ಕೇಂದ್ರ ಸರಕಾರ ದೇಶದ ಎಲ್ಲ ಜನರಿಗೋಸ್ಕರ ಕುಡಿಯುವ ನೀರಿನ ಯೋಜನೆಯನ್ನ ಜಾರಿ ಮಾಡಿದೆ ಆದರೆ ಇಲ್ಲಿ ಅಧಿಕೃತ ಮನೆಗಳಿಗೆ ನೀರಿನ ಕನೆಕ್ಷನ್ ಕೊಡೋದು ಬಿಟ್ಟು ಅನಧಿಕೃತ ಲೇಔಟ್‌ಗಳಿಗೆ ಜೇ ಜೆ ಎಂ ಕಾಮಗಾರಿಯ ಮುಖಾಮಂತರ ಮನೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನ ಜಾರಿಗೆ ತಂದಿದೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಆ.04): ಕೇಂದ್ರ ಸರಕಾರ ದೇಶದ ಎಲ್ಲ ಜನರಿಗೋಸ್ಕರ ಕುಡಿಯುವ ನೀರಿನ ಯೋಜನೆಯನ್ನ ಜಾರಿ ಮಾಡಿದೆ ಆದರೆ ಇಲ್ಲಿ ಅಧಿಕೃತ ಮನೆಗಳಿಗೆ ನೀರಿನ ಕನೆಕ್ಷನ್ ಕೊಡೋದು ಬಿಟ್ಟು ಅನಧಿಕೃತ ಲೇಔಟ್‌ಗಳಿಗೆ ಜೇ ಜೆ ಎಂ ಕಾಮಗಾರಿಯ ಮುಖಾಮಂತರ ಮನೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನ ಜಾರಿಗೆ ತಂದಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ 1100 ಕೋಟಿ ಅನುದಾನದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಯು ಸಮರ್ಪಕವಾಗಿ ಯೋಜನೆ ಉಳ್ಳವರ ಪಾಲಾಗುತ್ತಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇಂಗಳ ಹಳ್ಳಿ ಗ್ರಾಮದಲ್ಲಿ ಎರಡು ಕೋಟಿ 40 ಲಕ್ಷ ಅನುದಾನದ ಅಡಿಯಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನೀರನ್ನ ಕಾಮಗಾರಿಯನ್ನ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಕುಡಿಯುವ ನೀರಿನ ಯೋಜನೆಯನ್ನ ಆರಂಭ ಮಾಡಲಾಗಿದೆ ಆದರೆ ಅದರಲ್ಲಿ ಬರೊಬ್ಬರಿ 80 ಲಕ್ಷ ಹಣವನ್ನ ಸಂಬಂದಪಟ್ಟ ಪಿಡಿಓ ಮತ್ತು ಗುತ್ತಿಗೆ ದಾರರ ಅನಧಿಕೃತ ಲೇಔಟ್‌ಗೆ ಪೈಪ್‌ಲೈನ್ ಅಳವಡಿಕೆ ಮಾಡಿ ಬಳಿಕ ಕಳೆಯ 2010 ರ ಕುಡಿಯುವ ನೀರಿನ ಟ‌್ಯಾಂಕ್‌ಗೆ ಕನೆಕ್ಷನ್ ಕೊಟ್ಟು 80 ಲಕ್ಷ ಹಣವನ್ನ ಉಳಿತಾಯ ಮಾಡಿ ಹಣ ನುಂಗಿದ್ದಾರೆ ಎಂದು ಸದ್ಯ ಬಿಜೆಪಿ ಮುಖಂಡ ಮಲ್ಲಪ್ಪ ಹಳಕಟ್ಟಿ ಜಿಲ್ಲಾ ಪಂಚಾಯತ್ ಕಚೇರಿ ದೂರು ಸಲ್ಲಿಸಿದ್ದಾನೆ.
ಗ್ಯಾರಂಟಿಗಳು ಸಿಂಗಾಪುರದಲ್ಲಿ ಕುಳಿತವರ ತಲೆ ಕೆಡಿಸ್ತಿವೆ: ಎಚ್‌ಡಿಕೆಗೆ ಶಾಸಕ ಬಾಲಕೃಷ್ಣ ಟಾಂಗ್
ದೂರಿನಲ್ಲಿರುವ ಮಾಹಿತಿ ನೋಡೋದಾದ್ರ:
ಗೆ,
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ
ಧಾರವಾಡ
ವಿಷಯ:- ಹುಬ್ಬಳ್ಳಿ ತಾಲೂಕ ಇಂಗಳಹಳ್ಳಿ ಗ್ರಾಮದ ಉಳ್ಳವರ ಪಾಲಾದ ಜಲಜೀವನ್ ಮಿಷನ್... ತನಿಖೆ ಮಾಡುವ ಕುರಿತು.
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಲ್ಲಪ್ಪ ಹಳಕಟ್ಟಿ, ಜಿಲ್ಲಾ ಉಪಾಧ್ಯಕ್ಷರು,ಭಾ.ಜ.ಪ. ಸಾ: ಇಂಗಳಹಳ್ಳಿ, ತಾ: ಹುಬ್ಬಳ್ಳಿ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಮನೆ ಮನೆಗೆ ನಲ್ಲಿಗಳ ಮೂಲಕ ನೀರು ಪೂರೈಸುವ ಸರಕಾರದ ಯೋಜನೆಯಾದ ಜೆ.ಜೆ.ಎಂ ಯೋಜನೆಯು ತಾಲೂಕಿನ ಕೆಲ ಅಧಿಕಾರಿಗಳ ಹಣದಾಸೆಯಿಂದಾಗಿ ಯೋಜನೆ ಉಳ್ಳವರ ಪಾಲಾಗುವುದರ ಜೊತೆಗೆ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಹಾನಿಗೆ ಸಾಕ್ಷಿಯಾಗಿದೆ.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ಹೆಸರಿನಲ್ಲಿ ಇದೇ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಅಕ್ರಮ ಸಕ್ರಮ ಪ್ಲಾಟಿನಲ್ಲಿ ಮತ್ತು ಮನೆಯಿಲ್ಲದ ನೆಲದಲ್ಲಿ ಜೆ.ಜೆ.ಎಂ. ಯೋಜನೆಯಡಿ ಸುಮಾರು 60 ರಿಂದ 70 ಲಕ್ಷ ರೂ.ಗಳ ಪೈಪಲೈನ ಅಳವಡಿಸುವ ಮೂಲಕ ಸಂಬಂಧಿಸಿದ ಗ್ರಾ.ಪಂ. ಪಿ.ಡಿ.ಓ. ಹಾಗೂ ಜಿ.ಪಂ. ಅಧಿಕಾರಿಗಳು ಕಿಕ್ ಬ್ಯಾಕ್ ಪಡೆಯುವ ಯೋಜನೆಯನ್ನು ನಾಗರಿಕರು ಅನುಷ್ಠಾನಗೊಳಿಸಿರುವುದು ಬಹಿರಂಗವಾಗಿದೆ ಕುಡಿಯುವ ನೀರಿಗಾಗಿ ಮೂಲಕ ನಿಯಮಬಾಹಿರವಾಗಿ ಹಲವಾರು ಗ್ರಾಮಗಳಲ್ಲಿನ ಇನ್ನು ಪರಿತಪಿಸುವಂತಹ ಸ್ಥಿತಿ ಇದ್ದರೂ ಅಂತಹ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವ ಬದಲಾಗಿ ಇನ್ನೂ ಅಭಿವೃದ್ಧಿಪಡಿಸದ ಬಡಾವಣೆಯಲ್ಲಿ ಇಂತಹ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದ ಅಧಿಕಾರಿಗಳ ಕಾರ್ಯವು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಆದಕಾರಣ ತಾವುಗಳು ಕೂಡಲೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ತಮ್ಮ ಕಛೇರಿ ಮುಂದೆ ಕುಳಿತು ಉಗ್ರ ಹೋರಾಟ ಮಾಡುತ್ತೇವೆ.
ಡಿಸಿಎಂ ಸ್ವಕ್ಷೇತ್ರದಲ್ಲಿ ಸಾರಿಗೆ ಬಸ್ಸಿನ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ: ವಾಹನ ಸಂಚಾರ ಅಸ್ತವ್ಯಸ್ಥ!
ತಮ್ಮವಿಶ್ವಾಸಿ
ಮಲ್ಲಪ್ಪ ಫ. ಹಳಕಟ್ಟಿ
ಉಪಾಧ್ಯಕ್ಷರು ಸಾ.ಇಂಗಳಹಳ್ಳಿ ತಾ. ಹುಬ್ಬಳ್ಳಿ
ಇನ್ನು ಈ ಕುರಿತು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರಿಗೆ ಮನವಿ ಸಲ್ಲಿಸಿದ ಬಳಿಕ ನಾನು ಈ ಕುರಿತು ಮಾಹಿತಿಯನ್ನ ಕಲೆ ಹಾಕುತ್ತೆನೆ ತಪ್ಪು ನಡೆದಿದ್ರೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವನ್ನ ಕೈ ಗೊಳ್ಳಲಾಗುವುದು ಎಂದು ಹೇಳಿಕೆಯನ್ನ ನೀಡಿದರು.