ದಾವಣಗೆರೆಯಲ್ಲಿ 25,000 ಎಕ್ರೇಲಿ ಕಾರ್ಗಿಲ್‌ನಿಂದ ರೈತರಿಗೆ ತರಬೇತಿ

By Kannadaprabha News  |  First Published Jun 29, 2023, 6:18 AM IST

ಈ ಯೋಜನೆಯ ಮೂಲಕ ಪುನರುತ್ಪಾದಕ ಕೃಷಿ, ಮಣ್ಣಿನ ರಕ್ಷಣೆ, ಇಂಗಾಲದ ಕಡಿತ ಮತ್ತು ನೀರಿನ ಗುಣಮಟ್ಟ ಹೆಚ್ಚಳ ಮತ್ತು ಬಳಕೆಗೆ ಸಂಬಂಧಿಸಿದಂತೆ ಸುಮಾರು 10 ಸಾವಿರ ರೈತರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ 4 ವರ್ಷಗಳಲ್ಲಿ ಇದನ್ನು ಕೈಗೊಳ್ಳಲಾಗುವುದು. 


ನವದೆಹಲಿ(ಜೂ.29): ಮಣ್ಣಿನ ಆರೋಗ್ಯ ಹೆಚ್ಚಳ, ನೀರಿನ ಗುಣಮಟ್ಟ ಹೆಚ್ಚಳ ಸೇರಿದಂತೆ ರೈತರಿಗೆ ತರಬೇತಿ ನೀಡಲು ಕರ್ನಾಟಕದ ದಾವಣಗೆರೆಯಲ್ಲಿ 25 ಸಾವಿರ ಎಕರೆ ಮೆಕ್ಕೆಜೋಳ ಬೆಳೆಯುವ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಅಮೆರಿಕ ಮೂಲದ ಕಾರ್ಗಿಲ್‌ ಕಂಪನಿ ಹೇಳಿದೆ.

ಪುನರುತ್ಪಾದಕ ಕೃಷಿ ಮತ್ತು ರೈತರ ತರಬೇತಿಗೆ ಸಂಬಂಧಿಸಿದಂತೆ ಟೆಕ್ನೋಸರ್ಸ್‌ ಜೊತೆ ಸೇರಿ ಕಾರ್ಗಿಲ್‌ ಆರಂಭಿಸಿರುವ ‘ಸೃಷ್ಟಿ’ ಯೋಜನೆಗಾಗಿ ಈ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಈ ಯೋಜನೆಯ ಮೂಲಕ ಪುನರುತ್ಪಾದಕ ಕೃಷಿ, ಮಣ್ಣಿನ ರಕ್ಷಣೆ, ಇಂಗಾಲದ ಕಡಿತ ಮತ್ತು ನೀರಿನ ಗುಣಮಟ್ಟ ಹೆಚ್ಚಳ ಮತ್ತು ಬಳಕೆಗೆ ಸಂಬಂಧಿಸಿದಂತೆ ಸುಮಾರು 10 ಸಾವಿರ ರೈತರಿಗೆ ತರಬೇತಿ ನೀಡಲಾಗುತ್ತದೆ. ಮುಂದಿನ 4 ವರ್ಷಗಳಲ್ಲಿ ಇದನ್ನು ಕೈಗೊಳ್ಳಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

Latest Videos

undefined

ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ

ಈ ಯೋಜನೆಯನ್ನು ಅಮೆರಿಕದ ಕೃಷಿ ಸಚಿವ ರೋನಾಲ್ಡ್‌.ಪಿ.ವೆರ್ಡ್‌ನಾಕ್‌ ಅವರ ನೇತೃತ್ವದಲ್ಲಿ ಘೋಷಿಸಲಾಯಿತು. ಇವುಗಳ ಜೊತೆಗೆ ಈ ಯೋಜನೆ ನೀರಿನ ಸಂರಕ್ಷಣೆ, ಹಣಕಾಸಿನ ನಿರ್ವಹಣೆ ಮತ್ತು ಮಾರುಕಟ್ಟೆಸಂಯೋಜನೆ, ಕೃಷಿ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ.

click me!