ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ ಎಂದು ಅವರು ಹೇಳಿದ ಚಿಂತಕ ಪ್ರೊ.ಕೆ.ಎಸ್. ಭಗವಾನ್
ಮೈಸೂರು(ಅ.14): ಕುವೆಂಪು ಅವರೇ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ನುಡಿದಿದ್ದಾರೆ. ಇದನ್ನೇ ನಾನು ಹೇಳಿದರೆ ಹೊಡೆಯೋಕೆ ಬರುತ್ತಾರೆ. ನಿಜ ಹೇಳಿದವರನ್ನು ಯಾರು ಬಿಡಲ್ಲ. ಆದರೆ, ನಿಜ ಹೇಳಿಯೇ ಸಾಯಲೇಬೇಕು ಎಂದು ಚಿಂತಕ ಪ್ರೊ.ಕೆ.ಎಸ್. ಭಗವಾನ್ ತಿಳಿಸಿದರು.
ನಗರದ ಪುರಭವನ ಆವರಣದಲ್ಲಿ ಮಹಿಷ ದಸರಾ ಆಚರಣಾ ಸಮಿತಿಯು ಶುಕ್ರವಾರ ಆಯೋಜಿಸಿದ್ದ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ಧ ಗುರುಗಳು ಜ್ಞಾನವನ್ನು ಕೊಟ್ಟಿದ್ದಾರೆ. ವೈದಿಕರು ಅಜ್ಞಾನವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ ಎಂದರು.
‘ನಾವು ಸನಾತನಿಗಳಲ್ಲ’ ಜಾಗೃತಿ ಕಾರ್ಯಕ್ರಮ ಶೀಘ್ರ: ಕೆ.ಎಸ್.ಭಗವಾನ್
ಜನಿವಾರದಿಂದ ಜಾತಿ ಗುರುತಿಸುತ್ತಾರೆ. ಹಾಕದವನು ಒಂದು, ಹಾಕಿರೋನು ಒಂದು. ಕೈಗೆ ಕಾಲಿಗೆ ಜಾತಿ ಇಟ್ಟಿರೋದು ಹಿಂದೂ ಧರ್ಮ. ಹಿಂದೂ ಧರ್ಮ ನಮ್ಮ ಧರ್ಮ ಅಲ್ಲ. ನಮ್ಮ ಧರ್ಮ ಬೌದ್ಧ ಧರ್ಮ ಎಂದು ಅವರು ಹೇಳಿದರು.
ಬ್ರಾಹ್ಮಣರು ವೈದಿಕರು ಬೇರೆ ದೇಶದಿಂದ ಬಂದಿರುವವರು. 2 ಸಾವಿರ ವರ್ಷದಿಂದ ಇವರು ಬೇರೆಯವರಿಗೆ ಸಂಸ್ಕೃತ ಕಲಿಸಲಿಲ್ಲ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ಶೂದ್ರನನ್ನು ದೇವರು ಸೃಷ್ಠಿ ಮಾಡಿರೋದೆ ಬ್ರಾಹ್ಮಣರ ಸೇವೆ ಮಾಡಲೆಂದು ತಿಳಿದಿದ್ದಾರೆ ಎಂದರು.