ನಮ್ಮ ಮೆಟ್ರೋ: ಕೇವಲ 12 ನಿಮಿಷದಲ್ಲಿ ಕೆ.ಆರ್‌.ಪುರಂನಿಂದ ವೈಟ್‌ಫೀಲ್ಡ್‌ಗೆ ಪ್ರಯಾಣ..!

By Kannadaprabha NewsFirst Published Feb 7, 2023, 9:55 AM IST
Highlights

ತಿಂಗಳಾಂತ್ಯದಲ್ಲಿ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆವ ನಿರೀಕ್ಷೆಯಿದ್ದು, ಮಾರ್ಚ್‌ ಅಂತ್ಯದಿಂದ ಈ ಮಾರ್ಗದ ಮೆಟ್ರೋ ಜನ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ಈ ವಿಸ್ತರಣಾ ಕಾಮಗಾರಿಯ ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್‌ಸಿಎಲ್‌ ಆರಂಭಿಸಿದೆ.

ಬೆಂಗಳೂರು(ಫೆ.07):  ಕೆ.ಆರ್‌.ಪುರಂ ಹಾಗೂ ವೈಟ್‌ಫೀಲ್ಡ್‌ ನಡುವಣ ಮೊದಲ ಬಾರಿ ಪ್ರಾಯೋಯೋಗಿಕವಾಗಿ ಮೆಟ್ರೋ ರೈಲು ಸಂಚರಿಸಿದ್ದು, 80 ಕಿಮೀ ವೇಗದಲ್ಲಿ ತೆರಳಿದ ರೈಲು 13 ಕಿಮೀ ಅಂತರವನ್ನು (ನಿಲುಗಡೆ ರಹಿತ) ಕೇವಲ 12 ನಿಮಿಷದಲ್ಲಿ ತಲುಪಿದೆ.

ತಿಂಗಳಾಂತ್ಯದಲ್ಲಿ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆವ ನಿರೀಕ್ಷೆಯಿದ್ದು, ಮಾರ್ಚ್‌ ಅಂತ್ಯದಿಂದ ಈ ಮಾರ್ಗದ ಮೆಟ್ರೋ ಜನ ಬಳಕೆಗೆ ಮುಕ್ತವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನೇರಳೆ ಮಾರ್ಗದ ಈ ವಿಸ್ತರಣಾ ಕಾಮಗಾರಿಯ ಮಾರ್ಗದಲ್ಲಿ ರೈಲಿನ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್‌ಸಿಎಲ್‌ ಆರಂಭಿಸಿದೆ.

ಒಂದೇ ಕಾರ್ಡಲ್ಲಿ ದೇಶದ ಎಲ್ಲ ಮೆಟ್ರೋ, ಬಸ್ಸಲ್ಲಿ ಓಡಾಟ?

ಭಾನುವಾರ ಸಂಜೆ ನಡೆಸಿದ ಸಂಚಾರದಲ್ಲಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು, ಸಿಗ್ನಲ್‌ ಹಾಗೂ ಹಳಿಯ ತಂತ್ರಜ್ಞರು ರೈಲಿನಲ್ಲಿದ್ದರು. ಫೆ.11ರಿಂದ ಬಿಎಂಆರ್‌ಸಿಎಲ್‌ ಪ್ರಾಯೋಗಿಕವಾಗಿ ಸಂಚರಿಸಲಿದ್ದು, ಬಳಿಕವೇ ಈ ಮಾರ್ಗದಲ್ಲಿನ ರೈಲು ಸಂಚಾರದ ನೈಜ ಅವಧಿ ತಿಳಿಯಲಿದೆ. ಸಂಪೂರ್ಣವಾಗಿ ಜನಬಳಕೆಗೆ ಮುಕ್ತವಾದ ಬಳಿಕ 10 ನಿಮಿಷಕ್ಕೆ ಒಂದರಂತೆ ಆರು ಬೋಗಿಗಳ ಐದು ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!