'ಕೈ'ಗೆ ಬಿಜೆಪಿ ಬೆಂಬಲ: ಕಾಂಗ್ರೆಸ್‌ಗೆ ಬಯಸದೇ ಬಂದ ಭಾಗ್ಯ..!

Kannadaprabha News   | Asianet News
Published : Nov 05, 2020, 09:58 AM ISTUpdated : Nov 05, 2020, 09:59 AM IST
'ಕೈ'ಗೆ ಬಿಜೆಪಿ ಬೆಂಬಲ: ಕಾಂಗ್ರೆಸ್‌ಗೆ ಬಯಸದೇ ಬಂದ ಭಾಗ್ಯ..!

ಸಾರಾಂಶ

ಕಾಂಗ್ರೆಸ್‌ಗೆ ಬಿಜೆಪಿ ಬೇಷರತ್‌ ಬೆಂಬಲ| ಬಿಜೆಪಿ ಜತೆ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅರ್ಥವಲ್ಲ| ತದ್ವಿರುದ್ಧ ತತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಎಂದೆಂದಿಗೂ ಬಿಜೆಪಿ ಜತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ: ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ| 

ಹುಬ್ಬಳ್ಳಿ(ನ.05): ನವಲಗುಂದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಪೂರ್ವದಲ್ಲಿ ನವಲಗುಂದದ ಹಿರಿಯ ಕಾಂಗ್ರೆಸಿಗರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದರು ಎಂಬ ಮಾಹಿತಿಯಿದೆ. ಇದರ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು ವರದಿ ಸಿದ್ಧಪಡಿಸಿ ನಾಲ್ಕೈದು ದಿನಗಳಲ್ಲಿ ಕೆಪಿಸಿಸಿಗೆ ಕಳುಹಿಸಲಾಗುವುದು ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದ್ದಾರೆ. ಬಿಜೆಪಿ ನಮಗೆ ಬೇಷರತ್ತಾಗಿ ಬೆಂಬಲ ಸೂಚಿಸಿದೆ. ಹಾಗಂತ ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನವಲಗುಂದ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬೇಷರತ್ತಾಗಿ ಬೆಂಬಲ ನೀಡಿದೆ. ಕಾಂಗ್ರೆಸ್‌ಗೆ ಬಯಸದೇ ಬಂದ ಭಾಗ್ಯವಿದು ಎಂದರು. ಹೀಗೆಂದ ಮಾತ್ರಕ್ಕೆ ಬಿಜೆಪಿ ಜತೆ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅರ್ಥವಲ್ಲ. ತದ್ವಿರುದ್ಧ ತತ್ವ ಸಿದ್ಧಾಂತಗಳ ಹಿನ್ನೆಲೆಯಲ್ಲಿ ಎಂದೆಂದಿಗೂ ಬಿಜೆಪಿ ಜತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಆದರೆ, ನವಲಗುಂದದ ಕೆಲವು ಹಿರಿಯ ಕಾಂಗ್ರೆಸಿಗರು ಆ ರೀತಿಯ ಪ್ರಯತ್ನ ಮಾಡಿದ್ದರು ಎಂದರು.

ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಕರ್ನಾಟಕದ ಈ ರೇಲ್ವೆ ನಿಲ್ದಾಣ: ಇದು ಕನ್ನಡಗರ ಹೆಮ್ಮೆ

ಜೆಡಿಎಸ್‌ನೊಂದಿಗೆ ಕೈ ಜೋಡಿಸುವಂತೆ ಕೆಪಿಸಿಸಿ ಮೂಲಕ ಸಲಹೆ ನೀಡಲಾಗಿತ್ತು. ಆದರೆ, ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಜೆಡಿಎಸ್‌ ಸಹವಾಸ ಬೇಡವೇ ಬೇಡ ಎನ್ನುತ್ತಿದ್ದರು ಎಂದರು. ಇದರ ನಡುವೆಯೇ ಅಲ್ಲಿನ ಪಕ್ಷದ ಕೆಲವರು ಬಿಜೆಪಿ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ವಿವರವಾದ ವರದಿ ತರಿಸಿಕೊಂಡು ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಕೆಪಿಸಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.

ಜೆಡಿಎಸ್‌ ಮಾತ್ರ ದ್ವಂದ್ವ ನೀತಿ ಅನುಸರಿಸಿದೆ. ಅಳ್ನಾವರದಲ್ಲಿ ಬರೀ 3 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಬೆಂಬಲಿಸಿ ಆ ಪಕ್ಷದವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡಿದೆ ಎಂದು ಜೆಡಿಎಸ್‌ ವಿರುದ್ಧ ಕಿಡಿಕಾರಿದ ಅವರು, ಜೆಡಿಎಸ್‌ ನಿಲುವೇನು ಎಂದು ಪ್ರಶ್ನಿಸಿದರು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಇತರರು ಇದ್ದರು.
 

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ