ನಾಗಸಂದ್ರ ಮಾದಾವರ (ಬಿಐಇಸಿ) ವರೆಗಿನ ಸಿಗ್ನಲಿಂಗ್ ತಪಾಸಣೆ ಯಶಸ್ವಿಯಾದ ಬಳಿಕ ಮೆಟ್ರೋ ರೈಲು ಸುರಕ್ಷತಾ ಅಯುಕ್ತರ ತಂಡದಿಂದ ಅಂತಿಮ ಪರೀಕ್ಷೆ ನಡೆಯಲಿದೆ. ಬಳಿಕ ವಿಸ್ತರಣೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇದರಿಂದ ಪ್ರಸ್ತುತ 30.32 ಕಿ.ಮೀ. ಇರುವ ಹಸಿರು ಮಾರ್ಗ ವಿಸ್ತರಣೆಯಿಂದ 34 ಕಿ.ಮೀ.ಗೆ ವಿಸ್ತರಣೆ ಆಗಲಿದೆ.
ಬೆಂಗಳೂರು(ಆ.13): ನಮ್ಮ ಮೆಟ್ರೋ ಹಸಿರು ಮಾರ್ಗ ವಿಸ್ತರಣೆಯ ನಾಗಸಂದ್ರ-ಮಾದಾವರ (ಬಿಐಇಸಿ) ವರೆಗಿನ ರೀಚ್-3ರ ವಿಸ್ತ್ರತ ಮಾರ್ಗದಲ್ಲಿ (3.7 ಕಿ.ಮೀ.) ಸಿಗ್ನಲಿಂಗ್ ಪರೀಕ್ಷೆ ಆ.13ರಿಂದ ಆ.15ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣ ನಡುವೆ ರೈಲು ಸಂಚಾರದ ಪ್ರಾರಂಭ ಹಾಗೂ ಕೊನೆಯ ರೈಲು ಸೇವೆ ವೇಳೆಯಲ್ಲಿ ಬದಲಾವಣೆ ಮಾಡಲಾಗಿದೆ.
ಆ.13ರಂದು ಕೊನೆಯ ರೈಲು ರಾತ್ರಿ 11ಕ್ಕೆ ಬದಲಾಗಿ 10ಕ್ಕೆ ಇರಲಿದೆ. ಆ. 14ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10ಕ್ಕೆ ಇರಲಿದೆ. ಆ.15ರಂದು ಬೆಳಗ್ಗೆ 5ರ ಬದಲು 6 ಕ್ಕೆ ಪ್ರಾರಂಭವಾಗಲಿದೆ.
ನಮ್ಮ ಮೆಟ್ರೋ 12 ವರ್ಷದ ಬಳಿಕ ದಾಖಲೆಯ ರೈಡರ್‌ಶಿಪ್; ಒಂದೇ ದಿನ 8.26 ಲಕ್ಷ ಪ್ರಯಾಣಿಕರ ಸಂಚಾರ
ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14ರಂದು ಕೊನೆಯ ರೈಲು ಸೇವೆಯು ರಾತ್ರಿ 11.5 ಗಂಟೆಯ ಬದಲಾಗಿ 10 ಕ್ಕೆ ಕೊನೆಗೊಳ್ಳಲಿದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಶುರುವಾಗಲಿದೆ.
ಬೆಂಗಳೂರು ಮೆಟ್ರೋ ನಿಲ್ದಾಣಗಳು ಮಕ್ಕಳಿಗೆ ಮಾರಕ; ಆಟವಾಡುತ್ತಲೇ ಟ್ರ್ಯಾಕ್‌ಗೆ ಬಿದ್ದ 4 ವರ್ಷದ ಮಗು
ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆ.13, 14ರಂದು ರಾತ್ರಿ 11.12 ಗಂಟೆವರೆಗೆ ಕೊನೆಯ ರೈಲು ಸೇವೆ ಇರಲಿದೆ. ಆ.14, 15ರಂದು ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಪ್ರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೇರಳೆ ಮಾರ್ಗದ ಮೆಟ್ರೋ ಸೇವೆ ಎಂದಿನಂತೆ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
34 ಕಿ.ಮೀ.ಗೆ ವಿಸ್ತರಣೆ
ನಾಗಸಂದ್ರ ಮಾದಾವರ (ಬಿಐಇಸಿ) ವರೆಗಿನ ಸಿಗ್ನಲಿಂಗ್ ತಪಾಸಣೆ ಯಶಸ್ವಿಯಾದ ಬಳಿಕ ಮೆಟ್ರೋ ರೈಲು ಸುರಕ್ಷತಾ ಅಯುಕ್ತರ ತಂಡದಿಂದ ಅಂತಿಮ ಪರೀಕ್ಷೆ ನಡೆಯಲಿದೆ. ಬಳಿಕ ವಿಸ್ತರಣೆ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇದರಿಂದ ಪ್ರಸ್ತುತ 30.32 ಕಿ.ಮೀ. ಇರುವ ಹಸಿರು ಮಾರ್ಗ ವಿಸ್ತರಣೆಯಿಂದ 34 ಕಿ.ಮೀ.ಗೆ ವಿಸ್ತರಣೆ ಆಗಲಿದೆ. ಕಳೆದ ಐದು ವರ್ಷದಿಂದ ಈ ಮಾರ್ಗದ ಕಾಮಗಾರಿ ವಿಳಂಬವಾಗಿ ಸಾಗಿತ್ತು. ಇದೀಗ ಜನಸಂಚಾರಕ್ಕೆ ಅಂತಿಮ ಹಂತದ ತಪಾಸಣೆಗಳು ನಡೆಯಲಿವೆ.