ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ ಅಪಘಾತ, ಬೆಚ್ಚಿ ಬೀಳಿಸುತ್ತೆ ಸಿಸಿಟಿವಿ ವಿಡಿಯೋ..!

By Girish Goudar  |  First Published Aug 13, 2024, 10:12 AM IST

ಬಿಎಂಟಿಸಿ ವೋಲ್ವೋ ಬಸ್ ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡುತ್ತಿತ್ತು. ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಬಿಎಂಟಿಸಿ ಚಾಲಕ ರಾಜ ಕುಮಾರ್ ನಾಲ್ಕು ಟೂ ವೀಲರ್, ನಾಲ್ಕು ಕಾರುಗಳಿಗೆ ಗುದ್ದಿಸಿದ್ದರು.


ಬೆಂಗಳೂರು(ಆ.13):  ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ ಅಪಘಾತ ಸಂಭವಿಸಿದ ಘಟನೆ ನಿನ್ನೆ(ಸೋಮವಾರ) ಬೆಳಿಗ್ಗೆ 9-25 ಕ್ಕೆ ಹೆಬ್ಬಾಳ ಫ್ಲೈ ಓವರ್ ಮೇಲೆ ನಡೆದಿದೆ. ಸರಣಿ ಅಪಘಾತದ ಸಿಸಿ ಟಿವಿ ವಿಡಿಯೋ ಇದೀಗ ಲಭ್ಯವಾಗಿದೆ. 

ಬಿಎಂಟಿಸಿ ವೋಲ್ವೋ ಬಸ್ ಆಕ್ಸಿಡೆಂಟ್ ವಿಡಿಯೋ ಬೆಚ್ಚಿ ಬೀಳಿಸುತ್ತದೆ. ಹೌದು, ಬಸ್ ಗುದಿದ್ದರಿಂದ ನಡುರೋಡಲ್ಲಿ ವಾಹನ ಸವಾರರು ಚಿರಾಡಿ ಕೂಗಾಡಿದ್ದಾರೆ. ಚೂರು ಹೆಚ್ಚು ಕಮ್ಮಿ ಆಗಿದ್ರೆ ಹತ್ತಾರು ವಾಹನ ಸವಾರರ ಪ್ರಾಣ ಹೋಗುತ್ತಿತ್ತು. 

Tap to resize

Latest Videos

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಕಸದ ಲಾರಿ ಡಿಕ್ಕಿ ಹೊಡೆದು ವೃದ್ಧೆ ಸಾವು

ಬಿಎಂಟಿಸಿ ವೋಲ್ವೋ ಬಸ್ ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ಸಂಚಾರ ಮಾಡುತ್ತಿತ್ತು. ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಬಿಎಂಟಿಸಿ ಚಾಲಕ ರಾಜ ಕುಮಾರ್ ನಾಲ್ಕು ಟೂ ವೀಲರ್, ನಾಲ್ಕು ಕಾರುಗಳಿಗೆ ಗುದ್ದಿಸಿದ್ದರು. ಬಿಎಂಟಿಸಿ ವೋಲ್ವೋ ಬಸ್ ನಂ- KA57F-1794 ಇದಾಗಿದೆ. ಘಟನೆಯಲ್ಲಿ ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. 
 

click me!