ಕೋವಿಡ್-19 ಪ್ರಕರಣಗಳಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಮೈಸೂರಿನ ರೈಲ್ವೆ ಆಸ್ಪತ್ರೆ ಸಿದ್ಧವಾಗಿವೆ. ಕೊರೋನಾ ವೈರಸ್ ಪ್ರಕರಣ ಹೆಚ್ಚಾದರೆ ರೈಲ್ವೆ ಬೋಗಿಗಳನ್ನು ಐಸೊಲೇಷನ್ ವಾರ್ಡ್ ಮಾಡುವ ಬಗ್ಗೆ ಹಿಂದೆಯೇ ಚಿಂತಿಸಲಾಗಿತ್ತು.
ಮೈಸೂರು(ಏ.08): ಕೋವಿಡ್-19 ಪ್ರಕರಣಗಳಿಂದ ಉಂಟಾಗುವ ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಮೈಸೂರಿನ ರೈಲ್ವೆ ಆಸ್ಪತ್ರೆ ಸಿದ್ಧವಾಗಿವೆ. ಕೊರೋನಾ ವೈರಸ್ ಪ್ರಕರಣ ಹೆಚ್ಚಾದರೆ ರೈಲ್ವೆ ಬೋಗಿಗಳನ್ನು ಐಸೊಲೇಷನ್ ವಾರ್ಡ್ ಮಾಡುವ ಬಗ್ಗೆ ಹಿಂದೆಯೇ ಚಿಂತಿಸಲಾಗಿತ್ತು.
ಮೈಸೂರಿನ ವಿಭಾಗೀಯ ರೈಲ್ವೆ ಆಸ್ಪತ್ರೆಯಲ್ಲಿ 101 ಹಾಸಿಗೆಗಳಲ್ಲಿ 74 ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಗಿದ್ದು, 6 ಎಚ್‌ಡಿಯು ಹಾಸಿಗೆಗಳು, 6 ಮಾನಿಟರ್, 2 ವೆಂಟಿಲೇಟರ್ ಸೇರಿದಂತೆ ತುರ್ತು ಪರಿಸ್ಥಿತಿಗಳಿಗೆ ಇತರ ಅಗತ್ಯ ಉಪಕರಣಗಳೊಂದಿಗೆ ಸಿದ್ಧವಾಗಿದೆ.
ಲಾಕ್ ಡೌನ್‌ನಿಂದ ರಕ್ತ ಅಭಾವ, ಫಸ್ಟ್ ಸಚಿವರಿಂದಲೇ ಶುರುವಾಯ್ತು ರಕ್ತದಾನ
ಮೈಸೂರು ರೈಲ್ವೆ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ಹೊಂದಿರುವ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ. ಅಲ್ಲದೆ, ಎಲ್ಲ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಕೋವಿಡ್ ರೋಗಿಗಳನ್ನು ನಿಭಾಯಿಸಲು, ವೆಂಟಿಲೇಟರ್‌ಗಳನ್ನು ನಿರ್ವಹಿಸಲು ತರಬೇತಿ ನೀಡಲಾಗುತ್ತದೆ.