ಅತಿ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವ ಗ್ರಾಹಕರಿಗೂ ಟಿವಿ ಲೋಡ್ ದಂಡದ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚು ವಿದ್ಯುತ್ ಬಳಕೆ ಮಾಡಿದವರೆಗೆ ಯಾವುದೇ ದಂಡ ವಿಧಿಸುತ್ತಿಲ್ಲ, ತನ್ಮೂಲಕ ಅಸಮರ್ಪಕ ಶುಲ್ಕವನ್ನು ಹೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು(ಆ.13): ಬೆಸ್ಕಾಂ ವ್ಯಾಪ್ತಿಯ ಗ್ರಾಹಕರ ವಿದ್ಯುತ್ ಬಿಲ್‌ನಲ್ಲಿ ಸಾಕಷ್ಟು ದೋಷಗಳು ಕಂಡು ಬರುತ್ತಿದ್ದು, ಅತಿ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವ ಗ್ರಾಹಕರಿಗೂ ಟಿವಿ ಲೋಡ್ ದಂಡದ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚು ವಿದ್ಯುತ್ ಬಳಕೆ ಮಾಡಿದವರೆಗೆ ಯಾವುದೇ ದಂಡ ವಿಧಿಸುತ್ತಿಲ್ಲ, ತನ್ಮೂಲಕ ಅಸಮರ್ಪಕ ಶುಲ್ಕವನ್ನು ಹೇರುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಉದಾ: ಕೇವಲ 19 ಯುನಿಟ್ ವಿದ್ಯುತ್ ಬಳಕೆ ಮಾಡಿರುವ ಗ್ರಾಹಕ ರೊಬ್ಬರಿಗೆ ಬರೋಬ್ಬರಿ (ಬಿಲ್ ಸಂಖ್ಯೆ 142306248010157) 2711 ತುಲ್ಕ ವಿಧಿಸಲಾಗಿದೆ. ಪ್ರತಿ ಯುನಿಟ್‌ಗೆ 5.90 ನಂತೆ ₹112 ಶುಲ್ಕ ಹಾಗೂ ನಿಗದಿತ ಶುಲ್ಕ ₹360 rode 2472 2 18.2. ಸಾಮರ್ಥ್ಯದ ಸಂಪರ್ಕ ಪಡೆದಿರುವ ಗ್ರಾಹಕ ಕೇವಲ 19 ಯುನಿಟ್ ಬಳಕೆ ಮಾಡಿದ್ದರೂ ಹೆವಿ ಲೋಡ್ ವಂಡದ ಹೆಸರಿನಲ್ಲಿ ₹225 ದಂಡ ವಿಧಿಸಲಾಗಿದೆ.
ನಾವು ಮನೆಯಲ್ಲಿ ವಾಸವಿರುವುದೇ ಇಲ್ಲ. ನಿಗದಿತ ಶುಲ್ಕಕ್ಕಿಂತ ವಿದ್ಯುತ್ ಶುಲ್ಕವೇ ಕಡಿಮೆ ಬರುತ್ತವೆ. ಹೀಗಿರುವಾಗ ಹವಿ ಲೋಡ್ ದಂಡ ವಿಧಿಸಿದರೆ ಹೇಗೆ ಎಂದು ಬ್ಯಾಟರಾಯನಪುರ (ಡಬ್ಲ್ಯು6) ವ್ಯಾಪ್ತಿಯ ಬೆಸ್ಕಾಂ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಟ್ರಾನ್ಸ್ ಫಾಮ್೯ ಏರಿ ಕುಳಿತ ಆಸಾಮಿ; ಬೆಸ್ಕಾಂಗೆ ತಲೆನೋವಾದ ಹುಚ್ಚರು!
ಇನ್ನು ಅದೇ ಕಟ್ಟಡದಲ್ಲಿರುವ ಮತ್ತೊಬ್ಬ ಗ್ರಾಹಕರಿಗೆ (142306248010160) 190 ಕೆ.ವಿ. ಬದಲಿಗೆ 5.8 ಕೆ.ವಿಯಷ್ಟು ಲೋಡ್ ಬಳಕೆ ಮಾಡಿದ್ದಾರೆ ಎಂದು ಹೇಳಿ 495 ದಂಡ ವಿಧಿಸಲಾಗಿದೆ. ಹೀಗಾಗಿ 190 ಯುನಿಟ್‌ನಲ್ಲಿ ಗ್ರಹಜ್ಯೋತಿ ಆಡಿ 186 ಯುನಿಟ್‌ಗಳ ಶುಲ್ಕ ಮನ್ನಾ ಆಗಿದ್ದರೂ, ಕ521 ತರಬೇಕಾಗಿ ಬಂದಿದೆ. 'ಈ ಮೊದಲು ಎಂದೂ ಈ ರೀತಿ ಶುಲ್ಕ ಬಂದಿಲ್ಲ, ನಾವು ಯಾವುದೇ ಹೊಸ ಎಲೆಕ್ನಿಕ್ ಸಾಧನವನ್ನೂ ಖರೀದಿಸಿಲ್ಲ. ಹೀಗಿದ್ದರೂ ಕಳೆದ ಮೂರು ತಿಂಗಳಿಂದ ಈಚೆಗೆ ಈ ಸಮಸ್ಯೆ ಬರುತ್ತಿದೆ' ಎಂದು ಗ್ರಾಹಕರು ಆರೋಪಿಸಿದ್ದಾರೆ.
ಹೆಚ್ಚು ಬಳಕೆ ಮಾಡಿದವರಿಗೆ ದಂಡವಿಲ್ಲ:
ಇನ್ನು ಇದೇ ಕಟ್ಟಡದಲ್ಲಿ ಒಬ್ಬ ಗ್ರಾಹಕರು 236 ಯುನಿಟ್ ಬಳಕೆ ಮಾಡಿದ್ದಾರೆ. 2.47 ಕೆ.ವಿ. ಎಂದು ದಾಖಲಿಸಿ 1,932 ಶುಲ್ಕ ವಿಧಿಸಲಾಗಿದೆ. ಯಾವುದೇ ದಂಡ ವಿಧಿಸಿಲ್ಲ. 'ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಡೆವಿ ಲೋಡ್ ದಂಡ ವಿಧಿಸುತ್ತಿಲ್ಲ, ವಿದ್ಯುತ್ತನ್ನೇ ಬಳಸದವರಿಗೆ ಹವಿ ಲೋಡ್ ಹೆಸರಿನಲ್ಲಿ ದಂಡ ವಿಧಿಸಲಾಗುತ್ತಿದೆ' ಎಂದು ಗ್ರಾಹಕರು ಆರೋಪಿಸಿದ್ದಾರೆ.
ಏನಿದು ಹೆವಿ ಲೋಡ್ ದಂಡ?
ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಿದ್ದರೆ ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ವಿಧಿಸುವುದು ಸಾಮಾನ್ಯ. ಜತೆಗೆ ವಿದ್ಯುತ್ ಸಂಪರ್ಕ ಪಡೆಯುವಾಗ ಸಂಪರ್ಕ ಪಡೆದಿರುತ್ತಾರೋ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಾಗ ಜೆವಿ ಲೋಡ್ ದಂಡವನ್ನೂ ವಿಧಿಸಲಾಗುತ್ತದೆ. ಆದರೆ, 3 ಕೆ.ವಿ. ವೋಲ್ವೇಜ್ ಸಾಮರ್ಥದ ವಿದ್ಯುತ್ ಸಂಪರ್ಕ ಪಡೆದಿದ್ದರೂ ಕೇವಲ 19 ಯುನಿಟ್ ಬಳಕೆಗೆ ಹೆಚ್ಚುವರಿ ಲೋಡ್ ಹೆಸರಿನಲ್ಲಿ ದಂಡ ವಿಧಿಸಲಾಗಿದೆ. ಇಂತಹ ದೋಷಗಳು ಹಲವು ಕಡೆ ಮರುಕಳಿಸುತ್ತಿವೆ ಎಂದು ದೂರಲಾಗಿದೆ.
Chitradurga: ಕೋಟೆನಾಡಿನ ಬೆಸ್ಕಾಂ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕರೆಂಟ್ ಶಾಕ್!
ಬೆಸ್ಕಾಂ ಹೇಳುವುದೇನು?
ಗ್ರಾಹಕರು ಏಕ ಕಾಲದಲ್ಲಿ ಬಹು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದರಿಂದ ಮಂಜೂರಾದ ವೋಲ್ವೇಜ್ ಅನ್ನು ಮೀರಿದ್ದಕ್ಕಾಗಿ ದಂಡವನ್ನು ವಿಧಿಸಲಾಗುತ್ತದೆ. ಕುಟುಂಬಗಳಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಇದಕ್ಕೆ ಕಾರಣ ಆಗಿ ರಬಹುದು. ಜತೆಗೆ 10 ವರ್ಷಕ್ಕಿಂತ ಹಳೆಯ ಮೀಟರ್ಗಳಿಂದಲೂ ಸಮಸ್ಯೆ ಆಗಿರ ಬಹುದು. ಹೀಗಾಗಿ ಹೊಸ ಮೀಟರ್ ಅಳವಡಿಕೆ ಮಾಡಿಕೊಳ್ಳಲು ಹಾಗೂ ಹೆಚ್ಚು ವೋಲೈಟ್ ಸಾಮರ್ಥಕ್ಕೆ ಅಸ್ಟೇಟ್ ಆಗಲು ಸಲಹೆ ನೀಡುತ್ತೇವೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, 3 ಕಿ.ವ್ಯಾಟ್ ಸಾಮರ್ಥದ ಸಂಪರ್ಕ ಹೊಂದಿರುವ ಮನೆಯಲ್ಲಿ ಕೇವಲ 19 ಯುನಿಟ್ ಬಳಕೆ ಮಾಡಿದ್ದರೂ ದಂಡ ಹವಿ ಲೋಡ್ ದಂಡ ವಿಧಿಸಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ದಂಡ ವಿಧಿಸುವುದು ಯಾಕೆ?
ಬೆಸ್ಕಾಂ ಸಾಮಾನ್ಯವಾಗಿ ಮಂಜೂರಾದ ವೋಲ್ವೇಜ್ ಅನ್ನು ವರಿಗಣಿಸಿ ತನ್ನ ಬೇಡಿಕೆಯನ್ನು ನಿರ್ಧರಿಸುತ್ತದೆ. ಹೆಚ್ಚುವರಿ ವಿದ್ಯುತ್ ಬಳಕೆಯಿಂದ ಪೂರೈಕೆ ಸಮಸ್ಯೆ ಮತ್ತು ಲೋಡ್ ಶೆಡ್ಡಿಂಗ್ ಕಾರಣವಾಗಬಹುದು. ಹಾಗಾಗಿ ಇಂತಹ ತೊಂದರೆ ಹಾಗೂ ಇದರಿಂದ ಆಗುವ ನಷ್ಟ ಸರಿದೂಗಿಸಲು ದಂಡ ವಿಧಿಸಲಾಗುತ್ತದೆ. ಇದು ವಿಶೇಷವಾಗಿ ಪಿಕ್ ಸಮಯದಲ್ಲಿ ಹೆಚ್ಚು ವಿದ್ಯುತ್