ರಾಷ್ಟ್ರಧ್ವಜ ಇಳಿಸುವಾಗ ತುಳಿದು ಅಪಮಾನ..!

By Kannadaprabha News  |  First Published Oct 14, 2023, 7:30 AM IST

ಗ್ರಾಪಂ ಸಿಬ್ಬಂದಿಗೆ ಪ್ರತಿನಿತ್ಯ ಟೀ, ಕಾಫಿ ತಂದು ಕೊಡುವ ಶಿವರಾಮ್ ಕೆಳಗೆ ಬಿದ್ದ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವುದು. ಅಪಮಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಪಂ ಪಿಡಿಒ ರೇವತಿ ಹಾಗೂ ಸಿಬ್ಬಂದಿ ಚೇತನ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ದಾಬಸ್‌ಪೇಟೆ(ಅ.14):  ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಗ್ರಾಪಂ ಕಟ್ಟಡದ ಮೇಲೆ ಪ್ರತಿದಿನ ಪ್ರತಿನಿತ್ಯ ಸೂರ್ಯೋದಯವಾದ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಹಾಗೂ ಸೂರ್ಯ ಮುಳುಗುವ ಮುನ್ನ ಇಳಿಸುವ ಆದೇಶವಿದೆ. ಹಸಿರುವಳ್ಳಿ ಗ್ರಾಪಂನಲ್ಲಿ ಅ.13ರಂದು ಸಂಜೆ 4 ಗಂಟೆಯಲ್ಲಿ ವ್ಯಕ್ತಿಯೊಬ್ಬ ತ್ರಿವರ್ಣ ಧ್ವಜವನ್ನು ಇಳಿಸುವಾಗ ಧ್ವಜ ನೆಲದ ಮೇಲೆ ಬಿದ್ದಿದ್ದು ಅದನ್ನು ತುಳಿದು ಧ್ವಜಕ್ಕೆ ಅವಮಾನಿಸಿದ್ದು ಇದನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಮೇಲೆ ಮತ್ತೊಬ್ಬ ಕಚೇರಿ ಸಿಬ್ಬಂದಿಯೇ ವಿಡಿಯೋ ಮಾಡದಂತೆ ಬೆದರಿಕೆ ಹಾಕಿದ್ದಾರೆನ್ನಲಾಗಿದೆ.

ಗ್ರಾಪಂ ಸಿಬ್ಬಂದಿಗೆ ಪ್ರತಿನಿತ್ಯ ಟೀ, ಕಾಫಿ ತಂದು ಕೊಡುವ ಶಿವರಾಮ್ ಕೆಳಗೆ ಬಿದ್ದ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವುದು. ಅಪಮಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಪಂ ಪಿಡಿಒ ರೇವತಿ ಹಾಗೂ ಸಿಬ್ಬಂದಿ ಚೇತನ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

ಬೆಂಗಳೂರು: ಬೆಟ್ಟಿಂಗ್ ಗೀಳು, ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

ಘಟನೆಗೆ ಪಿಡಿಒ ರೇವತಿ ಪ್ರತಿಕ್ರಿಯಿಸಿ, ಘಟನೆ ನಡೆದಾಗ ನಾನು ಕಚೇರಿಯಲ್ಲಿ ಇರಲಿಲ್ಲ. ಕಚೇರಿ ಗುಮಾಸ್ತ ರಜಾ ಹಾಕಿದ್ದರು. ಧ್ವಜಕ್ಕೆ ಅವಮಾನ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಈ ಬಗ್ಗೆ ಶಿಸ್ತುಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ.

click me!