ಧಾರವಾಡ: ರಂಜಾನ್ ದಿನದಂದೇ ಘೋರ ದುರಂತ, ಭಾವಿ ಪತ್ನಿ ನೋಡಿ ಬರುವಾಗ ಬೈಕ್ ಅಪಘಾತ, ಯುವಕರಿಬ್ಬರು ದುರ್ಮರಣ

Published : Mar 22, 2026, 10:16 AM IST
Tragedy on Ramadan Two Youths Killed in Dharwad Road Accident Near Kelageri Cross

ಸಾರಾಂಶ

Kelageri Cross accident today:ಧಾರವಾಡದ ಕೆಲಗೇರಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ರಂಜಾನ್ ಹಬ್ಬದ ನಿಮಿತ್ತ ಭಾವಿ ಪತ್ನಿಯನ್ನು ಭೇಟಿಯಾಗಿ ಮರಳುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಧಾರವಾಡ (ಮಾ.22): ರಂಜಾನ್ ಹಬ್ಬದ ಸಂಭ್ರಮದ ನಡುವೆಯೇ ಧಾರವಾಡದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಭಾವಿ ಪತ್ನಿಯನ್ನು ನೋಡಿ ಮರಳಿ ಬರುವಾಗ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಕೆಲಗೇರಿ ಕ್ರಾಸ್ ಬಳಿ ಭೀಕರ ಅಪಘಾತ

ನಿನ್ನೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಮಾಮಸಾಬ ಹೆಬ್ಬಳ್ಳಿ (21) ತನ್ನ ಸ್ನೇಹಿತ ಮೊಹಮ್ಮದ ಯೂನಸ್ ಮುಲ್ಲನವರ (17) ಜೊತೆಗೆ ಭಾವಿ ಪತ್ನಿಯ ಮನೆಗೆ ಹಬ್ಬದ ಶುಭಾಶಯ (ಸಲಾಮಿ) ತಿಳಿಸಲು ಹೋಗಿದ್ದರು. ಅಲ್ಲಿಂದ ಮರಳಿ ಬರುವಾಗ ಧಾರವಾಡದ ಕೆಲಗೇರಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಇವರ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ! 10ಕ್ಕೂ ಹೆಚ್ಚು ಜನರಿಗೆ ಗಾಯ

ಡಿಕ್ಕಿಯೊಡೆದ ರಭಸಕ್ಕೆ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ ಇಬ್ಬರೂ ಯುವಕರು ಧಾರವಾಡದ ಲಕಮಾಪುರ ನಿವಾಸಿಗಳು ಎಂದು ಗುರುತಿಸಲಾಗಿದೆ.

ಸದ್ಯ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಮತ್ತೊಂದು ಕಾಮಕಾಂಡ, ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಕೇಸ್ ಬೆಳಕಿಗೆ
ನ್ಯಾಯಾಂಗದ ತೀರ್ಪು ಮನುಷ್ಯನ ಬುದ್ಧಿಯೇ ನಿರ್ಧರಿಸಬೇಕು: ಎಐ ಬಳಕೆ ಬಗ್ಗೆ ಸಿಜೆಐ ಎಚ್ಚರಿಕೆ