'ಮುನಿರತ್ನ ಗೆಲುವಿಗೆ ಸಿದ್ದರಾಮಯ್ಯ-ರಾಜೇಶ್ ಗೆಲುವಿಗೆ ಡಿಕೆಶಿ ಕಾರಣ'

Kannadaprabha News   | Asianet News
Published : Nov 12, 2020, 03:13 PM IST
'ಮುನಿರತ್ನ ಗೆಲುವಿಗೆ ಸಿದ್ದರಾಮಯ್ಯ-ರಾಜೇಶ್ ಗೆಲುವಿಗೆ ಡಿಕೆಶಿ ಕಾರಣ'

ಸಾರಾಂಶ

ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಡಿಕೆಶಿ ಸಿದ್ದರಾಮಯ್ಯ ಅವರೇ ಕಾರಣರಾಗಿದ್ದಾರೆ ಎನ್ನಲಾಗಿದೆ. 

ಮಂಗಳೂರು (ನ.12):  ಇನ್ನು 10 ವರ್ಷ ಮಾತ್ರವಲ್ಲ ಮುಂದೆಯೂ ಹತ್ತಾರು ವರ್ಷ ಕಾಲ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ಸಿಗುವುದಿಲ್ಲ, ಬಿಜೆಪಿಯೇ ಆಡಳಿತ ನಡೆಸಲಿದೆ. 

ಕಾಂಗ್ರೆಸ್ಸಿನ ಕಪಟನಾಟಕ ಜನತೆಗೆ ಗೊತ್ತಾಗಿದೆ ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.
 
ಸೋಲಿನ ಒಡಂಬಡಿಕೆ!:

ಶಿರಾದಲ್ಲಿ ಡಿಕೆಶಿ ಹಾಗೂ ಆರ್‌ ಆರ್‌ ನಗರದಲ್ಲಿ ಸಿದ್ದರಾಮಯ್ಯ ಅವರು ತಮ್ಮದೇ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ. ಅವರ ಈ ಒಡಂಬಡಿಕೆ ಬಿಜೆಪಿ ಗೆಲುವಿಗೆ ನೆರವಾಗಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಕಾರಣವೇ ಕಾಂಗ್ರೆಸ್‌ ನಾಯಕತ್ವ ಎಂಬುದನ್ನು ಪೊಲೀಸ್‌ ವರದಿ ಹೇಳುತ್ತಿವೆ. ಸಿದ್ದು ಬೆಂಬಲಿಗ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಶಾಸಕ ಸ್ಥಾನದಿಂದ ಇಳಿಸಲು ಡಿಕೆಶಿ ಬೆಂಬಲಿಗ ಸಂಪತ್‌ರಾಜ್‌ ಪ್ರಯತ್ನಿಸಿದ್ದಾರೆ. 

ಚುನಾವಣೆ ಬಳಿಕ ಕಾಂಗ್ರೆಸ್ ಮುಖಂಡರ ರಾಜೀನಾಮೆ ವಿಚಾರ ಪ್ರಸ್ತಾಪ ..

ಈ ಬಗ್ಗೆ ಅಖಂಡ ಶ್ರೀನಿವಾಸ ಮೂರ್ತಿ ಅವರೇ ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಆರೋಪಿಯಾಗಿ ತಲೆಮರೆಸಿರುವ ಸಂಪತ್‌ರಾಜ್‌ನ್ನು ಕಾಂಗ್ರೆಸಿಗರೇ ರಕ್ಷಿಸುತ್ತಿದ್ದಾರೆ. ದಲಿತ ಶಾಸಕ ಅಖಂಡ ಅವರಿಗೆ ಕಾಂಗ್ರೆಸ್ಸಿನಲ್ಲಿ ರಕ್ಷಣೆ ಇಲ್ಲದ ಪರಿಸ್ಥಿತಿ ತಲೆದೋರಿದೆ. ಅಖಂಡ ಮನೆಗೆ ಬೆಂಕಿ ಹಾಕಿದ ಸಂಪತ್‌ರಾಜ್‌ನ್ನು ಪೊಲೀಸರಿಗೆ ಶರಣಾಗುವಂತೆ ಹೇಳುವ ಬದಲು ಅವರನ್ನೇ ರಕ್ಷಿಸುತ್ತಿದ್ದಾರೆ ಎಂದು ನಳಿನ್‌ ಕುಮಾರ್‌ ಟೀಕಿಸಿದರು.

PREV
click me!

Recommended Stories

ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!