ಮಾ.3 ತನಕ ರೈಲು ಸಂಚಾರದಲ್ಲಿ ವ್ಯತ್ಯಯ, ಎಲ್ಲೆಲ್ಲಿ..?

Kannadaprabha News   | Asianet News
Published : Feb 29, 2020, 10:54 AM IST
ಮಾ.3 ತನಕ ರೈಲು ಸಂಚಾರದಲ್ಲಿ ವ್ಯತ್ಯಯ, ಎಲ್ಲೆಲ್ಲಿ..?

ಸಾರಾಂಶ

ಮಂಗಳೂರು-ಮಂಗಳೂರು ಜಂಕ್ಷನ್‌ ಮತ್ತು ಪಣಂಬೂರು ಹಾಗೂ ಮಂಗಳೂರು ಜಂಕ್ಷನ್‌ ಮತ್ತು ಜೋಕಟ್ಟೆನಡುವೆ ಹಳಿ ದ್ವಿಗುಣ ಸಂಬಂಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರದಲ್ಲಿ ಮಾ.3 ತನಕ ವ್ಯತ್ಯಯವಾಗಲಿದೆ.  

ಮಂಗಳೂರು(ಫೆ.29): ಮಂಗಳೂರು-ಮಂಗಳೂರು ಜಂಕ್ಷನ್‌ ಮತ್ತು ಪಣಂಬೂರು ಹಾಗೂ ಮಂಗಳೂರು ಜಂಕ್ಷನ್‌ ಮತ್ತು ಜೋಕಟ್ಟೆನಡುವೆ ಹಳಿ ದ್ವಿಗುಣ ಸಂಬಂಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರದಲ್ಲಿ ಮಾ.3 ತನಕ ವ್ಯತ್ಯಯವಾಗಲಿದೆ.

ಮುಂಬಯಿ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್‌ ದಿನಂಪ್ರತಿ ಓಡುವ ಎಕ್ಸ್‌ಪ್ರೆಸ್ (ನಂ.12133) ಪ್ರಯಾಣ ಸುರತ್ಕಲ್‌ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಫೆ.28 ರಿಂದ ಮಾಚ್‌ರ್‍ 2 ತನಕ ರದ್ದುಗೊಳ್ಳಲಿದೆ.

ರಸ್ತೆ ಇಲ್ಲದೆ ಶವ ಹೊತ್ತು ಸಾಗಿದ ಸ್ಥಳೀಯರು..!

ಮಂಗಳೂರು ಜಂಕ್ಷನ್‌- ಸಿಎಸ್‌ಎಂಟಿ ದಿನಂಪ್ರತಿ ಸಂಚರಿಸುವ ಎಕ್ಸ್‌ಪ್ರೆಸ್ (ನಂ.12134) ಫೆ.29 ರಿಂದ ಮಾಚ್‌ರ್‍ 3 ತನಕ ಮಂಗಳೂರು ಜಂಕ್ಷನ್‌ ಮತ್ತು ಸುರತ್ಕಲ್‌ ನಡುವಿನ ಸಂಚಾರ ರದ್ದುಪಡಿಸಲಾಗಿದ್ದು, ಸುರತ್ಕಲ್‌ ನಿಲ್ದಾಣದಿಂದ ನಿಗದಿತ ವೇಳಾಪಟ್ಟಿಯಂತೆ ಹೊರಡಲಿದೆ.

ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್‌ ಟರ್ಮಿನಸ್‌ ದಿನಂಪ್ರತಿ ಸಂಚರಿಸುವ ಮತ್ಸೃಗಂಧ ಎಕ್ಸ್‌ಪ್ರೆಸ್‌ (ನಂ.12620) ಮಂಗಳೂರು ಸೆಂಟ್ರಲ್‌ ಮತ್ತು ಸುರತ್ಕಲ್‌ ನಡುವಿನ ಸಂಚಾರ ಭಾಗಶಃ ರದ್ದುಪಡಿಸಲಾಗಿದ್ದು, ಸುರತ್ಕಲ್‌ನಿಂದ ನಿಗದಿತ ವೇಳಾಪಟ್ಟಿಯಂತೆ ಹೊರಡಲಿದೆ.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ಮಡ್ಗಾಂವ್‌- ಮಂಗಳೂರು ಸೆಂಟ್ರಲ್- ಮಡ್ಗಾಂವ್‌ (ನಂ.70105/ 70106) ಡೆಮು ಪ್ಯಾಸೆಂಜರ್‌ ತೋಕೂರುನಲ್ಲಿ ಮಾ.3 ರಂದು ತಡೆಹಿಡಿಯಲ್ಪಡಲಿದ್ದು, ತೋಕೂರು ಮತ್ತು ಮಂಗಳೂರು ಸೆಂಟ್ರಲ್‌ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. 70106 ನಂ. ರೈಲು ಮಂಗಳೂರು ಸೆಂಟ್ರಲ್‌ ಮತ್ತು ತೋಕೂರು ನಡುವಿನ ಸಂಚಾರ ರದ್ದುಗೊಳ್ಳಲಿದ್ದು, ತೋಕೂರಿನಿಂದ ನಿಗದಿತ ವೇಳಾಪಟ್ಟಿಯಂತೆ ಹೊರಡಲಿದೆ.

PREV
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!