ನಿಂದಿಸಿದ ಸವಾರನಿಗೆ ಬಿತ್ತು ಟ್ರಾಫಿಕ್ ಪೊಲೀಸರಿಂದ ಗೂಸಾ

By Suvarna News  |  First Published Dec 6, 2019, 9:24 AM IST

ಟ್ರಾಫಿಕ್ ಪೊಲೀಸ್ ಹಾಗೂ ವಾಹನ ಸವಾರನ ನಡುವೆ ಗಲಾಟೆ ನಡೆದಿದ್ದು ಈ ವೇಳೆ ವಾಃನ ಸವಾರನ ಮೇಲೆ ಪೊಲೀಸರು ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. 


ದಾವಣಗೆರೆ (ಡಿ.06): ಟ್ರಾಫಿಕ್ ಪೊಲೀಸ್ ಹಾಗೂ ಬೈಕ್ ಸವಾರನ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೇ ಬೈಕ್ ಸವಾರನನ್ನು ಅಟ್ಟಾಡಿಸಿ ಹೊಡೆದ ಪ್ರಕರಣ ದಾವಣಗರೆಯಲ್ಲಿ ನಡೆದಿದೆ. 

ದಾವಣಗೆರೆಯ ವಿದ್ಯಾನಗರದ ಬಿಐಟಿ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಯುವಕನೋರ್ವ ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ನಿಂದಿಸಿದ್ದಾನೆ. 

Tap to resize

Latest Videos

ಯುವಕನ ಮಾತಿನಿಂದ ಕೋಪಗೊಂಡ ಟ್ರಾಫಿಕ್ ಪೊಲೀಸ್ ಪೇದೆ ಬೈಕ್ ಸವಾರನ ಮೇಲೆ ಏಕಾ ಏಕಿ ಹಲ್ಲೆ ನಡೆಸಿದ್ದಾರೆ. ಕಾಲಿನಿಂದ ಒದ್ದಿದ್ದಲ್ಲದೇ ಆತನನ್ನು ಥಳಿಸಿದ್ದು, ಈ ವೇಳೆ ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ಮೊತ್ತ ಹೆಚ್ಚಾದ ದಿನಗಳಿಂದ ಟ್ರಾಫಿಕ್ ಪೊಲೀಸರು ಹಾಗೂ ವಾಹನ ಸವಾರರ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆಯೂ ಅನೇಕ ಈ ರೀತಿಯ ಪ್ರಕರಣಗಳು ನಡೆದಿವೆ. 

click me!