ದೀಪಾವಳಿ ಹಬ್ಬ ಮುಗಿಸಿಕೊಂಡು ವಾಪಸ್ ಬೆಂಗ್ಳೂರಿಗೆ ಬರ್ತಿದ್ದವರಿಗೆ ಟ್ರಾಫಿಕ್ ಶಾಕ್: ವಾಹನ ಸವಾರರ ಪರದಾಟ

By Girish Goudar  |  First Published Nov 3, 2024, 11:23 PM IST

ಬೆಂಗಳೂರಿಗೆ ತಲುಪಲು ವಾಹನ ಸವಾರರು ಹರಸಹಾಸ ಪಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದು ನಾಲ್ಕು ದಿನ ರಜೆ ಮೇಲೆ ತಮ್ಮೂರುಗಳಿಗೆ ಜನರು ಹೋಗಿದ್ದರು. ಇದೀಗ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಬರ್ತಿದ್ದ ಪ್ರಯಾಣಿಕರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. 

ಬೆಂಗಳೂರು(ನ.03):  ದೀಪಾವಳಿ ಹಬ್ಬ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಬರ್ತಿದ್ದವರಿಗೆ ಟ್ರಾಫಿಕ್ ಶಾಕ್ ತಟ್ಟಿದೆ. ಹೌದು, ಕಳೆದ ಎರಡ್ಮೂರು ಗಂಟೆಗಳಿಂದ ಟ್ರಾಫಿಕ್‌ನಲ್ಲಿ ನೂರಾರು ವಾಹನ ಸವಾರರು ಸಿಲುಕಿದ್ದಾರೆ.  

ಚಿತ್ರದುರ್ಗದಿಂದ ತುಮಕೂರಿಗೆ ಬರುವ ಮಾರ್ಗ ಮಧ್ಯೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ಸ್ಲೋ ಮೂವಿಂಗ್ ಆಗುತ್ತಿವೆ. ಟ್ರಾಫಿಕ್‌ನಲ್ಲಿ ಸಿಲುಕಿ ವಾಹನ ಸವಾರರ ಪರದಾಟ ನಡೆಸುತ್ತಿದ್ದಾರೆ.  ತುಮಕೂರಿನ ಶಿರಾ ಬಳಿ ಹಾಗೂ ಊರುಕೆರೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ತಿಳಿದು ಬಂದಿದೆ. 

Latest Videos

undefined

ಬೆಂಗಳೂರು ಟ್ರಾಫಿಕ್‌ನಲ್ಲಿ ಆಫೀಸ್‌ನಿಂದ ಮನೆ ತಲುಪಲು 4 ಗಂಟೆ, ಹಿಂದಿನ ಎಲ್ಲಾ ದಾಖಲೆ ಉಡೀಸ್!

ಬೆಂಗಳೂರಿಗೆ ತಲುಪಲು ವಾಹನ ಸವಾರರು ಹರಸಹಾಸ ಪಡುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದು ನಾಲ್ಕು ದಿನ ರಜೆ ಮೇಲೆ ತಮ್ಮೂರುಗಳಿಗೆ ಜನರು ಹೋಗಿದ್ದರು. ಇದೀಗ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ಬರ್ತಿದ್ದ ಪ್ರಯಾಣಿಕರಿಗೆ ಟ್ರಾಫಿಕ್ ಬಿಸಿ ತಟ್ಟಿದೆ. 

click me!