ನಿವೃತ್ತಿಗೆ ಗೌರವದ ವಿದಾಯ: ಕಚೇರಿಯ ವಾಹನದ ಡ್ರೈವರ್‌ಗೆ ಚಾಲಕನಾದ ಸಾರಿಗೆ ಅಧಿಕಾರಿ!

By Suvarna News  |  First Published Jul 2, 2022, 11:07 AM IST

* ಹೀಗೊಂದು ಹೃದಯಸ್ಪರ್ಶಿ ಬಿಳ್ಕೊಡುಗೆ

* ಕಚೇರಿಯ ವಾಹನದ ಡ್ರೈವರ್‌ಗೆ ಚಾಲಕನಾದ ಸಾರಿಗೆ ಅಧಿಕಾರಿ

* ನಿವೃತ್ತಿಗೆ ಸಿಕ್ಕಿತ್ತು ಗೌರವದ ವಿದಾಯ


ಶಿವಮೊಗ್ಗ(ಜು.02): ಶಿವಮೊಗ್ಗದ RTO ಕಚೇರಿ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಿತ್ತು. ನಿತ್ಯ ಸಾರಿಗೆ ಅಧಿಕಾರಿಯನ್ನು ಮನೆಯಿಂದ ಕಚೇರಿಗೆ , ಕಚೇರಿಯಿಂದ ಮನೆಗೆ ಕರೆದೊಯ್ಯುತ್ತಿದ್ದ ಚಾಲಕನಿಗೆ ಸಾರಿಗೆ ಅಧಿಕಾರಿಯೇ ಡ್ರೈವರ್ ಆದರು. ಅವರೇ ಸ್ವತಹಃ ವಾಹನ ಚಲಾಯಿಸಿ ತಮ್ಮ ವಾಹನದ ಚಾಲಕನನ್ನು ಮನೆಗೆ ಬಿಟ್ಟು ಬಂದರು. 

ಇದು ಸಾರಿಗೆ ಇಲಾಖೆ ಡ್ರೈವರ್‌ಗೆ ನಿವೃತ್ತಿ ದಿನ ಅಧಿಕಾರಿ ನೀಡಿದ ಗೌರವದ ಮೂಲಕ ಸಾರಿಗೆ ಕಚೇರಿಯ ಚಿತ್ರಣವೇ ಬದಲಾಗಿತ್ತು. ಇದುವರೆಗೆ RTO ವಾಹನದ ಚಾಲಕನಾಗಿದ್ದ ಸ್ವಾಮಿ ಗೌಡ ಸೇವಾ ನಿವೃತ್ತಿ ಹೊಂದಿದ್ದರು.  ಸಾರಿಗೆ ಅಧಿಕಾರಿ ದೀಪಕ್ ಗೌಡ ನೇತೃತ್ವದಲ್ಲಿ ಸ್ವಾಮಿ ಗೌಡ ರಿಗೆ ಕರ್ತವ್ಯದ ಅವಧಿ ಮುಗಿದ ನಂತರ ಬಿಳ್ಕೊಡುಗೆ ಎರ್ಪಡಿಸಿದ್ದರು. ಕಚೇರಿಯಲ್ಲಿ ಸ್ವಾಮಿ ಗೌಡ ರಿಗೆ ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

Tap to resize

Latest Videos

ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ , ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.‌ ತದನಂತರ ತಮ್ಮ ವಾಹನದ ಚಾಲಕ ಸ್ವಾಮಿ ಗೌಡರನ್ನು ಪಕ್ಕದ ಸೀಟಿನಲ್ಲಿ ಕೂರಿಸಿಕೊಂಡು ವಾಹನ ಚಾಲನೆ  ಮಾಡಿದರು. ಶಿವಮೊಗ್ಗದ ಆರ್ ಟಿಒ ಕಚೇರಿಯಿಂದ ಕಾಶಿಪುರದ ಸ್ವಾಮಿ ಗೌಡರ ಮನೆಯವರೆಗೆ ಸುಮಾರು 5 ಕಿ.ಮೀ. ಪಯಣ ಅಚ್ಚಳಿಯದೆ ಉಳಿದಿತ್ತು. ಈ ಮೂಲಕ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ  ಉಳಿದ ಸಿಬ್ಬಂದಿಗಳು ಗೌರವಯುತ ಬಿಳ್ಕೊಡುಗೆ ಮೂಲಕ ಇತರರಿಗೆ ಮಾದರಿಯಾದರು

click me!