ಮಹಾಂತ ಮಠಕ್ಕೆ ಮೊದಲ ಬಾರಿ ಮಾತೆಗೆ ಪಟ್ಟಾಧಿಕಾರ| ಮಹಾಂತಮ್ಮ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕಾರ| ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೇಗುದ್ದಿ ಗ್ರಾಮದಲ್ಲಿರುವ ಮಹಾಂತ ಮಠ|
ಜಮಖಂಡಿ(ಫೆ.29): ಮೊದಲ ಬಾರಿಗೆ ಮಾತೆಯೊಬ್ಬರು ಇಳಕಲ್ಲ-ಚಿತ್ತರಗಿಯ ಸಂಸ್ಥಾನದ ಶಾಖಾ ಮಠವಾದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೇಗುದ್ದಿ ಮಹಾಂತಮಠದ ಪಟ್ಟಾಧಿಕಾರ ಸ್ವೀಕಾರ ಮಾಡಿದ್ದಾರೆ. ನೀಲ ವಿಜಯ ಮಹಾಂತಮ್ಮ ಅವರು ಶುಕ್ರವಾರ ಮಠದ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಆಶೀರ್ವಚನ ನೀಡಿದ ಮರೇಗುದ್ದಿ ಮಹಾಂತ ಮಠದ ಗುರುಮಹಾಂತ ಶ್ರೀಗಳು, ನೀಲ ವಿಜಯ ಮಹಾಂತಮ್ಮ ಎಂದು ನಾಮಕಾರಣ ಮಾಡಿ, ಮೊದಲ ಬಾರಿ ಮಾತೆಯೊಬ್ಬರನ್ನು ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ನುಡಿದರು.
ಮಹಾಂತ ಮಠಕ್ಕೆ ಮಹಿಳಾ ಪೀಠಾಧಿಕಾರಿ: ನೀಲ್ಲಮ್ಮ ತಾಯಿಯ ಷಷ್ಠಬ್ಧಿ ಸಮಾರಂಭದ ಫೋಟೋಸ್
ಇಳಕಲ್ಲ- ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಆಶೀರ್ವವನ ನೀಡಿ, ಮಠದ ಆಸ್ತಿಗೆ ಉತ್ತರಾಧಿಕಾರಿಯಾಗದೇ ತತ್ವಗಳಿಗೆ ಉತ್ತರಾಧಿಕಾರಿಯಾಗಬೇಕು. ಪರಂಪರಾಗತವಾಗಿ ಬಂದ ವಿರಕ್ತ ಪೀಠಗಳಿಗೆ ಮಹಿಳಾ ಸ್ವಾಮಿಗಳು ಬಂದಿದ್ದಿಲ್ಲ. ಇದು ಈಗ ಬಂದಿದೆ. ಬಸವಣ್ಣ ನೀಡಿದ ಸಾಕಾರ ಸ್ವರೂಪ ನೀಡಿದೆ. ತತ್ವ ಸಾಕಾರ ರೂಪದಲ್ಲಿ ಬರಬೇಕಾದರೆ ಬಹುಕಷ್ಟ. ಅದನ್ನು ಶ್ರೀಮಠ ಅನುಷ್ಠಾನಗೊಳಿಸಿ, ಸಮಾನತೆ ಸಾರಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಶಿರೂರ ಮಹಾಂತತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಸಿದ್ದಯ್ಯಾನ ಕೋಟೆ ವಿಜಯ ಮಹಾಂತೇಶ್ವರ ಮಠದ ಬಸವಲಿಂಗ ಸ್ವಾಮೀಜಿ, ಲಿಂಗಸಗೂರು ವಿಜಯಮಹಾಂತೇಶ್ವರ ಶಾಖಾಮಠದ ಸಿದ್ದಲಿಂಗ ಶ್ರೀ, ಬೆಳಗಾವಿ ಅನುಭಾವ ಕೇಂದ್ರದ ವಾಗ್ದೇವಿತಾಯಿ, ಬೀದರ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಜನವಾಡದ ಮಲ್ಲಿಕಾರ್ಜುನ ದೇವರು ಪಟ್ಟಾಧಿಕಾರಕ್ಕೆ ಸಾಕ್ಷಿಯಾದರು.