಭ​ದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಉರುಳಿಬಿದ್ದಿರುವ ಘಟನೆ ಮಂಗಳವಾರ ರಾತ್ರಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್‌ ಲಾರಿಯಲ್ಲಿದ್ದವರಿಗೂ ಹಾಗೂ ಜನರಿಗೆ ಯಾವುದೇ ಅಪಾಯಗಳಾಗಿಲ್ಲ.

ಈ ಹಿಂದೆ ಮಳೆ ಬಂದಾಗ ರಾಷ್ಟ್ರೀಯ ಹೆದ್ದಾರಿಯ ನೀರು ಬಣವಿಕಲ್ಲು ಗ್ರಾಮದ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಸರ್ವೀಸ್‌ ರಸ್ತೆಯನ್ನು ಸರಿಯಾಗಿ ನಿರ್ಮಿಸಿದೇ ಹೆದ್ದಾರಿ ಪಕ್ಕದಲ್ಲಿ ಸರಿಯಾಗಿ ಮಣ್ಣು ಹಾಕದೇ ಕಳಪೆ ಕಾಮಗಾರಿ ಮಾಡಿರುವುದು ಇಷ್ಟೆಲ್ಲ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. 

ಶಿರಾ: ಕಾರು ಉರುಳಿ ಬಿದ್ದು ಮೂವರ ಯುವಕರ ದುರ್ಮರಣ

ತಹಸೀಲ್ದಾರ್‌ ಗ್ರಾಮಕ್ಕೆ ಬಂದು ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವವರಿಗೆ ರಸ್ತೆ ಸರಿಪಡಿಸುವಂತೆ ತಿಳಿಸುತ್ತೇನೆ ಎಂದು ಹೇಳಿದರೂ ಇಲ್ಲಿಯವರೆಗೂ ಕೆಲಸವಾಗಿಲ್ಲ. ಈಗ ಲಾರಿ ರಸ್ತೆಯ ಪಕ್ಕದಲ್ಲಿದ್ದ ಮನೆಗಳ ಮುಂದೆ ಉರುಳಿದೆ. ಹಗಲಾಗಿದ್ದರೆ ಹತ್ತಾರು ಮಕ್ಕಳು ಆಟವಾಡುತ್ತಿದ್ದರು. ಅವರ ಪ್ರಾಣಕ್ಕೆ ಸಂಚಕಾರ ಬರುತಿತ್ತು. ಅದೃಷ್ಟವಶಾತ್‌ ರಾತ್ರಿ ಆಗಿದ್ದರಿಂದ ಮಕ್ಕಳು ಯಾರೂ ಮನೆ ಮುಂದೆ ಇರಲಿಲ್ಲ. ಈಗಾಲಾದರೂ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು ಉತ್ತಮ ಸರ್ವೀಸ್‌ ರಸ್ತೆ ನಿರ್ಮಿಸಿ ಹೆದ್ದಾರಿ ನೀರು ಸೂಕ್ತವಾಗಿ ಹೊರಗೆ ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕಿದೆ.
 

click me!