ಹತ್ತಾರು ವರ್ಷಗಳಿಂದ ನಿವಾರಣೆಯಾಗದ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಒಂದೇ ವಾರದಲ್ಲಿ ಮುಕ್ತಿ ದೊರಕಿದೆ. ಪೀಕ್ ಹವರ್ ನಲ್ಲಿ ವೀಕೆಂಡ್ ಸಂಚಾರದಷ್ಟೆ ಸಲೀಸು ಅಂತಿದ್ದಾರೆ ಸವಾರರು. ಇದೆಲ್ಲ ಸಾಧ್ಯವಾಗಿದ್ದು ಸ್ಪೆಷಲ್ ಕಮೀಷನರ್ ಸಲೀಂ ಹಾಗು ಜಾಯಿಂಟ್ ಕಮೀಷನರ್ ಅನುಚೇತ್ ರ ಕಾರ್ಯಕ್ಷಮತೆಯಿಂದ.
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.2): ಹತ್ತಾರು ವರ್ಷಗಳಿಂದ ನಿವಾರಣೆಯಾಗದ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಒಂದೇ ವಾರದಲ್ಲಿ ಮುಕ್ತಿ ದೊರಕಿದೆ. ಪೀಕ್ ಹವರ್ ನಲ್ಲಿ ವೀಕೆಂಡ್ ಸಂಚಾರದಷ್ಟೆ ಸಲೀಸು ಅಂತಿದ್ದಾರೆ ಸವಾರರು. ಯಾವನಿಗೆ ಬೇಕಪ್ಪ ಈ ಬೆಂಗಳೂರು ಟ್ರಾಫಿಕ್ ಅಂತಾ ಪ್ರತಿಯೊಬ್ಬರು ಬೈದಿರೋರೆ. ಎಷ್ಟೋ ಸಲ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗೋವಷ್ಟರಲ್ಲಿ ಭಗವಂತ ಕಾಣ್ತಿದ್ದ. ಹಿಂಗಿದ್ದ ಬೆಂಗಳೂರಲ್ಲಿ ಒಂದೇ ವಾರದಲ್ಲಿ ಪವಾಡ ನಡೆದಿದೆ. ಪೀಕ್ ಹವರ್ ನಲ್ಲೂ ವೀಕೆಂಡ್ ನಷ್ಟೆ ಆರಾಮಾಗಿ ಪ್ರಯಾಣ ಮಾಡಬಹುದು. ಅಷ್ಟರ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಿದೆ ಅಂತಿದ್ದಾರೆ ಸವಾರರು. ಇದೆಲ್ಲ ಸಾಧ್ಯವಾಗಿದ್ದು ಸ್ಪೆಷಲ್ ಕಮೀಷನರ್ ಸಲೀಂ ಹಾಗು ಜಾಯಿಂಟ್ ಕಮೀಷನರ್ ಅನುಚೇತ್ ರ ಕಾರ್ಯಕ್ಷಮತೆಯಿಂದ.
undefined
ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲು ಕಾರಣಗಳು:
ಇಷ್ಟೆಲ್ಲಾ ಮುಂಜಾಗ್ರತೆಯಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಟ್ವಿಟ್ಟರ್ ನಲ್ಲಿ ಟ್ರಾಫಿಕ್ ಪೊಲೀಸ್ರ ಕಾರ್ಯವೈಖರಿಗೆ ಸವಾರರಿಂದ ಪ್ರಶಂಸೆಗಳ ಮಹಾಪೂರವೆ ಹರಿದು ಬರ್ತಿದೆ. ಸವಾರರಿಗೆ ಟ್ರಾಫಿಕ್ ಜೊತೆಗೆ ಸಮಯವೂ ಉಳಿತಾಯವಾಗ್ತಿರೋದು ಸಂತಸ ತಂದಿದೆ.
ವಿವಿಪುರ ಫುಡ್‌ಸ್ಟ್ರೀಟ್‌ಗೆ ಬಿಬಿಎಂಪಿ ಹೈಟೆಕ್ ಸ್ಪರ್ಶ
ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಬಗೆಯ ತಿಂಡಿ, ತಿನಿಸು, ಊಟಕ್ಕೆ ಹೆಸರುವಾಸಿಯಾಗಿರುವ ‘ವಿವಿ ಪುರ ಫುಡ್ ಸ್ಟ್ರೀಟ್’ ಇನ್ನು ಮೂರು ತಿಂಗಳಲ್ಲಿ ಹೈಟೆಕ್ ಆಗಿ ಅಭಿವೃದ್ಧಿ ಪಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
35ಕ್ಕೂ ಅಧಿಕ ಆಹಾರ ಮಳಿಗೆಗಳು ವಿವಿ ಪುರ ಫುಡ್ ಸ್ಟ್ರೀಟ್‌ನಲ್ಲಿವೆ. ಬಹುತೇಕ ಮಳಿಗೆಯಲ್ಲಿ ಗ್ರಾಹಕರು ರಸ್ತೆಯಲ್ಲಿ ನಿಂತು ಆಹಾರ ಸೇವಿಸಬೇಕಿದೆ. ಇದರಿಂದ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಸಮಸ್ಯೆಗಳು ಉಂಟಾಗುತ್ತಿದೆ. ಹೀಗಾಗಿ, ವ್ಯಾಪಾರಿಗಳಿಗೆ ಹಾಗೂ ಆಹಾರ ಪ್ರಿಯರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಇದೀಗ ಬಿಬಿಎಂಪಿ ಮುಂದಾಗಿದೆ.
ಪೀಕ್ ಅವರ್‌ನಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಮಾಸ್ಟರ್ ಪ್ಲ್ಯಾನ್..!
ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಆಹಾರ ಮಳಿಗೆಗಳ ಸ್ವರೂಪ ಬದಲಿಸಲಾಗುತ್ತದೆ. ಜತೆಗೆ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಚಚ್‌ರ್‍ಸ್ಟ್ರೀಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಫುಡ್‌ಸ್ಟ್ರೀಟ್ ಉದ್ದಕ್ಕೂ ಚಾವಣಿಯನ್ನು ನಿರ್ಮಿಸಲಾಗುತ್ತದೆ. ಶುದ್ಧ ಕುಡಿಯುವ ನೀರಿನ ಘಟಕ, ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಹೀಗೆ ಹಲವು ಬಗೆಯ ಹೊಸ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ.
ನಿಯಮ ಉಲ್ಲಂಘನೆ: ಬೈಕ್ ಸವಾರನಿಗೆ 17,500 ದಂಡ
5ರಿಂದ 7 ಕೋಟಿ ವೆಚ್ಚ: ಅಭಿವೃದ್ಧಿಗೆ ಬಿಬಿಎಂಪಿ 5ರಿಂದ 7 ಕೋಟಿ ವೆಚ್ಚ ಮಾಡುತ್ತಿದ್ದು, ಈ ತಿಂಗಳಾಂತ್ಯದೊಳಗೆ ಕಾಮಗಾರಿ ಆರಂಭಿಸಲಾಗುತ್ತಿದೆ. ಮುಂಬರುವ ಫೆಬ್ರವರಿ ಅಥವಾ ಮಾಚ್‌ರ್ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.