ರಾತ್ರಿಯಲ್ಲಿ ಬೈಕ್‌ ಸವಾರನನ್ನು ನಿಲ್ಲಿಸಿ ಮಂಗಳಮುಖಿಯರಿಂದ ಈ ಕೃತ್ಯ

Kannadaprabha News   | Asianet News
Published : Nov 12, 2020, 03:51 PM IST
ರಾತ್ರಿಯಲ್ಲಿ ಬೈಕ್‌ ಸವಾರನನ್ನು ನಿಲ್ಲಿಸಿ ಮಂಗಳಮುಖಿಯರಿಂದ ಈ ಕೃತ್ಯ

ಸಾರಾಂಶ

ರಾತ್ರಿ ವೇಳೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಮಂಗಳಮುಖಿಯರು ಈ ಕೃತ್ಯ ಎಸಗಿದ್ದಾರೆ

ಮಲ್ಪೆ (ನ.12): ಇಲ್ಲಿನ ಸಂಪಿಗೆನಗರದ ನಿವಾಸಿ ವಿಜಯ ಪೂಜಾರಿ ಎಂಬವರಿಂದ ಇಬ್ಬರು ಮಂಗಳಮುಖಿಯರು ಸುಮಾರು 80 ಸಾವಿರ ರು. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಅವರು ರಾತ್ರಿ 10.15 ಗಂಟೆಗೆ ಬೈಕ್‌ನಲ್ಲಿ ಕಿನ್ನಿಮೂಲ್ಕಿ ಗೋಪುರದ ಬಳಿ ಸವೀರ್‍ಸ್‌ ರಸ್ತೆಯಲ್ಲಿ ಹೋಗುತ್ತಿದ್ದಾಗ, ರಸ್ತೆಪಕ್ಕ ಒಂದು ಬಿಳಿ ಬಣ್ಣದ ಕಾರು ಮತ್ತು ಬೈಕ್‌ ನಿಂತಿದ್ದವು. 

ಕಾರಿನ ಎದುರುಗಡೆ ಇದ್ದ ಇಬ್ಬರು ಮಂಗಳಮುಖಿಯರು ವಿಜಯ ಅವರನ್ನು ನಿಲ್ಲಿಸಿ ಕುತ್ತಿಗೆಯನ್ನು ಸವರಿಕೊಂಡು ಎಲ್ಲಿಗೆ ಹೋಗುತ್ತಿರಿ ಎಂದು ಕೇಳಿದರು. ಅವರು ಸಂಪಿಗೆನಗರ ಎಂದಾಗ, ಕಾರಿನಲ್ಲಿದ್ದ ಇಬ್ಬರೂ ಕಾರಿನಲ್ಲಿ ವೇಗವಾಗಿ ಮಂಗಳೂರಿನ ಕಡೆ ಹೋದರು. 

Vocal for Local, ನೀವು ಆಯ್ಕೆ ಮಾಡಬೇಕಾದ ದೇಸೀ ಫ್ಯಾಷನ್ trends ...

ವಿಜಯ ಅವರು ಸಂಶಯಗೊಂಡು ಕುತ್ತಿಗೆಯನ್ನು ನೋಡಿದಾಗ 2 ಪವನಿನ ಚಿನ್ನದ ಸರ ಕಿತ್ತುಕೊಂಡು ಹೋಗಿರುವುದು ಅರಿವಾಗಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!