ಹೊಸಪೇಟೆಯಿಂದ ಸಿದ್ದು ಕಣಕ್ಕಿಳಿದರೆ ಹೊಲ ಮಾರಿ 1 ಕೋಟಿ ನೀಡುವೆ: ಅಭಿಮಾನಿಯ ಆಫರ್‌

Published : Feb 07, 2023, 09:24 AM ISTUpdated : Feb 07, 2023, 09:36 AM IST
ಹೊಸಪೇಟೆಯಿಂದ ಸಿದ್ದು ಕಣಕ್ಕಿಳಿದರೆ ಹೊಲ ಮಾರಿ 1 ಕೋಟಿ ನೀಡುವೆ: ಅಭಿಮಾನಿಯ ಆಫರ್‌

ಸಾರಾಂಶ

ನಾನು ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ. ಅವರ ಭಾಷಣಗಳನ್ನು ಮೊಬೈಲ್‌ನಲ್ಲೂ ಆಲಿಸುವೆ. ಜತೆಗೆ ಅವರ ಕಾರ್ಯಕ್ರಮಗಳನ್ನು ನೇರವಾಗಿಯೂ ಆಲಿಸುವೆ. ರೈತನಾಗಿರುವ ನಾನು, ಅವರು ಹೊಸಪೇಟೆಯಿಂದ ಸ್ಪರ್ಧಿಸಲಿ ಎಂದು ಬಯಸುವೆ. ಅವರು ಇಲ್ಲಿ ಖಂಡಿತ ಗೆಲುವು ಸಾಧಿಸುತ್ತಾರೆ. ಅವರ ಗೆಲುವಿಗಾಗಿ ನಾನು ಆಶಿಸುವೆ: ಮಲಿಯಪ್ಪ

ಹೊಸಪೇಟೆ(ಫೆ.07):  ಸಿದ್ದರಾಮಯ್ಯನವರು ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ತನ್ನ ಹೆಸರಿನಲ್ಲಿರುವ ಆರು ಎಕರೆ ಹೊಲದಲ್ಲಿ ಎರಡು ಎಕರೆ ಮಾರಿ, ಒಂದು ಕೋಟಿ ರುಪಾಯಿ ದೇಣಿಗೆ ನೀಡುತ್ತೇನೆ ಎಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಕೆ.ಎಸ್‌.ಮಲಿಯಪ್ಪ ಎಂಬುವರು ಆಫರ್‌ ನೀಡಿದ್ದಾರೆ.

ನಾನು ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ. ಅವರ ಭಾಷಣಗಳನ್ನು ಮೊಬೈಲ್‌ನಲ್ಲೂ ಆಲಿಸುವೆ. ಜತೆಗೆ ಅವರ ಕಾರ್ಯಕ್ರಮಗಳನ್ನು ನೇರವಾಗಿಯೂ ಆಲಿಸುವೆ. ರೈತನಾಗಿರುವ ನಾನು, ಅವರು ಹೊಸಪೇಟೆಯಿಂದ ಸ್ಪರ್ಧಿಸಲಿ ಎಂದು ಬಯಸುವೆ. ಅವರು ಇಲ್ಲಿ ಖಂಡಿತ ಗೆಲುವು ಸಾಧಿಸುತ್ತಾರೆ. ಅವರ ಗೆಲುವಿಗಾಗಿ ನಾನು ಆಶಿಸುವೆ. ನನಗೆ ಗಾದಿಗನೂರು ಗ್ರಾಮದ ಗೋನಾಳ ಬಳಿ ಆರು ಎಕರೆ ಜಮೀನು ಇದ್ದು, ಈ ಪೈಕಿ ಎರಡು ಎಕರೆ ಜಮೀನು ಮಾರಾಟ ಮಾಡಿ, ಸಿದ್ದರಾಮಯ್ಯಗೆ 1 ಕೋಟಿ ಕೊಡುವೆ ಎಂದು ಮಲಿಯಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Karnataka Politics: ಹೆದರಿಸಿದ್ರೆ ಸುಮ್ಮನಿರಲ್ಲ, ತೊಡೆತಟ್ಟಲು ನಂಗೂ ಬರುತ್ತೆ: ಸಿದ್ದರಾಮಯ್ಯ

ಕಳೆದ ಎರಡು ದಿನದ ಹಿಂದೆ ಸಿದ್ದು ಅವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಲಿ, ನನ್ನ ಜಮೀನು ಮಾರಿ ಅವರಿಗೆ 1 ಕೋಟಿ ನೀಡುತ್ತೇನೆ ಎಂದು ಚಿಕ್ಕಮಗಳೂರಿನ ಬಾಲಕೃಷ್ಣ ಎಂಬುವರು ಆಫರ್‌ ನೀಡಿದ್ದರು. ವಾರದ ಹಿಂದೆ ಯಾದಗಿರಿಯಿಂದ ಸ್ಪರ್ಧಿಸಿದರೆ 1 ಕೋಟಿ ದೇಣಿಗೆ ನೀಡುವುದಾಗಿ ಯಾದಗಿರಿ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯ ಚಂದ್ರಯ್ಯ ನಾಗರಾಳ ಆಫರ್‌ ನೀಡಿದ್ದರು. ಅಲ್ಲದೆ, ಸಿಂಧನೂರು ಅಥವಾ ರಾಯಚೂರಿನಿಂದ ಸ್ಪರ್ಧಿಸಿದರೆ ಎರಡು ಎಕರೆ ಜಮೀನು ಮಾರಿ ಹಣ ನೀಡುವುದಾಗಿ ಲಿಂಗಸುಗೂರು ತಾಲೂಕಿನ ಚಿಕ್ಕಹೊಸರೂರು ಗ್ರಾ.ಪಂ. ಸದಸ್ಯ ಶರಣು ಕಡ್ಡೋಣಿ ಎಂಬುವರು ಆಫರ್‌ ನೀಡಿದ್ದರು.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ